ಸೋಮವಾರ, ಏಪ್ರಿಲ್ 28, 2025
HomeCinemaDeepa Powlen Jessica : ಪ್ರೇಮ ವೈಫಲ್ಯ ತಮಿಳು ಖ್ಯಾತ ನಟಿ ದೀಪಾ ಆತ್ಮಹತ್ಯೆ

Deepa Powlen Jessica : ಪ್ರೇಮ ವೈಫಲ್ಯ ತಮಿಳು ಖ್ಯಾತ ನಟಿ ದೀಪಾ ಆತ್ಮಹತ್ಯೆ

- Advertisement -

ಚೆನ್ನೈ: (Deepa Powlen Jessica) ಪ್ರೀತಿ ಫಲಿಸದ ಕಾರಣ ನಟಿಯೋರ್ವಳು ನೇಣು ಬಿಗಿದುಕೊಂಡಿದ್ದಾರೆ. ಖ್ಯಾತ ತಮಿಳು ನಟಿ ನಟಿ ದೀಪಾ ಅಲಿಯಾಸ್ ಪೌಲಿನ್ ಜೆಸ್ಸಿಕಾ (29 ವರ್ಷ) ( Tamil Actress Deepa Powlen Jessica suicide) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನೈನ ಕೊಯಂ ಬೇಡು, ನೆಲ್ಕುನ್ರಾಮ್ ಮತ್ತು ನಮಲೈ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ನ್ಯೂಸ್‌ ನೆಕ್ಸ್ಟ್‌ ತಮಿಳು ವರದಿ ಮಾಡಿದೆ.

ದೀಪಾ ನಿನ್ನೆ ತನ್ನ ಅಣ್ಣನಿಗೆ ಕರೆ ಮಾಡಿ ತನಗೆ ಇನ್ನು ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಅಣ್ಣಾ ದೊರೈ ಅವರು ಪೊಲೀಸರಿಗೆ ಈ ಕುರಿತು ಮಾಹಿತಿಯನ್ನು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಮನೆ ಬಾಗಿಲು ಹಾಕಲಾಗಿತ್ತು. ಆದರೆ ಬಾಗಿಲು ಒಡೆದು ನೋಡಿದಾಗ ನಟಿ ದೀಪಾ ಪೌಲ್‌ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ದೀಪಾ ಅಲಿಯಾಸ್ ಪೌಲಿನ್ ಜೆಸ್ಸಿಕಾ ಚೆನ್ನೈನ ಕೊಯಂ ಬೇಡು, ನೆಲ್ಕುನ್ರಾಮ್ ಮತ್ತು ನಮಲೈ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಮಿಳು ಚಿತ್ರರಂಗದ ವ್ಯಕ್ತಿಯೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಆಕೆಯ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದಾಗಿ ಕೆಲವು ದಿನಗಳಿಂದಲೂ ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಆಕೆ ಆತ್ಮಹತ್ಯೆಗೆ ಮುನ್ನ ಬರೆದಿರುವ ಪತ್ರದಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ. ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದೇನೆ. ಇದರಿಂದ ಬದುಕಲು ಸಾಧ್ಯವಾಗುತ್ತಿಲ್ಲ. ನಾನು ಪ್ರೀತಿಯಲ್ಲಿ ಬಿದ್ದೆ. ನಾನು ಪ್ರೀತಿಸಿದ ವ್ಯಕ್ತಿ ನನ್ನ ಪ್ರೀತಿಯನ್ನು ನಿರಾಕರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದ ಮೂಲದ ದೀಪಾ ಚೆನ್ನೈನಲ್ಲಿ ಹಲವು ವರ್ಷಗಳಿಂದಲೂ ವಾಸವಾಗಿದ್ದರು. ಮಹಿವರ್ಮನ್‌ ನಿರ್ದೇಶನದ ನಾಸರ್‌ ನಟನೆಯ ವೈಟಾ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಅಲ್ಲದೇ ತುಪ್ಪರಿವಾಲನ್‌ ಸಿನಿಮಾದಲ್ಲಿ ನಟ ವಿಶಾಲ್‌ ಜೊತೆ ನಟಿಸಿದ್ದರು. ಇದೀಗ ನಟಿ ದೀಪಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಯಂಬೇಡು ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Mouni Roy dance : ಗ್ಲಾಸ್ ಹಿಡಿದು ಹೆಜ್ಜೆ ಹಾಕಿದ ಗಲೀ ಗಲೀ ಹುಡುಗಿ: ಮಾಲ್ಢೀವ್ಸ್ ನಲ್ಲಿ ಮೌನಿ ರಾಯ್ ಹವಾ

ಇದನ್ನೂ ಓದಿ : ಹಾಟ್ ಅವತಾರದಲ್ಲಿ ಅಮೃತ ವರ್ಷಿಣಿ ಹುಡುಗಿ : ರಜಿನಿ ಪೊಟೋಶೂಟ್ ನೋಡೋಕೆ ಮರಿಬೇಡಿ

famous Tamil Actress Deepa Powlen Jessica Committed Suicide Chennai

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular