ಬಹುನೀರಿಕ್ಷಿತ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಸಲಾರ್ ಸಿನಿಮಾ (Salara Movie Relese Date fix) ರಿಲೀಸ್ ಡೇಟ್ ಅನೌನ್ಸ್ ಆಗಿರೋ ಬೆನ್ನಲ್ಲೇ ಈಗ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಕೆಜಿಎಫ್ (KGF) ಸರಣಿ ಮುಂದುವರೆಯಲಿದ್ದು, ಕೆಜಿಎಫ್-2 (KGF-2) ಬಳಿಕ, ಕೆಜಿಎಫ್ 3 (KGF -3) ಸಿನಿಮಾ ತೆರೆಗೆ ಬರಲಿದೆ ಎಂದು ಹೊಂಬಾಳೆ ಖಚಿತಪಡಿಸಿದೆ.
ಸ್ಯಾಂಡಲ್ ವುಡ್ ಗೆ ಬಾಲಿವುಡ್ ಮೀರಿ ನಿಲ್ಲುವ ಶಕ್ತಿ ನೀಡಿದ್ದು ಕೆಜಿಎಫ್ ಹಾಗೂ ಕೆಜಿಎಫ್ 2. ಸೀರಿಯಲ್ ನಿಂದ ಕೆರಿಯರ್ ಆರಂಭಿಸಿ ಚಂದನವನದಲ್ಲಿ ಸಾಲು ಸಾಲು ಸಿನಿಮಾ ನಿರ್ಮಿಸಿ ಗೆದ್ದಿದ್ದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಗೆ ಅಂತಾರಾಷ್ಟ್ರೀಯ ಮಾನ್ಯತೆ ಹಾಗೂ ಹಾಲಿವುಡ್ ಸಿನಿಮಾ (Hollywood) ಕ್ಷೇತ್ರವೂ ಬೆಳೆಯುವಂತಹ ಬ್ರೇಕ್ ನೀಡಿದ್ದು ಕೆಜಿಎಫ್ ಸಿನಿಮಾ ಹಾಗೂ ಹೊಂಬಾಳೆ ಫಿಲ್ಮ್ (Hombale Films). ಈಗ ಇದೇ ಹೊಂಬಾಳೆ ಸಂಸ್ಥೆ ಕೆಜಿಎಫ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ಇದನ್ನೂ ಓದಿ : ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್ ಮಾತು
ರಾಕಿ ಬಾಯ್ ಸಾಮ್ರಾಜ್ಯದ ವಿಸ್ತರಣೆಯಂತೆ ರಾಕಿಂಗ್ ಸ್ಟಾರ್ ಗೆಲುವಿನ ದಂಡಯಾತ್ರೆ ಮುಂದುವರೆಸಲು ಕೆಜಿಎಫ್ 3 ಸಿನಿಮಾ ತೆರೆಗೆ ಬರಲಿದೆ. 2024 ರಲ್ಲಿ ಚಿತ್ರೀಕರಣ ಆರಂಭಿಸಲಿರುವ ಹೊಂಬಾಳೆ ಸಂಸ್ಥೆ 2025 ರಲ್ಲಿ ಅಂದ್ರೇ ಬಹುತೇಕ 2025 ರ ಡಿಸೆಂಬರ್ ವೇಳೆಗೆ ಕೆಜಿಎಫ್ 3 ಸಿನಿಮಾ ತೆರೆಗೆ ಬರಲಿದೆ.
ಕೆಜಿಎಫ್ 3 ಪ್ರೊಡಕ್ಷನ್ ಕೆಲಸ 2023 ರ ಡಿಸೆಂಬರ್ ನಲ್ಲಿ ಆರಂಭವಾಗಲಿದ್ದು, 2024 ರಲ್ಲಿ ಹೊಂಬಾಳೆ ಸಿನಿಮಾ ಚಿತ್ರೀಕರಣ ಆರಂಭಿಸಲಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ2025 ರಲ್ಲಿ ಕೆಜಿಎಫ್ 3 ತೆರೆಗೆ ಬರೋದು ಫಿಕ್ಸ್. ಈಗಾಗಲೇ ಸಿನಿಮಾ ನಟ ಹಾಗೂ ನಿರ್ಮಾಪಕ, ನಿರ್ದೇಶಕರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು ಕತೆಗೆ ಅಂತಿಮ ರೂಪ ನೀಡಲಾಗುತ್ತಿದೆ.
