new Covid variant IHU : ಫ್ರಾನ್ಸ್​​ನಲ್ಲಿ ಮತ್ತೊಂದು ಹೊಸ ರೂಪಾಂತರಿ ಪತ್ತೆ; 12 ಮಂದಿಗೆ ಸೋಂಕು

new Covid variant IHU :ಇಡೀ ವಿಶ್ವದಲ್ಲಿ ಕೋವಿಡ್​ ಓಮಿಕ್ರಾನ್​ ರೂಪಾಂತರಿಯ ಆತಂಕ ಮನೆ ಮಾಡಿದೆ. ಹೊಸದಾಗಿ ರೂಪುಗೊಂಡ ಆಫ್ರಿಕನ್​ ಮೂಲದ ಈ ರೂಪಾಂತರಿಯವ ವಿರುದ್ಧ ಹೋರಾಡಲು ವಿವಿಧ ರಾಷ್ಟ್ರಗಳು ತಮ್ಮದೇ ಆತ ಸಿದ್ಧತೆಗಳನ್ನು ನಡೆಸುತ್ತಿವೆ. ಈ ಎಲ್ಲದರ ನಡುವೆ ಆಘಾತಕಾರಿ ಮಾಹಿತಿ ಎಂಬಂತೆ ಫ್ರೆಂಚ್​ ಸಂಶೋಧಕರು ಕ್ಯಾಮರೂನಿಯನ್​ ಮೂಲದ್ದು ಎಂದು ಶಂಕಿಸಲಾದ ಹೊಸ ಕೋವಿಡ್​ ರೂಪಾಂತರಿಯನ್ನು ಪತ್ತೆ ಮಾಡಿದ್ದಾರೆ. ಈ ಹೊಸ ರೂಪಾಂತರಿಗೆ ತಾತ್ಕಾಲಿಕವಾಗಿ ಐಹೆಚ್​ಯು ಎಂದು ಹೆಸರಿಡಲಾಗಿದೆ.


B.1.640.2 ಹೆಸರಿನ ಈ ವಂಶಾವಳಿಯ ಹೊಸ ರೂಪಾಂತರವು ಈಗಾಗಲೇ 12 ಮಂದಿಗೆ ಸೋಂಕನ್ನು ತಗುಲಿಸಿದೆ ಎನ್ನಲಾಗಿದೆ. ಇದು ಓಮಿಕ್ರಾನ್​ಗಿಂತ ಹೆಚ್ಚು ಅಂದರೆ 46 ರೂಪಾಂತರಿಗಳು ಹಾಗೂ 37 ಡಿಕ್ಟೇಷನ್​​ಗಳನ್ನು ಹೊಂದಿದೆ. ಆಗ್ನೇಯ ಫ್ರಾನ್ಸ್​​ನಲ್ಲಿ ಇದೇ ಭೌಗೋಳಿಕ ವಿಭಾಗದಲ್ಲಿ ವಾಸಿಸುವ 12 ಕೊರೊನಾ ಪಾಸಿಟಿವ್​ ರೋಗಿಗಳಲ್ಲಿ ಮ್ಯೂಟೆಷನ್​ಗಳು ವಿಭಿನ್ನವಾಗಿ ಕಂಡು ಬಂದಿದೆ ಫಿಲಿಪ್​ ಕೋಲ್ಸನ್​ ಹೇಳಿದ್ದಾರೆ.


ಈ 12 ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಈ ಹೊಸ ರೂಪಾಂತರಿಯ ವೈರಲಾಜಿಕಲ್​, ಎಪಿಡಮಿಯೋಲಾಜಿಕಲ್​ ಅಥವಾ ವೈದ್ಯಕೀಯ ವೈಶಿಷ್ಟ್ಯಗಳ ಕುರಿತು ಈಗಲೇ ಏನನ್ನೂ ವಿಶ್ಲೇಷಿಸಲು ಸಾಧ್ಯವಿಲ್ಲ ಎಂದು ಕೋಲ್ಸನ್​ ಇದೇ ವೇಳೆ ಹೇಳಿದರು.


ಅಧ್ಯಯನದ ಪ್ರಕಾರ ಈ ಹೊಸ ರೂಪಾಂತರಿಯ ಸೋಂಕಿಗೆ ಒಳಗಾದ ಮೊದಲ ರೋಗಿಯು ಲಸಿಕೆ ಸ್ವೀಕರಿಸಿದವರಾಗಿದ್ದು ಮಧ್ಯ ಆಫ್ರಿಕಾದಿಂದ ಕ್ಯಾಮರೂನ್​​ಗೆ ಪ್ರವಾಸ ಕೈಗೊಂಡು ಬಳಿಕ ಫ್ರಾನ್ಸ್​ಗೆ ಮರಳಿದ್ದರು ಎನ್ನಲಾಗಿದೆ. ಹೀಗಾಗಿ ಓಮಿಕ್ರಾನ್​​ನಂತೆಯೇ ಈ ಹೊಸ ರೂಪಾಂತರಿ ಕೂಡ ಆಫ್ರಿಕಾದ ಜೊತೆ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದೆ.


ಕ್ಯಾಮರೂನ್​ನಿಂದ ಫ್ರಾನ್ಸ್​ಗೆ ಮರಳಿದ ಮೂರು ದಿನಗಳ ಬಳಿಕ ಅವರಿಗೆ ಸೌಮ್ಯವಾದ ಉಸಿರಾಟದ ತೊಂದರೆ ಆರಂಭವಾಯಿತು. ಅಲ್ಲದೇ ಇನ್ನಿತರ ರೋಗ ಲಕ್ಷಣಗಳು ಕ್ರಮೇಣವಾಗಿ ಒಂದೊಂದಾಗಿಯೇ ಆರಂಭವಾದವು. 7 ಮಂದಿ ಕೊರೊನಾ ಸೋಂಕಿತರಿಂದ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ರವಾನೆ ಮಾಡಲಾಯಿತು. ಇಲ್ಲಿ ಹೊಸ ರೂಪಾಂತರಿಯು ಮೊದಲ ಬಾರಿಗೆ ವರದಿಯಾಗಿದೆ ಎನ್ನಲಾಗಿದೆ.

France detects new Covid variant IHU, 12 infected

ಇದನ್ನು ಓದಿ : daily covid cases : ಬರೋಬ್ಬರಿ 4 ತಿಂಗಳ ಬಳಿಕ ದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್​ ಕೇಸ್​ ವರದಿ

ಇದನ್ನೂ ಓದಿ : corona 3rd wave : ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ: ಆತಂಕಕಾರಿ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ್

Comments are closed.