ಭಾನುವಾರ, ಏಪ್ರಿಲ್ 27, 2025
HomeCinemaಗದ್ದೆಯಲ್ಲಿ ಮೂಡಿತು ಅಭಿಮಾನ: ಭತ್ತದ ಸಸಿಯಲ್ಲಿ ಪುನೀತ್ ರಾಜ್ ಕುಮಾರ್ ಗೆ ಹಾರೈಕೆ

ಗದ್ದೆಯಲ್ಲಿ ಮೂಡಿತು ಅಭಿಮಾನ: ಭತ್ತದ ಸಸಿಯಲ್ಲಿ ಪುನೀತ್ ರಾಜ್ ಕುಮಾರ್ ಗೆ ಹಾರೈಕೆ

- Advertisement -

ಪುನೀತ್ ರಾಜ್ ಕುಮಾರ್ ಆಕಸ್ಮಿಕವೆಂಬಂತೆ ನಮ್ಮನ್ನು ಅಗಲಿ ಮೂರು ತಿಂಗಳು ಕಳೆದಿದೆ.‌ಆದರೂ ದೊಡ್ಮನೆಯ ರಾಜಕುಮಾರ್ (Puneeth Raj Kumar) ಕರುನಾಡಿ‌ ಮನೆ ಮನದಲ್ಲಿ ಅಜರಾಮರರಾಗಿ ದ್ದಾರೆ. ಪುನೀತ್ ನಿಧನವಾದಂದಿನಿಂದ ಇಂದಿನವರೆಗೂ ಪುನೀತ್ ರಾಜ್ ಕುಮಾರ್ ವಿವಿಧ ರೀತಿಯಲ್ಲಿ ಸಂತಾಪ, ಸಂಸ್ಮರಣೆ, ಗೌರವ ಸಲ್ಲಿಕೆಯಾಗು ತ್ತಲೇ‌ ಇದೆ. ಶಾಲೆಯಿಂದ ಆರಂಭಿಸಿ ಕಚೇರಿಗಳ ವರೆಗೆ ಎಲ್ಲೆಡೆಯೂ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಕೆಯಾಗುತ್ತಲೇ ಇದೆ. ಈ ಮಧ್ಯೆ ಮಂಡ್ಯದ ರೈತನೊಬ್ಬ ಪುನೀತ್ ಗೆ ವಿಶಿಷ್ಟ ವಿಭಿನ್ನ ಹಾಗೂ ಸದಾ ನೆನಪಿನಲ್ಲಿರುವಂತ ಗೌರವ ಸಲ್ಲಿಸಿ ಕರುನಾಡಿನ ಗಮನ ಸೆಳೆದಿದ್ದಾರೆ.

ಮಂಡ್ಯ ತಾಲೂಕಿನ ಮೊತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಪುನೀತ್ ಅಭಿಮಾನಿಯಾಗಿದ್ದರು. ಆದರೆ ಪುನೀತ್ ನಿಧನದ ಸುದ್ದಿ ತಿಳಿದು ಕಾಳಪ್ಪ ರಾಜು, ತೀವ್ರವಾಗಿ ನೊಂದಿದ್ದರು. ಅಷ್ಟೇ ಅಲ್ಲ ಸಾಮಾಜಿಕ ಕೆಲಸದ ಮೂಲಕ ನಾಡಿನ ಮನೆ ಮಗನಂತಿದ್ದ ಪುನೀತ್ ರಾಜ್ ಕುಮಾರ್ ಗೆ ವಿಭಿನ್ನವಾಗಿ ಗೌರವ ಸಲ್ಲಿಸಲು ನಿರ್ಧರಿಸಿದ್ದಾರೆ. ಪುನೀತ್ ಗೆ ತಮ್ಮದೇ ಜಮೀನಿನಲ್ಲಿ ಗೌರವ ಸಲ್ಲಿಸಲು ತೀರ್ಮಾನಿಸಿದ ಕಾಳಪ್ಪ ರಾಜು, ತಮ್ಮ ಗದ್ದೆಯಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಎಂದು ಬರೆದು ಅದರ ಮೇಲೆ ಭತ್ತವನ್ನು ಬಿತ್ತಿದ್ದಾರೆ.

fans wishes to have good luck in paddy for Puneeth Raj Kumar 2

ಮೂರು ತಿಂಗಳ ಹಿಂದೆ ಬಿತ್ತಿದ ಭತ್ತಕ್ಕೆ ಕಾಳಪ್ಪ ರಾಜು ಶೃದ್ಧೆಯಿಂದ ನೀರುಣಿಸಿದ್ದು, ಅದರ ಫಲವಾಗಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಎಂಬ ಬರಹ ಅಚ್ಚ ಹಸಿರಾಗಿ ಮೂಡಿಬಂದಿದೆ. ಭತ್ತದ ಗದ್ದೆಯಲ್ಲಿ ಮೂಡಿ ಬಂದ ಈ ಪುನೀತ್ ಸ್ಮರಣೆಯ ದೃಶ್ಯ ಈಗ ಸೋಷಿಯಲ್‌ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದೆ. ರೈತನ ಪುನೀತ್ ಪ್ರೇಮ ಕ್ಕೆ ಸಾರ್ವಜನಿಕರು, ಪುನೀತ್ ಅಭಿಮಾನಿಗಳು ಶ್ಲಾಘಿಸಿದ್ದಾರೆ.

fans wishes to have good luck in paddy for Puneeth Raj Kumar 1

ಮಾತ್ರವಲ್ಲ ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ನೂರಾರು ಜನರು ಕಾಳಪ್ಪ ರಾಜು ಜಮೀನಿಗೆ ಭೇಟಿ ಕೊಡ್ತಿದ್ದು, ಈ ಪುನೀತ್ ಹೆಸರಿನ ಭತ್ತದ ಸಸಿಗಳ ಜೊತೆ ಪೋಟೋ ತೆಗೆಸಿಕೊಂಡು ಅಗಲಿದ ನಟನನ್ನು ನೆನೆದು ಭಾವುಕರಾಗ್ತಿದ್ದಾರೆ. ಸದ್ಯ ನಿಧಾನಕ್ಕೆ ಚೇತರಿಸಿಕೊಳ್ತಿರೋ ಅಪ್ಪು ಅಭಿಮಾನಿಗಳಿಗೆ ಮಾರ್ಚ್ 17 ರಂದು ಬಿಗ್ ಗಿಫ್ಟ್ ಸಿಗಲಿದ್ದು ಅಪ್ಪು ನಟನೆಯ ಜೇಮ್ಸ್ ಸಿನಿಮಾ ರಿಲೀಸ್ ಆಗಲಿದೆ. ಪುನೀತ್ ರಾಜ್ ಕುಮಾರ್ ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿರೋ ಈ ಸಿನಿಮಾಕ್ಕೆ ಅಭಿಮಾನಿಗಳು ಕಾತುರತೆಯಿಂದ ಕಾಯ್ತಿದ್ದಾರೆ.

ಇದನ್ನೂ ಓದಿ : ಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್ ಕ್ವಿನ್ ಸಿನಿಮಾ

ಇದನ್ನೂ ಓದಿ : ಪತ್ನಿ ಶಿಲ್ಪಾ ಶೆಟ್ಟಿ ಕುಂದ್ರಾಗೆ 38.5 ಕೋಟಿ ರೂಪಾಯಿ ಆಸ್ತಿ ವರ್ಗಾಯಿಸಿದ ರಾಜ್​ ಕುಂದ್ರಾ

( fans wishes to have good luck in paddy for Puneeth Raj Kumar)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular