CD Case ಕ್ಲೀನ್ ಚೀಟ್ : ಸಚಿವ ಸ್ಥಾನಕ್ಕೆ ಮತ್ತೆ ಲಾಬಿ ಆರಂಭಿಸಿದ ರಮೇಶ್ ಜಾರಕಿಹೊಳಿ

ಬೆಂಗಳೂರು : ಕೊನೆಗೂ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಳಗಾವಿ ಸಾಹುಕಾರ ಸಿಡಿ ಪ್ರಕರಣ ಅಂತ್ಯಕಂಡಿದೆ. ನೀರಿಕ್ಷಿತ ಎಂಬಂತೆ ಪ್ರಕರಣದಲ್ಲಿ ಸೂಕ್ತ ಸಾಕ್ಷಿಗಳ ಕೊರತೆ ಕಾರಣಕ್ಕೆ ತನಿಖಾಧಿಕಾರಿಗಳು ಬಿ ರಿಪೋರ್ಟ್ (Ramesh Jarkiholi CD Case) ಸಲ್ಲಿಸಿದ್ದಾರೆ. ಇನ್ನು ಸಿಡಿ ಕೇಸ್ ನಿಂದ ಬಿಗಿ ರಿಲೀಫ್ ಸಿಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಮೈಕೊಡವಿಕೊಂಡು ಎದ್ದು ನಿಂತಿದ್ದಾರೆ. ಯಾವ ಕಾರಣಕ್ಕೆ ಸಚಿವ ಸ್ಥಾನ ಕಳೆದುಕೊಂಡರೋ ಅದೇ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರೋದರಿಂದ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸಂಪುಟ ಸೇರಲೇಬೇಕೆಂಬ ಹಟಕ್ಕೆ‌ ಬಿದ್ದಿದ್ದಾರೆ.

ಹೀಗಾಗಿ ಸಿಡಿ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಗುತ್ತಿದ್ದಂತೆ ತಮ್ಮ ರಾಜಕೀಯದಾಟ ಆರಂಭಿಸಿರುವ ರಮೇಶ್ ಜಾರಕಿಹೊಳಿ ಸೋಮವಾರ ದೆಹಲಿಗೆ ತೆರಳುವ ಸಿದ್ಧತೆ ಆರಂಭಿಸಿದ್ದಾರೆ. ಸದ್ಯ ಗೋವಾ ಪ್ರವಾಸದಲ್ಲಿರೋ ರಮೇಶ್ ಜಾರಕಿಹೊಳಿ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದು, ಅಂದೇ ದೆಹಲಿಗೆ ತೆರಳಲಿದ್ದಾರಂತೆ. ಸೋಮವಾರ ಈಗಾಗಲೇ ನಿಗದಿಯಾಗಿರು ವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ದೆಹಲಿಗೆ ತೆರಳುತ್ತಿದ್ದಾರೆ. ರಾಜ್ಯ ಬಜೆಟ್, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಹೈಕಮಾಂಡ್ ಭೇಟಿಗೆ ಬೊಮ್ಮಾಯಿ ತೆರಳುತ್ತಿದ್ದಾರೆ.

ಹೀಗಾಗಿ ಸಿಎಂ ದೆಹಲಿ ತೆರಳೋ ವೇಳೆಗೆ ತಾವು ದೆಹಲಿಗೆ ಹೋಗೋ ಪ್ಲ್ಯಾನ್ ನಲ್ಲಿರೋ ರಮೇಶ್ , ವರಿಷ್ಠರನ್ನು ಭೇಟಿ ಮಾಡಿ ತಮಗೆ ಸಚಿವ ಸ್ಥಾನ ಮರಳಿ ಕೊಡುವಂತೆ ಮನವಿ‌ ಮಾಡಲಿದ್ದಾರಂತೆ. ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಕ್ಷಕ್ಕೆ ಮುಜುಗರವಾಗಲಿದೆ ಎಂಬ ಕಾರಣ ನೀಡಿ ರಮೇಶ್ ಜಾರಕಿಹೊಳಿಯವರಿಂದ ಸಚಿವ ಸ್ಥಾನವನ್ನು ಕಿತ್ತುಕೊಳ್ಳ ಲಾಗಿತ್ತು. ಈಗ ಪ್ರಕರಣದಿಂದ ತಮಗೆ ರಿಲೀಫ್ ಸಿಕ್ಕಿರೋದರಿಂದ ಸಚಿವ ಸ್ಥಾನ ಬೇಕೇ ಬೇಕೆಂದು ಪಟ್ಟು ಹಿಡಿಯಲಿದ್ದಾರಂತೆ. ಈಗಾಗಲೇ ಬಿಜೆಪಿ ಪಾಳಯದಲ್ಲಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿಸುವ ಪ್ರಯತ್ನಗಳು ಆರಂಭಗೊಂಡಿದ್ದು, ಸ್ವತಃ ಹಿರಿಯ ಸಚಿವ ಕತ್ತಿ ಸೇರಿದಂತೆ ಹಲವರು ಈ ಪ್ರಯತ್ನದಲ್ಲಿದ್ದಾರಂತೆ.

ಹೀಗಾಗಿ ತಮ್ಮ ಸಾಮರ್ಥ್ಯ ಬಳಸಿ ಸಚಿವ ಸ್ಥಾನ ಪಡೆಯಲೇ ಬೇಕೆಂದು ಹೊರಟಿರುವ ರಮೇಶ್ ಜಾರಕಿಹೊಳಿ ಹೈಕಮಾಂಡ್ ಮೇಲೆ ಒತ್ತಡ ಹಾಕಿಸಲು ಗೋವಾದ ಮಾಜಿಸಿಎಂ ದೇವೇಂದ್ರ್ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದರು. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಜೊತೆಯೂ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ ತಮಗೆ ಸಚಿವ ಸ್ಥಾನ ದೊರಕಿಸುವಂತೆ ಫಡ್ನವಿಸ್ ಮೂಲಕ ಹೈಕಮಾಂಡ್ ಗೆ ಬೇಡಿಕೆ ಸಲ್ಲಿಸಿದ್ದಾರಂತೆ.‌ಫಡ್ನವೀಸ್ ಆರ್‌.ಎಸ್.ಎಸ್ ಹಾಗೂ ಸಂಘ ಪರಿವಾರದ ಜೊತೆ ನಿಟಕ ಸಂಪರ್ಕ ಹೊಂದಿದ್ದು, ಈ ಪ್ರಭಾವ ವನ್ನು ಬಳಸಿಕೊಳ್ಳುವ ಪ್ಲ್ಯಾನ್ ರಮೇಶ್ ರದ್ದು ಎನ್ನಲಾಗ್ತಿದೆ. ಒಟ್ಟಿನಲ್ಲಿ ಸಿಡಿ ಕಪಿಮುಷ್ಠಿಯಿಂದ ಹೊರಬಂದ ರಮೇಶ್ ರಾಜಕೀಯ ಮಹಾತ್ವಾಕಾಂಕ್ಷೆಯ ಜೊತೆ ಮತ್ತೆ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ : ಬಿಜೆಪಿಯಲ್ಲಿ ರೇಣುಕಾಚಾರ್ಯ ಹವಾ : ಡಿಕೆ ಸುರೇಶ್ ಗೆ ಟ್ವೀಟ್ ತಿರುಗೇಟಿಗೆ ಹೈಕಮಾಂಡ್ ಮೆಚ್ಚುಗೆ

ಇದನ್ನೂ ಓದಿ : 3ನೇ ಸಿಎಂ ಆಯ್ಕೆಗೆ ಸಜ್ಜಾದ ಬಿಜೆಪಿ : ಕಮಲ‌ ಪಾಳಯದಲ್ಲಿ ಶುರುವಾಯ್ತು ಹೊಸ ರಾಜಕೀಯ ಲೆಕ್ಕಾಚಾರ

(SIT files B Report in Ramesh Jarkiholi CD Case)

Comments are closed.