India Vs Australia T20 : ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 2 ಸೆಮಿಫೈನಲ್; ಮಂಗಳವಾರ ಶುರು ಮೊದಲ ಸೆಮೀಸ್

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಿನ್ನೂ ಒಂದು ತಿಂಗಳು ಬಾಕಿಯಿದೆ. ಆದರೆ ವಿಶ್ವಕಪ್’ಗೆ ಭಾರತ (Indian Cricket Team) ಸೆಮಿಫೈನಲ್ ಮಂಗಳವಾರವೇ ಶುರುವಾಗಲಿದೆ. ವಿಶ್ವಕಪ್ ಟೂರ್ನಿ ನಡೆಯಲಿರುವುದು. ಮುಂದಿನ ತಿಂಗಳು. ಹಾಗಾದ್ರೆ ಸೆಮಿಫೈನಲ್ ಮಂಗಳವಾರ ಶುರುವಾಗಲು ಹೇಗೆ ಸಾಧ್ಯ ? ಇದು ವಿಶ್ವಕಪ್ ಸೆಮಿಫೈನಲ್ ಅಲ್ಲ. ವಿಶ್ವಕಪ್ ಸಿದ್ಧತೆಗೆ ಭಾರತಕ್ಕೆ ಸಿಕ್ಕಿರುವ ಮೊದಲ ಅವಕಾಶ. ಅದೇ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ (India Vs Australia T20). ವಿಶ್ವಕಪ್ ಟೂರ್ನಿಯನ್ನು ಫೈನಲ್ ಎಂದು ಪರಿಗಣಿಸಿದ್ರೆ, ಆಸೀಸ್ ವಿರುದ್ಧದ ಸರಣಿ ಸೆಮಿಫೈನಲ್.

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಸರಣಿಯ ಮೊದಲ ಪಂದ್ಯ ಮಂಗಳವಾರ (ಸೆಪ್ಟೆಂಬರ್ 20) ಪಂಜಾಬ್’ನ ಮೊಹಾಲಿಯಲ್ಲಿ ನಡೆಯಲಿದೆ.

ಭಾರತ Vs ಆಸ್ಟ್ರೇಲಿಯಾ ಟಿ20 ಸರಣಿಯ ವೇಳಾಪಟ್ಟಿ (India Vs Australia T20)

20 ಸೆಪ್ಟೆಂಬರ್: ಮೊದಲ ಟಿ20, ಮೊಹಾಲಿ
23 ಸೆಪ್ಟೆಂಬರ್: ಎರಡನೇ ಟಿ20, ನಾಗ್ಪುರ
25 ಸೆಪ್ಟೆಂಬರ್: ಮೊದಲ ಟಿ20, ಹೈದರಾಬಾದ್

ಟಿ20 ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾ ಬಲಿಷ್ಠ ತಂಡವಾಗಿದ್ದು, ಕಾಂಗರೂಗಳ ವಿರುದ್ಧದ ಸರಣಿ ವಿಶ್ವಕಪ್ ಸಿದ್ಧತೆಗೆ ಭಾರತಕ್ಕೆ ಸಿಕ್ಕಿರುವ ಉತ್ತಮ ಅವಕಾಶ. ಅದಲ್ಲೂ ವಿಶೇಷವಾಗಿ ಗಾಯದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಮಧ್ಯಮ ವೇಗಿ ಹರ್ಷಲ್ ಪಟೇಲ್ ಅವರಿಗೆ ಇದು ಕಂಬ್ಯಾಕ್ ಸರಣಿ. ಹೀಗಾಗಿ ಎಲ್ಲರ ಕಣ್ಣು ಬುಮ್ರಾ ಮತ್ತು ಹರ್ಷಲ್ ಪಟೇಲ್ ಮೇಲೆ ನೆಟ್ಟಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹರ್.

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಂತರ ಭಾರತ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ ((India Vs South Africa T20). ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 28ರಂದು ಕೇರಳದ ತಿರುವನಂತಪುರಂನಲ್ಲಿ ನಡೆಯಲಿದೆ.

ಭಾರತ Vs ದಕ್ಷಿಣ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ (India Vs Australia T20)
28 ಸೆಪ್ಟೆಂಬರ್: ಮೊದಲ ಟಿ20, ತಿರುವನಂತಪುರಂ
02 ಅಕ್ಟೋಬರ್: ಎರಡನೇ ಟಿ20, ಗುವಾಹಟಿ
04 ಅಕ್ಟೋಬರ್: ಮೂರನೇ ಟಿ20, ಇಂದೋರ್

ಆಸೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳನ್ನು ಗೆದ್ದು ವಿಶ್ವಕಪ್ ಟೂರ್ನಿಗೆ ಆತ್ಮವಿಶ್ವಾಸದಿಂದ ಎಂಟ್ರಿ ಕೊಡಲು ರೋಹಿತ್ ಶರ್ಮಾ ಬಳಗ ಮುಂದಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ.

ಇದನ್ನೂ ಓದಿ : Sanju Samson: ಸಂಜು ಸ್ಯಾಮ್ಸನ್ ಬಾಯಿಗೆ ತುಪ್ಪ ಸವರಿದ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

ಇದನ್ನೂ ಓದಿ : Sanju Samson Breaks Silence : ಟಿ20 ವಿಶ್ವಕಪ್’ನಲ್ಲಿ ಸಿಗದ ಸ್ಥಾನ; ಮೌನ ಮುರಿದ ಸಂಜು, ರಾಹುಲ್, ಪಂತ್ ಬಗ್ಗೆ ಸ್ಯಾಮ್ಸನ್ ಸ್ಫೋಟಕ ಮಾತು

India Vs Australia T20 2 semi-finals for Indian Cricket Team before T20 World Cup

Comments are closed.