ಚಿತ್ರರಂಗದಲ್ಲಿ ಗಾಳಿ ಸುದ್ದಿಗಳು ಮಾಮೂಲು. ಇದೀಗ ಕೋಟಿಗೊಬ್ಬ 3′ ಸಿನಿಮಾದ ಕುರಿತು ಗಾಸಿಪ್ ಹರಿದಾಡುತ್ತಿದೆ ಅದೇ ಕೋಟಿಗೊಬ್ಬ 3′ ಸಿನಿಮಾ ಬಿಡುಗಡೆ ಆಗುವ ಮೋದಲೇ ಕೋಟ್ಯಾಂತರ ರೂಪಾಯಿ ಬ್ಯುಸಿನೆಸ್ ಮಾಡಿದೆ. ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾವು ಅಕ್ಟೋಬರ್ 14 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಬಿಡುಗಡೆ ಮುಂಚೆಯೇ 70 ಕೋಟಿ ಕಲೆಕ್ಷನ್ ಮಾಡಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಕುರಿತಾಗಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ, ಸಿನಿಮಾದ ಹಿಂದಿ ಹಕ್ಕು 21 ಕೋಟಿಗೆ ಸೂಪರ್‌ಕ್ಲಸ್ಟರ್ ಪ್ರೊಡಕ್ಷನ್‌ಗೆ ಮಾರಾಟವಾಗಿದೆ

ತೆಲುಗು ರಿಮೇಕ್ ಹಕ್ಕು 5 ಕೋಟಿಗೆ ಗುಡ್ ಸಿನಿಮಾ ಗ್ರೂಫ್ಸ್‌ಗೆ ಮಾರಾಟವಾಗಿದೆ. ಕನ್ನಡ ಮತ್ತು ತೆಲುಗು ಡಿಜಿಟಲ್ ಹಕ್ಕು ಅಮೆಜಾನ್ ಪ್ರೈಂಗೆ 10 ಕೋಟಿಗೆ ಮಾರಾಟವಾಗಿದೆ. ಕನ್ನಡ, ತೆಲುಗು ಆಡಿಯೋ ಹಕ್ಕು ಐದು ಕೋಟಿಗೆ ಮಾರಾಟವಾಗಿದೆ. ವಿದೇಶದಲ್ಲಿ ಪ್ರದರ್ಶನ ಮಾಡುವ ಹಕ್ಕು 2 ಕೋಟಿಗೆ ಮಾರಾಟವಾಗಿದೆ. ಹಿಂದಿ ಸ್ಯಾಟಲೈಟ್ ಹಕ್ಕು 10 ಕೋಟಿಗೆ ಮಾರಾಟವಾಗಿದೆ. ತೆಲುಗು ಸ್ಯಾಟಲೈಟ್ ಹಕ್ಕು ಇನ್ನೂ ಮಾರಾಟವಾಗಿಲ್ಲ ಎಂದು ಲೆಕ್ಕಾಚಾರ ನೀಡಲಾಗಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಒಟ್ಟು 70 ಕೋಟಿ ಹಣವನ್ನು ‘ಕೋಟಿಗೊಬ್ಬ 3’ ಗಳಿಸಿದೆ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ.

ಕೋಟಿಗೊಬ್ಬ 3′ ಸಿನಿಮಾವು ಬಿಡುಗಡೆಗೆ ಮುಂಚೆಯೇ ಕೋಟ್ಯಾಂತರ ಹಣಗಳಿಸಿದೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಕೋಟಿಗೊಬ್ಬ 3′ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೋಟಿಗೊಬ್ಬ 3′ ಸಿನಿಮಾದ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಅದು ನಿಜವಲ್ಲ ಎಂದಿದ್ದಾರೆ.

ನಾನು ಸಾಲ ಮಾಡಿ ಸಿನಿಮಾ ಮಾಡಿದ್ದೇನೆ, ಬಡ್ಡಿಗಳನ್ನು ಕಟ್ಟಲಾಗದೆ ಹೆಣಗುತ್ತಿದ್ದೇನೆ. ಎಲ್ಲಾ ಬಂಡವಾಳ ‘ಕೋಟಿಗೊಬ್ಬ 3’ ಸಿನಿಮಾದ ಮೇಲಿದ್ದು, ಸಿನಿಮಾ ಗೆದ್ದರಷ್ಟೆ ನನಗೆ ಉಳಿಗಾಲ ಎಂದಿದ್ದಾರೆ ಸೂರಪ್ಪ ಬಾಬು. ಸಿನಿಮಾವು ಕೋಟ್ಯಾಂತರ ರೂಪಾಯಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ ಎಂಬುದೆಲ್ಲ ಸುಳ್ಳು ಎಂದಿದ್ದಾರೆ.
(Fake news about ‘Kotigana 3’ before lease)