Amit Shah will arrive in Bangalore : ಅತ್ತ ಸಿದ್ದರಾಮೋತ್ಸವ.. ಇತ್ತ ಅಮಿತ್​ ಶಾ ಬೆಂಗಳೂರಿಗೆ ಆಗಮನ : ಏನಿದು ರಾಜಕೀಯ ತಂತ್ರ

ಬೆಂಗಳೂರು : Amit Shah will arrive in Bangalore : ಇಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ 75ನೇ ವರ್ಷದ ತಮ್ಮ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಸಿದ್ದರಾಮಯ್ಯ ಜನ್ಮ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಸಿದ್ದರಾಮೋತ್ಸವ ಕಾರ್ಯಕ್ರಮ ಜರುಗುತ್ತಿದೆ. ಜನ್ಮದಿನಾಚರಣೆಯ ನೆಪದಲ್ಲಿ ಕಾಂಗ್ರೆಸ್​ನ ಟಗರು ವಿಪಕ್ಷಗಳಿಗೆ ಹಾಗೂ ಸ್ವಪಕ್ಷದವರಿಗೆ ತನ್ನ ಶಕ್ತಿ ಏನು ಎಂಬುದನ್ನು ಪ್ರದರ್ಶನ ಮಾಡಲು ಮುಂದಾಗಿದ್ದಾರೆ.


ಸಿದ್ದರಾಮೋತ್ಸವ ಬೆನ್ನಲ್ಲೇ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್​ ಶಾ ಇಂದು ರಾಜ್ಯಕ್ಕೆ ಎಂಟ್ರಿ ನೀಡ್ತಿದ್ದಾರೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಇಂದು ತನ್ನ ಶಕ್ತಿ ಪ್ರದರ್ಶನ ಮಾಡ್ತಿದೆ. ಆದರೆ ಇತ್ತ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿರುವ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಟಾನಿಕ್​ ನೀಡಲು ಅಮಿತ್​ ಶಾ ಇಂದು ಬೆಂಗಳೂರಿಗೆ ಆಗಮಿಸ್ತಾ ಇದ್ದಾರೆ ಎನ್ನಲಾಗಿದೆ.

ಬೆಳ್ಳಾರಿಯಲ್ಲಿ ಅದೊಂದು ದುರ್ಘಟನೆ ಸಂಭವಿಸದೇ ಹೋಗಿದ್ದರೆ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಜನೋತ್ಸವವನ್ನು ಆಚರಿಸಿ ಕಾಂಗ್ರೆಸ್​ಗೂ ಮುನ್ನವೇ ಬಿಜೆಪಿ ರಾಜ್ಯದಲ್ಲಿ ತನ್ನ ಬಲ ಪ್ರದರ್ಶನ ಮಾಡಬೇಕಿತ್ತು. ಆದರೆ ನೆಟ್ಟಾರು ಪ್ರವೀಣ್​ ಕೊಲೆ ಪ್ರಕರಣದಿಂದಾಗಿ ಈ ಕಾರ್ಯಕ್ರಮ ಕೂಡ ರದ್ದಾಯ್ತು. ಅದೂ ಸಾಲದು ಎಂಬಂತೆ ಅನೇಕ ಹಿಂದೂ ಕಾರ್ಯಕರ್ತರು ಬಿಜೆಪಿ ಯುವ ಮೋರ್ಚಾದಲ್ಲಿ ರಾಜೀನಾಮೆ ನೀಡ್ತಿದ್ದಾರೆ. ಸ್ವಪಕ್ಷದ ಕೆಲವು ಪ್ರಭಾವಿ ಮುಖಂಡರೇ ಬಿಜೆಪಿ ವಿರುದ್ಧವಾಗಿ ಹೇಳಿಕೆ ನೀಡಲು ಆರಂಭಿಸಿರೋದು ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ಬಾರಿ ದೊಡ್ಡ ತಲೆನೋವನ್ನು ತಂದೊಡ್ಡಿದೆ.


ಇದು ಸಾಲದು ಎಂಬಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್​ ಸರ್ಕಾರ ಇದ್ದಿದ್ದರೆ ಕಲ್ಲು ಹೊಡಿಬೋದಿತ್ತು ಎಂದು ಹೇಳಿದ ಆಡಿಯೋವೊಂದು ವೈರಲ್​ ಆಗಿದ್ದೇ ಆಗಿದ್ದು ವಿಪಕ್ಷಗಳು ಬಿಜೆಪಿ ನಾಯಕರನ್ನು ಲೆಫ್ಟ್​ ರೈಟ್​ ತೆಗೆದುಕೊಂಡಿವೆ. ಪ್ರವೀಣ್​ ನೆಟ್ಟಾರು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಮುಸ್ಲಿಂ ಯುವಕನ ಸಾವು ಕೂಡ ಭಾರೀ ದೊಡ್ಡ ಪ್ರಮಾಣದಲ್ಲಿ ಆಕ್ರೋಶಕ್ಕೆ ಕಾರಣವಾಯ್ತು. ಪ್ರವೀಣ್​ ನೆಟ್ಟಾರು ಅಂತಿಮ ದರ್ಶನ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ಸಚಿವಾರದ ಅಂಗಾರ, ಸುನೀಲ್​ ಕುಮಾರ್​ ಸೇರಿದಂತೆ ಅನೇಕರು ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿತ್ತು.


ಈ ಎಲ್ಲದರ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್​​ ರಾಜ್ಯದಲ್ಲಿ ಜನತೆಗೆ ಬಿಜೆಪಿ ಸರ್ಕಾರದ ಮೇಲೆ ಉಂಟಾಗಿರುವ ಅಸಮಾಧಾನಗಳನ್ನು ತಣಿಸದ ಹೊರತು ಮುಂದಿನ ಚುನಾವಣೆಯಲ್ಲಿ ಗೆಲುವು ಸುಲಭವಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿದೆ.ಇದೇ ಕಾರಣಕ್ಕೆ ಇಂದು ಅಮಿತ್​ ಶಾ ಬೆಂಗಳೂರಿನತ್ತ ಆಗಮಿಸ್ತಾ ಇದ್ದು ಜನರ ವಿಶ್ವಾಸವನ್ನು ಮತ್ತೆ ಗಳಿಸಲು ವಿವಿಧ ರಣತಂತ್ರಗಳನ್ನು ಹೂಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಇದನ್ನು ಓದಿ : CM Basavaraj Bommai change : ರಾಜ್ಯದಲ್ಲಿ ಮತ್ತೆ ಬದಲಾಗ್ತಾರಾ ಸಿಎಂ

ಇದನ್ನೂ ಓದಿ : siddaramaiah birthday rally :ಬೆಣ್ಣೆ ನಗರಿಯಲ್ಲಿ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ : ಭಾರಿ ಸಮಾರಂಭದ ಹಿಂದೆ ನೂರೆಂಟು ರಾಜಕೀಯ ಲೆಕ್ಕಾಚಾರ

Union Home Minister Amit Shah will arrive in Bangalore today

Comments are closed.