Pingali Venkayya : ತ್ರಿವರ್ಣ ಧ್ವಜದ ವಿನ್ಯಾಸಗಾರ ಪಿಂಗಲಿ ವೆಂಕಯ್ಯ ಯಾರು ಗೊತ್ತಾ?

Pingali Venkayya : ಭಾರತ (India), ಸ್ವಾತಂತ್ರ್ಯದ 75ನೇ ವರ್ಷಾಚರಣೆಯಲ್ಲಿದೆ (75th Independence Day). ಅಮೃತಮಹೋತ್ಸವದ ಈ ಸಂದರ್ಭದಲ್ಲಿ ‘ಹರ್‌ ಘರ್‌ ತಿರಂಗಾ’ ಅಭಿಯಾನ ಎಲ್ಲಡೆ ಕೇಳಿಬರುತ್ತಿದೆ. ತ್ರಿವರ್ಣ ಧ್ವಜ (Tricolour) ನಮ್ಮ ಹೆಮ್ಮೆ. ತ್ರಿವರ್ಣ ಧ್ವಜದ ಮೂರು ಬಣ್ಣಕ್ಕೆ ಅದರದೇ ಮಹತ್ವವಿದೆ. ಕೇಸರಿಯ ಬಣ್ಣ ಧೈರ್ಯದ ಸಂಕೇತವಾದರೆ, ಬಿಳಿ ಶಾಂತಿಯ ಸಂಕೇತ ಮತ್ತು ಹಸಿರು ಸಮೃದ್ಧಿಯ ಸಂಕೇತವನ್ನು ಸಾರುತ್ತದೆ. ಹಾಗಾದರೆ ಈ ತ್ರಿವರ್ಣ ಧ್ವಜದ ರಚನೆ ಆಗಿದ್ದಾದರೂ ಹೇಗೆ? ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ನಾವು ಅದನ್ನು ತಿಳಿಯಲೇಬೇಕಾಗಿದೆ.

ಭಾರತದ ತ್ರಿವರ್ಣ ಧ್ವಜದ ರಚನೆ ಮಾಡಿದವರು ಯಾರು ಈ ಪ್ರಶ್ನೆಗೆ ಉತ್ತರ ಸ್ವಾತಂತ್ರ್ಯ ಹೋರಾಟಗಾರರಾದ ‘ಪಿಂಗಾಲಿ ವೆಂಕಯ್ಯ’ನವರು. ಆಗಸ್ಟ್‌ 2, 1876 ರಲ್ಲಿ ಆಂಧ್ರಪ್ರದೇಶದ ಮಚಲಿಪಟ್ಟಣಂದ ಸಮೀಪದಲ್ಲಿರುವ ಭಟ್ಲಾಪೆನುಮಾರುವಿನಲ್ಲಿ ಜನಿಸಿದರು. ವೆಂಕಯ್ಯನವರು ತಮ್ಮ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮದ್ರಾಸ್‌ ನಲ್ಲಿ ಪೂರೈಸಿದರು. ನಂತರ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಜಿಯೋಲಜಿ, ಆಗ್ರಿಕಲ್ಚರ್‌, ಶಿಕ್ಷಣ ಮತ್ತು ಭಾಷೆಗಳ ಬಗ್ಗೆ ಅಧ್ಯಯನ ಮಾಡಿದರು. ನಂತರ ಅವರು ಯುವ ಬ್ರಿಟಿಷ್ ಭಾರತೀಯ ಸೈನಿಕರಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದರು. ಅಲ್ಲಿ ಅವರು ಬ್ರಿಟಿಷ್ ಸೈನಿಕರಲ್ಲಿ ರಾಷ್ಟ್ರೀಯತೆಯಿಂದ ಸ್ಫೂರ್ತಿ ಪಡೆದರು. ಯೂನಿಯನ್ ಜ್ಯಾಕ್ (ಬ್ರಿಟನ್ ಧ್ವಜ) ಗೆ ವಂದನೆ ಸಲ್ಲಿಸುವಾಗ ಭಾರತಕ್ಕಾಗಿ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸುವ ಸ್ಫೂರ್ತಿ ಪಡೆದರು. ಆಗ ಅವರಿಗೆ ಕೇವಲ 19 ವರ್ಷ. ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿಜೀಯವರನ್ನು ಭೇಟಿಯಾದರು. ಸುಮಾರು 50 ವರ್ಷಗಳ ಕಾಲ ಅವರ ಕಟ್ಟಾ ಅನುಯಾಯಿಯಾಗಿದ್ದರು.

ಭಾಷೆಯ ಮೇಲಿನ ಅಗಾಧ ಪ್ರೀತಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಆಂಧ್ರಪ್ರದೇಶದ ಬಪಟ್ಲಾ ಪಟ್ಟಣದ ಶಾಲೆಯೊಂದರಲ್ಲಿ ಮಾಡಿದ ಜಪಾನಿ ಭಾಷೆಯ ಭಾಷಣ ಅವರನ್ನು ಪ್ರಸಿದ್ಧರನ್ನಾಗಿ ಮಾಡಿತು. ನಂತರ ಅವರನ್ನು ‘ಜಪಾನ್‌ ವೆಂಕಯ್ಯ’ ಎಂದು ಕರೆಯಲಾಯಿತು.

