Arjun sarja mother lakshmi devi died : ನಟ ಅರ್ಜುನ್​ ಸರ್ಜಾ ತಾಯಿ ಲಕ್ಷ್ಮೀದೇವಿ ವಿಧಿವಶ

ಬೆಂಗಳೂರು : arjun sarja mother lakshmi devi died : ಬಹುಭಾಷಾ ನಟ ಅರ್ಜುನ್​ ಸರ್ಜಾ ತಾಯಿ ಲಕ್ಷ್ಮೀ ದೇವಿ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀ ದೇವಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು . ಸರ್ಜಾ ಕುಟುಂಬ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀ ದೇವಿ ಪುತ್ರ ಅರ್ಜುನ್​ ಸರ್ಜಾ ಮೇಲೆ ಮೀಟು ಆರೋಪ ಎದುರಾದ ಸಂದರ್ಭದಲ್ಲಿ ಸಾಕಷ್ಟು ಮಾಧ್ಯಮಗಳಲ್ಲಿ ಡಿಸ್ಕಷನ್​ಗೆ ಕೂರುವ ಮೂಲಕ ಪುತ್ರನ ಪರವಾಗಿ ಧ್ವನಿ ಎತ್ತಿದ್ದರು. ಸರ್ಜಾ ಕುಟುಂಬ ಹಿರಿ ತಲೆ ನಿಧನದಿಂದಾಗಿ ಸರ್ಜಾ ಕುಟುಂಬದಲ್ಲಿ ದುಃಖದ ಕಾರ್ಮೋಡ ಆವರಿಸಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಅರ್ಜುನಾ ಸರ್ಜಾರ ಮಾವ ಕಲಾ ತಪಸ್ವಿ ರಾಜೇಶ್​ ಕೂಡ ಕೆಲವು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಈ ದುಃಖದಿಂದ ಹೊರ ಬರುವವೇಳೆಗೆ ಇದೀಗ ಅರ್ಜುನ್​ ಸರ್ಜಾ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ್​​ರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಫೆಬ್ರವರಿ ತಿಂಗಳಲ್ಲಿ ಬಾರದ ಲೋಕಕ್ಕೆ ತೆರಳಿದ್ದರು.

ಜಯನಗರದ ಅಪೋಲೋ ಆಸ್ಪತ್ರೆಯಲ್ಲಿರುವ ಲಕ್ಷ್ಮೀದೇವಿ ಅವರ ಮೃತದೇಹವನ್ನು ಸರ್ಜಾ ಕುಟುಂಬಕ್ಕೆ ಶಿಫ್ಟ್​ ಮಾಡಲು ತಯಾರಿ ನಡೆಸಲಾಗ್ತಿದೆ. ಅಂತ್ಯಕ್ರಿಯೆಗೂ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಅರ್ಜುನ್​ ಸರ್ಜಾ ಕುಟುಂಬಕ್ಕೆ ಗಣ್ಯಾತಿಗಣ್ಯರು ಸಾಂತ್ವನ ಹೇಳುತ್ತಿದ್ದಾರೆ.

ಇದನ್ನು ಓದಿ : T20 World Cup 2022 India : ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಾಡಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : Meghana Raj producer : ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ, ನಿರ್ಮಾಪಕಿಯಾದ್ರು ಮೇಘನಾ ರಾಜ್

ಇದನ್ನೂ ಓದಿ : kannadathi serial remake : ಮರಾಠಿ ಆವೃತ್ತಿಯಲ್ಲಿಯೂ ನಂ.1 ಪಟ್ಟಕ್ಕೇರಿದ ‘ಕನ್ನಡತಿ’ ಧಾರವಾಹಿ

ಇದನ್ನೂ ಓದಿ : poonam pandey : ರಣವೀರ್​ ಸಿಂಗ್ ನನ್ನ ಆಟದಲ್ಲಿ​​ ನನ್ನನ್ನೇ ಸೋಲಿಸಿಬಿಟ್ಟರು ಎಂದ ಪೂನಂ ಪಾಂಡೆ

arjun sarja mother lakshmi devi died in bangalore

Comments are closed.