ಯಶ್ ಈ ಸಿನಿಮಾದಲ್ಲಿ ಹಿಂದೆಂದಿಗಿಂತ ವಿಭಿನ್ನವಾಗಿ ಕಾಣಿಸಲಿದ್ದು, ಹಾಲಿವುಡ್ ಸಾಹಸ ನಿರ್ದೇಶಕರು ಯಶ್ ಸಾಹಸವನ್ನು ನಿರ್ದೇಶಿಸಲಿದ್ದಾರಂತೆ. ಯಶ್ ಅಲಿಯಾಸ್ ರಾಕಿ ಬಾಯ್ ಸಂಪತ್ತಿನ ಅನ್ವೇಷಣೆ ಹಾಗೂ ಅಧಿಕಾರದ ಸುತ್ತ ಕೆಜಿಎಫ್ 3 ಕತೆ ಹೆಣೆಯಲಾಗಿದೆ ಎನ್ನಲಾಗ್ತಿದೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ನಿಂದ ಹಾಲಿವುಡ್ ಗೆ : ಇದು ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಗುಡ್ ನ್ಯೂಸ್
ಯಶ್ ತಮ್ಮ 19 ನೇ ಸಿನಿಮಾ ಘೋಷಣೆ ಗೆ ಸುಧೀರ್ಘ ಅವಧಿ ತೆಗೆದುಕೊಂಡಿದ್ದರಿಂದ ನಾನಾರೀತಿಯ ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಗಾಂಧಿ ನಗರದಲ್ಲಿ ಹರಡಿತ್ತು. ಆದರೆ ಮೊನ್ನೆ ಮೊನ್ನೆ ಯಶ್ ಹಾಲಿವುಡ್ ಸಾಹಸ ನಿರ್ದೇಶಕರ ಜೊತೆ ಕಾಣಿಸುಕೊಂಡ ಬೆನ್ನಲ್ಲೇ ಯಶ್ ಸಿನಿಮಾದ ಹೊಸ ಅಪ್ಡೇಟ್ ಸುದ್ದಿಯಾಗಿದೆ.

ಈಗಾಗಲೇ ಹೊಂಬಾಳೆ ಫಿಲ್ಮ್ಸ್ ನ ಸಲಾರ್ ಸಿನಿಮಾ ಡಿಸೆಂಬರ್ 22 ರಂದು ತೆರೆಗೆ ಬರಲು ಸಿದ್ಧವಾಗಿದೆ. ಇದಲ್ಲದೇ ರಿಶಬ್ ಶೆಟ್ಟಿ ನಟನೆಯ ಕಾಂತಾರ-2 ಹಾಗೂ ಪ್ರಥ್ವಿರಾಜ್ ಸುಕುಮಾರನ್ ಟೈಸನ್ ಸಿನಿಮಾ ಬಿಡುಗಡೆ ಕಾದಿದೆ.
ಕೆಜಿಎಫ್ 3 ಸಿನಿಮಾದ ಪ್ರೊಡಕ್ಷನ್ ಕೆಲಸಗಳು ಇದೇ ಡಿಸೆಂಬರ್ ನಲ್ಲಿ ಆರಂಭವಾಗಲಿದ್ದು, 2025 ರ ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ. ರಾಕಿಂಗ್ ಸ್ಟಾರ್ ಯಶ್ ರಾಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ವಕ್ತಾರ ಚೆಲುವೆ ಗೌಡ ಹೇಳಿದ್ದಾರೆ.
ಇದನ್ನೂ ಓದಿ : ಮತ್ತೊಂದು ದಾಖಲೆಗೆ ಸಜ್ಜಾದ ಪ್ರಶಾಂತ್ ನೀಲ್: ಪ್ರಭಾಸ್ ಸಲಾರ್ ರಿಲೀಸ್ ಗೆ ಡೇಟ್ ಫಿಕ್ಸ್
ಕೆಜಿಎಫ್ 3 ಬರಲಿದೆ ಎಂಬ ಸುದ್ದಿ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದು, ಸೋಷಿಯಲ್ ಮೀಡಿಯಾ ಹಾಗೂ ಇತರ ಮಾಧ್ಯಮಗಳಲ್ಲಿ ಈಗಲೇ ಕೆಜಿಎಫ್ 3 ಗೆಲುವು ಹಾಗೂ ಗಳಿಸಬಹುದಾದ ಲಾಭಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಯಶ್ 19 ನೇ ಸಿನಿಮಾ ಯಾರೊಂದಿಗೆ ಕುತೂಹಲ ದಿನ ದಿನಕ್ಕೂ ಹೆಚ್ಚುತ್ತಲೇ ಇತ್ತು. ಅಲ್ಲದೇ ಸಿನಿಮಾದ ಬಗ್ಗೆ ನೊರೆಂಟು ಗಾಸಿಪ್ ಗಳು ಸದ್ದು ಮಾಡಿದ್ದವು. ಈಗ ಹೊಂಬಾಳೆ ವಕ್ತಾರರ ಮಾಹಿತಿಯಿಂದ ಎಲ್ಲ ಸಂದೇಹಗಳಿಗೂ ತೆರೆ ಬಿದ್ದಿದ್ದು ಮತ್ತೊಮ್ಮೆ ಕೆಜಿಎಫ್ ನಲ್ಲಿ ರಾಕಿ ಬಾಯ್ ಮಿಂಚೋದು ಫಿಕ್ಸ್ ಎಂಬ ಮಾಹಿತಿ ಹೊರಬಿದ್ದಿದೆ.
Good News for Hombale Films KGF 3 release Date Announced