ಕಲಂಕಾರಿ ಕೈಮಗ್ಗ ನೇಯ್ಗೆಗೆ ಹೆಸರುವಾಸಿಯಾದ ಮಚಲಿಪಟ್ಟಣಕ್ಕೆ ಬಟ್ಟೆ ತಯಾರಿಸಲು ಮುಖ್ಯವಾದ ಕಾಂಬೋಡಿಯನ್‌ ಹತ್ತಿಯ ಮೇಲಿನ ಅವರ ಬೃಹತ್ತ ಸಂಶೋಧನೆಯು ಅವರಿಗೆ ‘ಪತ್ತಿ ವೆಂಕಯ್ಯ’ ಎಂಬ ಬಿರುದನ್ನು ತಂದುಕೊಟ್ಟಿತು.

ರಾಷ್ಟ್ರಧ್ವಜದ ವಿನ್ಯಾಸದ ಹಾದಿ :
ವೆಂಕಯ್ಯನವರು ರಾಷ್ಟ್ರಧ್ವಜದ ಹಲವಾರು ಮಾದರಿಗಳನ್ನು ವಿನ್ಯಾಸಗೊಳಿಸಿದರು. 1921 ರಲ್ಲಿ, ವಿಜಯವಾಡದಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಮಹಾತ್ಮಾ ಗಾಂಧಿಯವರು ಅನುಮೋದಿಸಿದರು. ಮೊದಲು ಅವರು ವಿನ್ಯಾಸ ಮಾಡಿದ್ದ ಧ್ವಜದಲ್ಲಿ, ಹಸಿರು ಮತ್ತು ಕೆಂಪು ಎರಡು ಬಣ್ಣದ ಪಟ್ಟಿಗಳಿದ್ದು, ಕೇಂದ್ರದಲ್ಲಿ ಗಾಂಧಿವಾದದ ಚರಖಾ ಹೊಂದಿತ್ತು. ಗಾಂಧಿಜಿಯವರ ಸಲಹೆಯ ಮೇರೆಗೆ ಬಿಳಿ ಪಟ್ಟಿಯನ್ನು ಸೇರಿಸಲಾಯಿತು. ಇದು ತ್ರಿವರ್ಣ ಧ್ವಜದ ಮೂಲ ಕಲ್ಪನೆಯಾಯಿತು.

1931 ರಲ್ಲಿ ಕಾಂಗ್ರೆಸ್‌ ಕೇಸರಿ, ಬಿಳಿ, ಹಸಿರು ಮತ್ತು ಮಧ್ಯದಲ್ಲಿ ಚಕ್ರವಿರುವ ಧ್ವಜ ಅಳವಡಿಸಿಕೊಳ್ಳುವವರೆಗೆ ವೆಂಕಯ್ಯವರು ವಿನ್ಯಾಸಗೊಳಿಸಿದ ಧ್ವಜವೇ ಎಲ್ಲಾ ಕಾಂಗ್ರೆಸ್‌ ಸಭೆಗಳಲ್ಲಿ ಬಳಸಾಲಗುತ್ತಿತ್ತು.

ವೆಂಕಯ್ಯ ಅವರು ಜುಲೈ 4, 1963ರಲ್ಲಿ ನಿಧನರಾದರು. 2009 ರಲ್ಲಿ, ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.

ಹರ್‌ ಘರ್‌ ತಿರಂಗಾ :

ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ, ಮೋದಿ ಸರ್ಕಾರವು ‘ಹರ್‌ ಘರ್‌ ತಿರಂಗಾ’ ಅಭಿಯಾನವನ್ನು ಪ್ರಾರಂಭಿಸಿದೆ. ಇದರಲ್ಲಿ ಆಗಸ್ಟ್‌ 2 ಮತ್ತು 15 ರಂದು ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ತ್ರಿವರ್ಣ ಧ್ವಜವನ್ನು ತಮ್ಮ ಪ್ರೊಫೈಲ್‌ ಚಿತ್ರವಾಗಿರಿಸಿಕೊಳ್ಳಲು ಪ್ರಧಾನಿ ಕರೆ ನೀಡಿದ್ದಾರೆ.

ಇದನ್ನೂ ಓದಿ : ISRO ದ ರಾಕೆಟ್‌ ಉಡಾವಣೆಯನ್ನು ವೀಕ್ಷಿಸಲು ಇದು ಸುವರ್ಣಾವಕಾಶ? ಹೆಸರು ನೋಂದಾಯಿಸಲು ಹೀಗೆ ಮಾಡಿ…

ಇದನ್ನೂ ಓದಿ : A Trip to the Village : ನಗರಗಳಿಗೆ ಭೇಟಿ ನೀಡಿ ಬೇಜಾರಾಗಿದೆಯೇ ? ಹಾಗಾದರೆ, ಮುಂದಿನ ಸಲ ಈ ಹಳ್ಳಿಗಳಿಗೆ ಟ್ರಿಪ್‌ ಹೋಗಿ…

(Pingali Venkayya A tribute to man behind the Tiranga)

Comments are closed.