ಸೋಮವಾರ, ಏಪ್ರಿಲ್ 28, 2025
HomeCinemaMeghana Raj producer : ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ, ನಿರ್ಮಾಪಕಿಯಾದ್ರು ಮೇಘನಾ ರಾಜ್

Meghana Raj producer : ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ, ನಿರ್ಮಾಪಕಿಯಾದ್ರು ಮೇಘನಾ ರಾಜ್

- Advertisement -

ತಮ್ಮ ಬದುಕಿನ ದುರಂತದ ನೆನಪಿನ ನಡುವೆಯೂ ನಟಿ ಮೇಘನಾ ರಾಜ್ (Meghana Raj producer) ತಮ್ಮ ನಟನೆ ಹಾಗೂ ಬದುಕಿಗೆ ಮರಳಿದ್ದಾರೆ. ರಿಯಾಲಿಟಿ ಶೋ, ಜಾಹೀರಾತು ಹಾಗೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ಮತ್ತೆ ನಟನೆಗೆ ಮರಳಿದ್ದನ್ನು ಎಂಜಾಯ್ ಮಾಡ್ತಿರೋ ಅಭಿಮಾನಿಗಳಿಗೆ ಈಗ ಕುಟ್ಟಿಮಾ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಹೌದು ಚಿರುಗೆ ಕೊಟ್ಟ ಮಾತಿನಂತೆ ಮೇಘನಾ ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಮೊನ್ನೆ ಮೊನ್ನೆ ಕನ್ನಡ ರಿಯಾಲಿಟಿ ಶೋದಲ್ಲಿ ಮಿಂಚಿದ್ದ ನಟಿ ಮೇಘನಾ ರಾಜ್ ಈಗ ಬ್ಯುಸಿ ಮಮ್ಮಿಯಾಗಿರೋ ಜೊತೆ ಬಣ್ಣದ ಲೋಕದಲ್ಲೂ ಸಾಲು ಸಾಲು ಸಿನಿಮಾ ಒಪ್ಪಿಕೊಂಡಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಶಬ್ದ ಹಾಗೂ ವಿಶಾಲ್ ನಿರ್ದೇಶನದಲ್ಲಿ ಇನ್ನೂ ಹೆಸರಿಡದ ಸಿನಿಮಾವೊಂದನ್ನು ಮೇಘನಾ ಒಪ್ಪಿಕೊಂಡಿದ್ದಾರೆ. ಅದರಲ್ಲಿ ವಿಶಾಲ್ ನಿರ್ದೇಶನದ ಸಿನಿಮಾವನ್ನು ಸ್ವತಃ ಮೇಘನಾ ರಾಜ್ ನಿರ್ಮಾಣಮಾಡಲಿದ್ದಾರಂತೆ. ಮೇಘನ ರಾಜ್ ಗೆ ಮೇಘನಾ ಹಾಗೂ ಚಿರು ಸ್ನೇಹಿತ ಪನ್ನಗಾಭರಣ ಕೂಡ ಸಾಥ್ ನೀಡಲಿದ್ದಾರಂತೆ.

ಇದು ಮಹಿಳಾ ಪ್ರಧಾನ ಕತೆಯಾಗಿದ್ದು, ಇದಕ್ಕಾಗಿ ಮೇಘನಾ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದಾರಂತೆ. ಕಳೆದ ವರ್ಷ ಚಿರು ಹುಟ್ಟುಹಬ್ಬದ ವೇಳೆ ಮೇಘನಾ ವಿಶಾಲ್‌ ನಿರ್ದೇಶನದ‌ಸಿನಿಮಾಕ್ಕೆ ಸಹಿ‌ ಹಾಕಿದ್ದರು. ಆದರೆ ಸಿನಿಮಾ ಸೆಟ್ಟೇರಿರಲಿಲ್ಲ. ಈಗ ಆ ಸಿನಿಮಾದ ಕತೆಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡು ಈಗ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಈ ಸಿನಿಮಾವನ್ನು ಸ್ವಂತ ಬ್ಯಾನರ್ ನಲ್ಲಿ ಮೇಘನಾ ನಿರ್ಮಾಣಕ್ಕೆ ಮುಂದಾಗಿದ್ದು, ಪನ್ನಗಾಭರಣ ಕೂಡ ಸಾಥ್ ನೀಡ್ತಿದ್ದಾರಂತೆ. ಚಿರು ಸದಾಕಾಲ ಮೇಘನಾ ನಟಿಸಬೇಕು ಹಾಗೂ ತಮ್ಮದೇ ಸ್ವಂತ ಸಿನಿಮಾಗಳನ್ನು ನಿರ್ಮಿಸಬೇಕೆಂದು ಬಯಸಿದ್ದರಂತೆ. ಆ ಕಾರಣಕ್ಕೆ ಪತಿಯ ಆಸೆ ಈಡೇರಿಸಲು ಮೇಘನಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸ್ವತಃ ಮೇಘನಾ ರಾಜ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಮುಂದಾದ ಮೇಘನಾಗೆ ಸಿನಿರಂಗದ ಗಣ್ಯರು ಶುಭಾಶಯ ಕೋರಿದ್ದಾರೆ.

ಪತಿ ಅಗಲಿ ಕೆ ಬಳಿಕ ಗಂಡುಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್ ಕೆಲಕಾಲ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಮತ್ತೆ ಚಂದನವನಕ್ಕೆ ವಾಪಸ್ಸಾಗಿದ್ದು, ರಿಯಾಲಿಟಿ ಶೋ ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : kgf-2 : ನೂರು ದಿನ ಪೂರೈಸಿದ ಕೆಜಿಎಫ್​ – 2 ಸಿನಿಮಾ : ವಿಶೇಷ ವಿಡಿಯೋ ಶೇರ್​ ಮಾಡಿದ ಪ್ರಶಾಂತ್​ ನೀಲ್​​

ಇದನ್ನೂ ಓದಿ : Bigg Boss Kannada OTT : ಬಿಗ್​ಬಾಸ್​ ಕನ್ನಡ ಸೀಸನ್​ 9 ಅಲ್ಲ..ಸೀಸನ್​ 1 : ಆಗಸ್ಟ್​ 6ರಿಂದ ಶುರು ಒಟಿಟಿ ಶೋ

Good news for Chiru Sarja fans, Meghana Raj producer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular