ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ : ಎಬಿಬಿ ದಾಳಿಯಿಂದ ಬಯಲಾಯ್ತು ಮಾಲ್‌, ಕಂಪೆನಿಗಳ ತೆರಿಗೆ ಕಳ್ಳಾಟ

ಬೆಂಗಳೂರು : ಬಿಬಿಎಂಪಿ ಮೇಲೆ‌ ನಡೆದ ಎಸಿಬಿ ದಾಳಿ ನಗರಾಢಳಿತದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದೆ. ಈ ಮಧ್ಯೆ ಬಿಬಿಎಂಪಿ ಮೇಲೆ ನಡೆದ ಎಸಿಬಿ ದಾಳಿ ನಾನಾ ಸ್ವರೂಪದ ಭ್ರಷ್ಟಾಚಾರವನ್ನು(BBMP universe corruption) ಬಿಚ್ಚಿಟ್ಟಿದ್ದು, ಬಿಬಿಎಂಪಿ ಅಧಿಕಾರಿಗಳನ್ನು ಬಳಸಿಕೊಂಡು ನಗರದ ಲಕ್ಷಾಂತರ ಕಂಪನಿಗಳು, ಮಾಲ್ ಗಳು ತೆರಿಗೆ ವಂಚನೆ ಎಸಗಿರೋದು ಬೆಳಕಿಗೆ ಬಂದಿದೆ.

ಅಂದಾಜು ಒಂದು ವಾರಗಳ ಕಾಲ ಬೃಹತ ಬೆಂಗಳೂರು ಮಹಾನಗರ ಪಾಲಿಕೆ (BBMP) ಮೇಲೆ ನಡೆದ ಎಸಿಬಿ ದಾಳಿ ಬಿಬಿಎಂಪಿ ಕರಾಳ‌ ಮುಖವಾಡವನ್ನು ಬಿಚ್ಚಿಟ್ಟಿದೆ. ಪ್ರತಿಯೊಂದು ಕೆಲಸ, ಅನುಮತಿ ಸೇರಿದಂತೆ ಎಲ್ಲ ವಿಚಾರಕ್ಕೂ ಲಂಚ ಪಡೆಯೋದು, ಹಲವು ಯೋಜನೆಗಳಿಗೆ ನಿಯಮ‌ಮೀರಿ ಅನುಮತಿ ನೀಡಿದ್ದು ಸೇರಿದಂತೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರೋದು ಸಾಬೀತಾಗಿದೆ. ಈ ಮಧ್ಯೆ ಈಗ ಬಿಬಿಎಂಪಿ ಲಂಚಾವತಾರದ ಇನ್ನೊಂದು ಮುಖ ಬಯಲಾಗಿದೆ. ಲಂಚ ಪಡೆದು ಬಿಬಿಎಂಪಿ ಅಧಿಕಾರಿಗಳು ತೆರಿಗೆ ವಸೂಲಿಯಲ್ಲೂ ಅಕ್ರಮ ಎಸಗಿದ್ದು ಸಾಬೀತಾಗಿದೆ. ಆಗ ಲಂಚ ಕೊಟ್ಟು ತೆರಿಗೆ ಪಾವತಿಯಲ್ಲಿ ಅನುಕೂಲ ಮಾಡಿಕೊಂಡ ಕಂಪನಿಗಳು, ಮಾಲ್ ಗಳಿಗೆ ಈಗ ಸಂಕಷ್ಟ ಎದುರಾಗಿದ್ದು, ಅಂಥಹ ಕಂಪನಿಗಳಿಗೆ ನೊಟೀಸ್ ನೀಡಲು ಎಸಿಬಿ ಸಿದ್ಧತೆ ನಡೆಸಿದೆ.

ಬಿಬಿಎಂಪಿ (BBMP) ಕಚೇರಿಗಳ ಮೇಲೆ ಎಸಿಬಿ ದಾಳಿ ವೇಳೆ ಕಂದಾಯ ವಿಭಾಗದಲ್ಲಿ ಸಾವಿರ ಕೋಟಿಗೂ ಅಧಿಕ ತೆರಿಗೆಯನ್ನ ಕಂಪನಿಗಳಿಂದ ಪಾವತಿಸಿಕೊಳ್ಳದೇ ಬಾಕಿ ಇರೋದು ಪತ್ತೆ ಯಾಗಿದೆ. ಮಾತ್ರವಲ್ಲ ಹಲವು ಮಾಲ್ ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಕೋಟಿ ಕೋಟಿ ತೆರಿಗೆ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ. ಸರ್ಕಾರದ ಕಂದಾಯ ನಿಯಮಗಳನ್ನ ಗಾಳಿಗೆ ತೂರಿ ಕಡಿಮೆ ತೆರಿಗೆ ವಸೂಲಿ ಮಾಡಿರುವ ಅಧಿಕಾರಿಗಳು ಬಿಬಿಎಂಪಿಗೆ ನಷ್ಟ ಎಸಗಿರೋದು ದಾಳಿ ತನಿಖೆ ವೇಳೆ ಗೊತ್ತಾಗಿದೆ. ಎ ಜೋನ್ ನಲ್ಲಿರುವ ಮಾಲ್ ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಸಿ ಜೋನ್ ಮಾದರಿಯ ತೆರಿಗೆ ವಸೂಲಿ ಮಾಡಿರುವ ಅಧಿಕಾರಿಗಳು ವಂಚನೆ ಎಸಗಿದ್ದಾರೆ.

ಎ ಜೋನ್ ನಲ್ಲಿ ಅತ್ಯಧಿಕ ತೆರಿಗೆ ವಸೂಲಿ (BBMP universe corruption) ಆಗುತ್ತದೆ.ಆದರೆ ಇಂತಹ ಕಡೆ ಸಿ ಜೋನ್ ಮಾದರಿಯ ತೆರಿಗೆ ವಸೂಲಿ ಮಾಡಿರುವುದು ದಾಳಿವೇಳೆಯಲ್ಲಿ ಪತ್ತೆಯಾಗಿದೆ. 2016 ರಿಂದ ಇದೇ ರೀತಿ ತೆರಿಗೆಯಲ್ಲಿ ಆಕ್ರಮದ ಮಾಹಿತಿ ಲಭ್ಯವಾಗಿದೆ. ಸದ್ಯ ತೆರಿಗೆ ವಂಚಿಸಿರುವ ಮಾಲ್ ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಲಿಸ್ಟ್ ಮಾಡುತ್ತಿರುವ ಎಸಿಬಿ ಈ ಕಂಪನಿಗಳು ಹಾಗೂ ಮಾಲ್ ಗಳಿಗೆ ಸದ್ಯದಲ್ಲೇ ನೊಟೀಸ್ ಜಾರಿಯಾಗಲಿದ್ದು ಸಂಕಷ್ಟ ಎದುರಾಗೋದು ಫಿಕ್ಸ್ ಎನ್ನಲಾಗ್ತಿದೆ.

ಇದನ್ನೂ ಓದಿ : Namma Metro : ಶಾಪಿಂಗ್ ಮಾಲ್ ಗಳಾಗ್ತಿವೇ ಬೆಂಗಳೂರಿನ ಮೆಟ್ರೋ ಸ್ಟೇಶನ್ ಗಳು

ಇದನ್ನೂ ಓದಿ : ಬೇಸಿಗೆ ಆರಂಭದಲ್ಲೇ ಬೆಂಗಳೂರಿಗರಿಗೆ ಶಾಕ್ ನೀಡಿದ ಜಲಮಂಡಳಿ

( BBMP universe corruption, mall and international companies tax evasion)

Comments are closed.