ಸೋಮವಾರ, ಏಪ್ರಿಲ್ 28, 2025
HomeCinemaGood news for Sunny Leone : ಸನ್ನಿ ಲಿಯೋನ್ ಅಭಿಮಾನಿಗಳಿಗೆ ಸಿಹಿಸುದ್ದಿ: ದಕ್ಷಿಣ ಭಾರತದಲ್ಲೇ...

Good news for Sunny Leone : ಸನ್ನಿ ಲಿಯೋನ್ ಅಭಿಮಾನಿಗಳಿಗೆ ಸಿಹಿಸುದ್ದಿ: ದಕ್ಷಿಣ ಭಾರತದಲ್ಲೇ ಬಿಡು ಬಿಡ್ತಾರಂತೆ ನೀಲಿ ತಾರೆ

- Advertisement -

ಸನ್ನಿ ಲಿಯೋನ್ (Good news for Sunny Leone) ಅಂದ್ರೇ ಯಾರಿಗೆ ಗೊತ್ತಿಲ್ಲ ಹೇಳಿ. ಈಗ ತಾನೇ ಹದಿಹರೆಯಕ್ಕೆ ಕಾಲಿಟ್ಟ ಹೈಕಳಿಂದ ಆರಂಭಿಸಿ ವೃದ್ದಾಪ್ಯದ ಅಂಚಿನಲ್ಲಿರೋ ಎಲ್ಲರಿಗೂ ಸನ್ನಿ ಲಿಯೋನ್ ಫೆವರಿಟ್. ಒಂದು ಕಾಲದಲ್ಲಿ ರಾತ್ರಿ ಕನಸಿನ ರಾಣಿಯಂತೆ ಕಾಡ್ತಿದ್ದ ಸನ್ನಿ ಲಿಯೋನ್ ಬಳಿಕ ಸಿನಿರಂಗಕ್ಕೂ ಕಾಲಿಟ್ಟು ನಟಿಯಾಗಿ ಭಡ್ತಿ ಪಡೆದಿದ್ದು ಈಗ ಇತಿಹಾಸ. ಆದರೆ ಬಾಲಿವುಡ್ ನಿಂದ ಕೆರಿಯರ್ ಆರಂಭಿಸಿದ ಸನ್ನಿ ಮೇನಿಯಾ ಈಗ ದಕ್ಷಿಣಕ್ಕೂ ವಿಸ್ತರಣೆಯಾಗಿದೆ. ಅಷ್ಟೇ ಅಲ್ಲ ಈಗ ದಕ್ಷಿಣ ಚಿತ್ರರಂಗವೇ ಅಚ್ಚರಿ ಪಡುವಂತೆ ದಕ್ಷಿಣದಲ್ಲೇ ಮನೆ ಮಾಡಲು ಸಿದ್ಧವಾಗಿದ್ದಾರಂತೆ.

ಹೌದು ಸದ್ಯ ಸನ್ನಿ ಲಿಯೋನ್ ಬಾಲಿವುಡ್ ಗಿಂತ ದಕ್ಷಿಣದ ಸಿನಿಮಾದಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಹೀಗಾಗಿ ಸನ್ನಿ ಲಿಯೋನ್ ಇನ್ಮುಂದೇ ದಕ್ಷಿಣ ಭಾರತದಲ್ಲೇ ನೆಲೆ ನಿಲ್ಲಲಿದ್ದಾರಂತೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿರೋ ಸನ್ನಿ ಲಿಯೋನ್, ಹೈದ್ರಾಬಾದ್ ನಲ್ಲೇ ಮನೆ ಖರೀದಿಸಲು ಮುಂದಾಗಿದ್ದಾರಂತೆ. ಇತ್ತೀಚಿಗಷ್ಟೇ ಸನ್ನಿ ಲಿಯೋನ್ ಸಾಲು ಸಾಲು ಸಿನಿಮಾಗಳ ಬಳಿಕ ಮುಂಬೈನಲ್ಲಿ 16 ಕೋಟಿ ಮೌಲ್ಯದ ತ್ರಿಬಲ್ ಬೆಡ್ ರೂಂ ಫ್ಲ್ಯಾಟ್ ಖರೀದಿಸಿದ್ದರು.

