ಕೆಜಿಎಫ್ ಸಿನಿಮಾದ ನೋಡಿದ ಎಲ್ಲರನ್ನೂ ಸಿನಿಮಾದಷ್ಟೇ ಕಾಡಿದ ಇನ್ನೊಂದು ಸಂಗತಿ ಕೆಜಿಎಫ್ ಸೆಟ್ (KGF ). ಸಿನಿಮಾ ನೋಡಿದ ಮೇಲೆ ಎಲ್ಲರೂ ಹುಡುಕಿದ್ದು ಕೆಜಿಎಫ್ ಶೂಟ್ ಮಾಡಿದ ಸ್ಥಳ ಯಾವುದು ಅನ್ನೋದನ್ನು. ಈ ಪ್ರಶ್ನೆಗಳಿಗೆ ಈಗ ಗೂಗಲ್ ಉತ್ತರ ನೀಡುತ್ತಿದ್ದು, ಉತ್ತರ ಮಾತ್ರವಲ್ಲ ನೀವು ನೋಡೋಕೆ ಸಿದ್ಧವಿದ್ದರೇ ಗೂಗಲ್ (Google) ನಿಮ್ಮನ್ನು ಆ ಸ್ಥಳಕ್ಕೂ ಕರೆದುಕೊಂಡು ಹೋಗಲಿದೆ.
ಹೌದು, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲ ಚಿತ್ರರಂಗವೂ ಬಹು ನೀರಿಕ್ಷೆಯಿಂದ ಕಾಯುತ್ತಿದ್ದ ಸಿನಿಮಾ ಕೆಜಿಎಫ್-2 , ಇನ್ನೆನು ಒಂದು ತಿಂಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಬಗ್ಗೆ ಜನರ ಕುತೂಹಲ ಹೆಚ್ಚಿರುವ ಬೆನ್ನಲ್ಲೇ ಸಿನಿಮಾ ಶೂಟಿಂಗ್ ಪ್ಲೇಸ್ ಗೆ ಹೋಗುವ ಅವಕಾಶ ಜನರಿಗೆ ಲಭಿಸಿದೆ. ಕೆಜಿಎಫ್ ನ ಸುತ್ತಮುತ್ತವೇ ಕೆಜಿಎಫ್ ನ ಸ್ಥಿತಿಯನ್ನು ಮರುಸೃಷ್ಟಿ ಮಾಡಿ ಸಿನಿಮಾ ಚಿತ್ರಿಸಲಾಗಿತ್ತು. ಸಾಮಾನ್ಯವಾಗಿ ಶೂಟಿಂಗ್ ಮುಗಿದ ಮೇಲೆ ಸೆಟ್ ತೆರವುಗೊಳಿಸಲಾಗುತ್ತಿತ್ತು. ಆದರೆ ಕೆಜಿಎಫ್-2 ಸಿನಿಮಾ ಸೆಟ್ ನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

ಅಷ್ಟೇ ಅಲ್ಲ ಈ ಸಿನಿಮಾ ಸೆಟ್ ಗೆ ಗೂಗಲ್ ಕೆಜಿಎಫ್ ಫಿಲ್ಮ್ ಸೆಟ್ ಎಂದು ನಾಮಕರಣ ಕೂಡ ಮಾಡಲಾಗಿದೆ. ಕೆಜಿಎಫ್ ಸಿನಿಮಾವನ್ನು ಕರ್ನಾಟಕದ ಕೋಲಾರದ ಕೆಜಿಎಫ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಸಲಾಗಿತ್ತು. ಅಷ್ಟೇ ಅಲ್ಲ ಕೆಜಿಎಫ್ ಗಣಿಯಿಂದ ಸ್ವಲ್ಪ ದೂರದಲ್ಲಿ ಸೆಟ್ ನಿರ್ಮಿಸಲಾಗಿತ್ತು. ಸಿನಿಮಾ ಮುಗಿದ ಮೇಲೂ ವರ್ಷಗಳ ಕಾಲ ಸೆಟ್ ನ್ನು ಹಾಗೇ ಉಳಿಸಿಕೊಳ್ಳಲಾಗಿತ್ತು.

ಈಗ ಆ ಜಾಗಕ್ಕೆ ಹೋಗುವ ಅವಕಾಶವೂ ಜನರಿಗೆ ಸಿಕ್ಕಿದೆ. ಗೂಗಲ್ ನಲ್ಲಿ (Google ) ಕೆಜಿಎಫ್ ಸೆಟ್ ಎಂಬ ಸರ್ಚ್ ಗೆ ಸೆಟ್ ಗೆ ತೆರಳುವ ದಾರಿಯನ್ನೇ ತೋರಿಸುತ್ತಿದೆ. ಈ ವಿಚಾರ ಈಗ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಸದ್ಯ ಒಂದಾದ ಮೇಲೊಂದರಂತೆ ಕೆಜಿಎಫ್ ಸಿನಿಮಾ ತಂಡದಿಂದ ಅಪ್ಡೇಟ್ ಬರ್ತಿದ್ದು, ಮಾರ್ಚ್ 27 ರಂದು ಕೆಜಿಎಫ್-2 ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.
ಇದನ್ನೂ ಓದಿ : KGF Chapter 2 Yash : ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್ : ಮಾರ್ಚ್ 27 ಕ್ಕೆ ಕೆಜಿಎಫ್-2 ಟ್ರೇಲರ್ ರಿಲೀಸ್
ಇದಾದ ಮೇಲೆ ಏಪ್ರಿಲ್ 14 ರಂದು ಸಿನಿಮಾ ಬಹು ಭಾಷೆಯಲ್ಲಿ ತೆರೆ ಕಾಣಲಿದೆ. ಕಳೆದ ಮೂರು ವರ್ಷಗಳಿಂದ ಕೊರೋನಾ ಕಾರಣಕ್ಕೆ ಕೆಜಿಎಫ್-2 ರಿಲೀಸ್ ಮುಂದೂಡುತ್ತಲೇ ಬರಲಾಗಿತ್ತು. ಈಗ ಸಿನಿಮಾ ತೆರೆಗೆ ಸಿದ್ಧವಾಗಿರೋದರ ಜೊತೆಗೆ ಸೆಟ್ ನೋಡಲು ಅವಕಾಶವಿದೆ ಇದೆ ಎಂಬ ಸಂಗತಿಯೂ ರಿವೀಲ್ ಆಗಿದ್ದು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.
ಇದನ್ನೂ ಓದಿ : ಕೆಜಿಎಫ್-2 ನಟಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ : ಮೋದಿ ಪತ್ರದಲ್ಲೇನಿದೆ ಗೊತ್ತಾ?
(Google Showing the KGF Set way, Good news for Yash fans)