Oscars Award:ಆಸ್ಕರ್‌ಗೆ ಆರ್‌ಆರ್‌ ಆರ್‌ : ಎಸ್‌ಎಸ್‌ ರಾಜಮೌಳಿ ಹೇಳಿದ್ದೇನು ಗೊತ್ತಾ ?

ಭಾರತ ಸಿನಿಮಾ ಇತಿಹಾಸದಲ್ಲಿಯೇ ಯಾವ ಸಿನಿಮಾಕ್ಕೂ ಆಸ್ಕರ್‌ ಪ್ರಶಸ್ತಿ(Oscars Award) ದಕ್ಕಿಲ್ಲ. ಆದ್ರೀಗ ಎಸ್‌ಎಸ್‌ ರಾಜಮೌಳಿ (SS Rajamouli) ನಿರ್ದೇಶನದ ಆರ್‌ಆರ್‌ಆರ್‌ (RRR)ಸಿನಿಮಾ ಈ ಬಾರಿ (Oscars Award) ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ರಾಜಮೌಳಿ ಹೋದ ಕಡೆಯಲ್ಲೆಲ್ಲಾ ಸಿನಿಮಾದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಅಷ್ಟಕ್ಕೂ ಆರ್‌ಆರ್‌ಆರ್‌ ಆಸ್ಕರ್‌ಗೆ ನಾಮನಿರ್ದೇಶನವಾಗುತ್ತಾ ? ಸಿನಿಮಾದ ಬಗ್ಗೆ ರಾಜಮೌಳಿ ಹೇಳಿದ್ದೇನು ಗೊತ್ತಾ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.‌

(Oscars Award) ಆಸ್ಕರ್‌ ಪ್ರಶಸ್ತಿಯನ್ನು “ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ” ವಿಭಾಗಗಳಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾಗಳಿಗೆ ನೀಡಲಾಗುತ್ತದೆ. ಸುಮಾರು 21 ವರ್ಷಗಳ ಹಿಂದೆ ಬಾಲಿವುಡ್‌ನ ಅಮಿರ್‌ ಖಾನ್‌ ನಟನೆಯ ಲಗಾನ್‌ ಸಿನಿಮಾ ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿತ್ತು. ಆದರೆ ಪ್ರಶಸ್ತಿ ಮಾತ್ರ ದಕ್ಕಿರಲಿಲ್ಲ. ಆದ್ರೀಗ ಈ ಸಿನಿಮಾದ ನಂತರದಲ್ಲಿ ಯಾವುದೇ ಸಿನಿಮಾಗಳು ಕೂಡ ಆಸ್ಕರ್‌ಗೆ ನಾಮಿನೇಟ್‌ ಆಗಿಲ್ಲ. ಆದ್ರೆ ಈ ಬಾರಿ (SS Rajamouli)ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಅಂತರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗುವ ಸಾಧ್ಯತೆಯಿದೆ.

“ಆರ್‌ ಆರ್‌ ಆರ್‌” ಚಿತ್ರವನ್ನು ನೋಡಿದ ಭಾರತೀಯ ಸಿನಿ ಪ್ರೇಕ್ಷಕರು, ಮಾತ್ರವಲ್ಲ ವಿದೇಶದ ಸಿನಿಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ನಿರ್ದೇಶಕ ರಾಜಮೌಳಿಯವರು ಈ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬರುವ ಎರಡು ಪಾತ್ರಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆದಿದ್ದರು. ಸಿನಿಮಾ ಅದ್ಬುತವಾಗಿ ಮೂಡಿ ಬಂದಿದ್ದು, ವಿಶ್ವದಾದ್ಯಂತ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿತ್ತು. ಹಾಗಾಗಿ ಈ ಸಿನಿಮಾ ಆಸ್ಕರ್‌ ಗೆ ನಾಮಿನೇಟ್‌ ಆಗುವ ಎಲ್ಲಾ ಸಾಧ್ಯತೆಯಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.

ಇದನ್ನೂ ಓದಿ : ಸಾಹಸಸಿಂಹ ಡಾ.ವಿಷ್ಣುವರ್ಧನ್‌ 72ನೇ ಹುಟ್ಟುಹಬ್ಬ : ಅಭಿಮಾನಿಗಳಿಂದ ಸಂಭ್ರಮಾಚರಣೆ

ಇದನ್ನೂ ಓದಿ : ಪ್ರೇಮ ವೈಫಲ್ಯ ತಮಿಳು ಖ್ಯಾತ ನಟಿ ದೀಪಾ ಆತ್ಮಹತ್ಯೆ

ಇದನ್ನೂ ಓದಿ : ಹಾಟ್ ಅವತಾರದಲ್ಲಿ ಅಮೃತ ವರ್ಷಿಣಿ ಹುಡುಗಿ : ರಜಿನಿ ಪೊಟೋಶೂಟ್ ನೋಡೋಕೆ ಮರಿಬೇಡಿ

ಇತ್ತೀಚೆಗಷ್ಟೇ ನಡೆದ ಟೊರೊಂಟೊ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿದ ರಾಜಮೌಳಿಯವರು “ಆರ್‌ಆರ್‌ಆರ್‌” (RRR)ಸಿನಿಮಾಕ್ಕೆ ಆಸ್ಕರ್‌ ಸಿಗಬೇಕೆಂದು ಪ್ರತಿಪಾದಿಸಿದ್ದಾರೆ. “ಆಸ್ಕರ್‌ ಗೆದ್ದರೆ ಈ ಸಿನಿಮಾ ತಂಡಕ್ಕೆ ಹಾಗೂ ನಮ್ಮ ಭಾರತದ ಚಿತ್ರರಂಗಕ್ಕೆ ದೊಡ್ಡಮಟ್ಟದ ಬೂಸ್ಟ್‌ ಸಿಗುತ್ತದೆ. ಹಾಗೆ ಆಸ್ಕರ್‌ ಗೆಲ್ಲಲಿ ಅಥವಾ ಸೋಲಲಿ ಅದು ನನ್ನ ಮುಂದಿನ ಸಿನಿಮಾದ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಹೇಗೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದೀನೋ ಹಾಗೆಯೇ ಮಾಡುತ್ತೇನೆ” ಎಂದು ಹೇಳಿದ್ದಾರೆ.

RRR for Oscar: Do you know what SS Rajamouli said?

Comments are closed.