ಈಗ ಹೈದ್ರಾಬಾದ್ ನಲ್ಲಿ ಸನ್ನಿ ಲಿಯೋನ್ ಸೆಟ್ಲ್ ಆಗೋ ಚಿಂತನೆಯಲ್ಲಿದ್ದಾರಂತೆ. ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿರೋ ಸನ್ನಿ ಲಿಯೋನ್ ಆರಂಭದಲ್ಲಿ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಬಾಲಿವುಡ್ ಸೇರಿದಂತೆ ತೆಲುಗು,ಕನ್ನಡ,ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ನಿರ್ದೇಶಕ ಪ್ರೇಂ ಸನ್ನಿ ಲಿಯೋನ್ ರನ್ನು ಐಟಂ ಸಾಂಗ್ ಗಾಗಿ ಕರೆಯಿಸಿದ್ದು, ಸಖತ್ ಸೊಂಟ ಬಳುಕಿಸಿ ಕನ್ನಡದಲ್ಲೂ ಭರ್ಜರಿ ಆಭಿಮಾನಿಗಳನ್ನು ಗಳಿಸಿದ್ದಾರೆ. ಹೈದ್ರಾಬಾದ್ ನ ಸೆಲೆಬ್ರೆಟಿಗಳು ವಾಸವಾಗಿರೋ ಏರಿಯಾದಲ್ಲೇ ಸನ್ನಿ ಲಿಯೋನ್ ಮನೆ ಖರೀದಿಸಲು ಮುಂದಾಗಿದ್ದಾರಂತೆ.

ಸಿನಿಮಾಗಳ ಜೊತೆ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರೋ ಸನ್ನಿ ಲಿಯೋನ್ ಆಗಾಗ ಶೂಟಿಂಗ್ ಮಧ್ಯೆ ನಡೆದ ಫನ್ನಿ ಇನ್ಸಿಡೆಂಟ್ ಗಳ ವಿಡಿಯೋ ಎಲ್ಲವನ್ನೂ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೇ ಸ್ಟ್ರೆಸ್ ಮ್ಯಾನೇಜ್ ಮಾಡೋದು ಹೇಗೆ ಅನ್ನೋದನ್ನು ಸನ್ನಿ ಲಿಯೋನ್ ತೋರಿಸಿಕೊಟ್ಟಿದ್ದು, ಮಚ್ಚಿನಲ್ಲಿ ಮರವನ್ನು ಕತ್ತರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಖತ್ ಲೈಕ್ಸ್ ಹರಿದು ಬಂದಿದೆ. ವಿಡಿಯೋಗೆ ಸನ್ನಿ ಲಿಯೋನ್ when You Are Frustrated, I hit it in the center too ಎಂದಿದ್ದಾರೆ. ಅಲ್ಲದೇ ಈ ವಿಡಿಯೋ ಮಾಡೋ ಉದ್ದೇಶಕ್ಕಾಗಿ ಯಾವುದೇ ಮರಕ್ಕೂ ಹಾನಿ ಮಾಡಲಾಗಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಆರಂಭವಾದ ಸನ್ನಿ ಲಿಯೋನ್ ಮೇನಿಯಾ ಇನ್ಮುಂದೇ ದಕ್ಷಿಣಕ್ಕೂ ವ್ಯಾಪಿಸಲಿದೆ.

ಇದನ್ನೂ ಓದಿ : Mallika Sherawat : ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ, ಬಾಲಿವುಡ್ ಹೀರೋಸ್ ಅಸಲಿಯತ್ತು ಬಿಚ್ಚಿಟ್ಟ ಮಲ್ಲಿಕಾ ಶೇರಾವತ್

ಇದನ್ನೂ ಓದಿ : Amit Shah will arrive in Bangalore : ಅತ್ತ ಸಿದ್ದರಾಮೋತ್ಸವ.. ಇತ್ತ ಅಮಿತ್​ ಶಾ ಬೆಂಗಳೂರಿಗೆ ಆಗಮನ : ಏನಿದು ರಾಜಕೀಯ ತಂತ್ರ

Good news for Sunny Leone fans, the blue star is leaving in South India

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular