BWSSB Warning : ಬೇಸಿಗೆ ಆರಂಭದಲ್ಲೇ ಬೆಂಗಳೂರಿಗರಿಗೆ ಶಾಕ್ ನೀಡಿದ ಜಲಮಂಡಳಿ

ಬೆಂಗಳೂರು : ಶಿವರಾತ್ರಿ ಕೊನೆಯಾಗುತ್ತಿದ್ದಂತೆ ರಣಬಿಸಿಲಿನ ಬಿರುಬೇಸಿಗೆ ಕಾಲಿಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಬಿಸಿಲಿನ ಜೊತೆ ನೀರಿನ ಅಭಾವವೂ ಕಾಲಿಡಲು ಸಜ್ಜಾಗುತ್ತಿದೆ. ಈ ಮಧ್ಯೆ ನಗರಕ್ಕೆ ನೀರು ಹರಿಸುವ ಜಲಮಂಡಳಿ ಬೇಸಿಗೆಯ ಆರಂಭದಲ್ಲೇ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ಕೊಡಲು ಸಜ್ಜಾಗಿದೆ. ಹೌದು, ಜಲಮಂಡಳಿಯಿಂದ ಬರುವ ನೀರನ್ನು ಬೇಕಾಬಿಟ್ಟಿ ಬಳಸುವ ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ ಎಂದು ಬೆಂಗಳೂರಿನ ಜನತೆಗೆ ಬಿಡಬ್ಲ್ಯುಎಸ್‌ಎಸ್‌ಬಿ ವಾರ್ನ್ (BWSSB Warning) ಮಾಡಿದೆ.

ಇನ್ಮುಂದೇ ನಿಮ್ಮ‌ಮನೆಗೆ ಬಂದು ಬೀಳುವ ಜಲಮಂಡಳಿಯ ಕಾವೇರಿ ನೀರನ್ನು ಪೋಲುಮಾಡಿದ್ರೇ ನಿಮ್ಮ ಮೇಲೆ ದಂಡ ಬೀಳಲಿದೆ. ವಾಟರ್ ಟ್ಯಾಂಕ್ ಓವರ್ ಫ್ಲೋ ಆಗುವಂತಿಲ್ಲ
ಕೆಳಭಾಗದಲ್ಲಿ ಸಂಪ್ ತುಂಬಿ ನೀರು ಹರಿಯುವಂತಿಲ್ಲ. ವಿನಾಕಾರಣ ಮನೆಯ ನೀರು ರೋಡಲ್ಲಿ ಹರಿಯುವಂತಿಲ್ಲ ಎಂದು ಜಲಮಂಡಳಿ ನೀರು ಬಳಕೆದಾರರಿಗೆ ಸೂಚನೆ ನೀಡಿದೆ. ಹಾಗೊಂದು ವೇಳೆ ಕಾವೇರಿ ನೀರು ಪೋಲು ಮಾಡಿದ್ರೆ ದಂಡ ವಿಧಿಸೋದಾಗಿ ಜಲಮಂಡಳಿ ಎಚ್ಚರಿಕೆ (BWSSB Warning) ನೀಡಿದೆ.

ಸ್ವಯಂಚಾಲಿತವಾಗಿ ಪಂಪ್‌ ಆಫ್‌ ಆಗುವ ಆಟೊಮೆಟಿಕ್‌ ವಾಟರ್‌ ಕಂಟ್ರೋಲ್‌ ಸಿಸ್ಟಮ್‌ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವಂತೆ ಈಗಾಗಲೇ ಮನೆಗಳಿಗೆ ಜಲಮಂಡಳಿ ಸೂಚಿಸಿದೆ. ಆದರೂ ಸಾವಿರಾರು ಮನೆಗಳು ಈ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ. ಹೀಗೆ ತಂತ್ರಜ್ಞಾನ ಅಳವಡಿಸಿಕೊಳ್ಳದೇ, ನೀರು ಪೋಲು ಮಾಡುವ ಮನೆಯೊಂದಕ್ಕೆ ಪ್ರತಿದಿನ ನೂರು ರೂಪಾಯಿ ದಂಡ ವಿಧಿಸಲು ಜಲಮಂಡಳಿ (BWSSB Warning) ನಿರ್ಧರಿಸಿದೆ. ಒಂದೊಮ್ಮೆ ದಂಡ ಕಟ್ಟಿದ ಮೇಲೂ ಇದೇ ಪ್ರವೃತ್ತಿ ಮುಂದುವರೆಸಿದರೇ ನೀರಿನ ಕನೆಕ್ಷನ್ ಕತ್ತರಿಸಲು ಜಲಮಂಡಳಿ ತೀರ್ಮಾನಿಸಿದೆ.

ಈ ನಿಯಮದ ಬಗ್ಗೆ ಜಲ ಮಂಡಳಿ ಮುಖ್ಯ ಅಧೀಕ್ಷಕ ದೇವರಾಜ್ ಮಾಹಿತಿ ನೀಡಿದ್ದು, ಜನರ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ನೀರು ಹರಿದುಹೋಗುತ್ತದೆ. ಗಂಟೆಗಟ್ಟಲೆ, ಹಲವೆಡೆ ದಿನಗಟ್ಟಲೇ ಮೋರಿ ನೀರು ಹರಿಯುತ್ತೆ. ಇಂಥದಕ್ಕೆ‌ ಕಡಿವಾಣ ಹಾಕಲು ಜಲಮಂಡಳಿ ದಂಡ ವಿಧಿಸುವ ತೀರ್ಮಾನಕ್ಕೆ ಬಂದಿದೆ. ಇನ್ನು ಜಲಮಂಡಳಿ ಈ ತೀರ್ಮಾನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾವೇರಿ ನೀರೇ ಸಮರ್ಪಕವಾಗಿ ಬರಲ್ಲ. ಓವರ್ ಫ್ಲೋ ಆಗಿ ನೀರು ವ್ಯರ್ಥ ಮಾಡೋದು ತುಂಬ ವಿರಳ. ಇದು ಅವೈಜ್ಞಾನಿಕ ಯೋಜನೆ, ದಂಡ ಹಾಕೋದು ಸರಿಯಲ್ಲ. ಜನರಿಗೆ ವಿನಾ ಕಾರಣ ಹೊರೆಯಾಗಲಿದೆ. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಇನ್ನೂ ಲಸಿಕೆ ಪಡೆದಿಲ್ಲ ಲಕ್ಷಾಂತರ ಜನರು: ಲಸಿಕೆ ಪಡೆಯದವರ ಪತ್ತೆಗೆ ಪೊಲೀಸರ ಮೊರೆ ಹೋದ ಬಿಬಿಎಂಪಿ

ಇದನ್ನೂ ಓದಿ : ಬಾಗಮನೆ ಟೆಕ್‌ಪಾರ್ಕ್‌ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಅಗ್ನಿ ಅವಘಡ, ಅಗ್ನಿಶಾಮಕ ಸಿಬ್ಬಂದಿಗೆ ಗಾಯ

BWSSB Warning Bengaluru people in early summer

Comments are closed.