ಸೋಮವಾರ, ಏಪ್ರಿಲ್ 28, 2025
HomeCinemaMeghana Raj Sarja Award : ಸಾರೋಟಿನಲ್ಲಿ ಅದ್ದೂರಿ‌ ಮೆರವಣಿಗೆ, ಪ್ರಶಸ್ತಿ: ಸೋಷಿಯಲ್ ಮೀಡಿಯಾದಲ್ಲಿ ಖುಷಿ...

Meghana Raj Sarja Award : ಸಾರೋಟಿನಲ್ಲಿ ಅದ್ದೂರಿ‌ ಮೆರವಣಿಗೆ, ಪ್ರಶಸ್ತಿ: ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಮೇಘನಾ

- Advertisement -

Meghana Raj Sarja Award : ಸ್ಯಾಂಡಲ್ ವುಡ್ ನಟಿ ಮೇಘನಾ ಸರ್ಜಾ ಕಳೆದೊಂದು ವಾರದಿಂದ ಸುದ್ದಿಯಲ್ಲಿದ್ದರು. ಎರಡನೇ ಮದುವೆಯ ವಿಚಾರವನ್ನು ನೇರವಾಗಿ ಮಾತನಾಡೋ ಮೂಲಕ ಸದ್ದು ಮಾಡಿದ್ದ ನಟಿ ಮೇಘನಾ ಈಗ ಕ್ಯಾಲಿಪೋರ್ನಿಯಾದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಮೇಘನಾ ಸರ್ಜಾ ಸರ್ಜಾ ಬದುಕಿನಲ್ಲಿ ಅನುಭವಿಸಿದ ಏರಿಳಿತಗಳನ್ನು ಹಾಗೂ ಅದೆಲ್ಲವನ್ನು ಎದುರಿಸಿ ಮತ್ತೆ ವೃತ್ತಿ ಬದುಕಿನಲ್ಲಿ ತೊಡಗಿಕೊಂಡು ಮುನ್ನಡೆಸುತ್ತಿರುವ ಪರಿ ಕಂಡ ಕ್ಯಾಲಿಪೋರ್ನಿಯಾದ ಫೆಡರೇಶನ್ ಅಮೇರಿಕನ್ಸ್ ಆಫ್ ನಾರ್ತೇನ್ ಕ್ಯಾಲಿಪೋರ್ನಿಯಾದ ಸಂಘಟನೆಯು ಫಾಗ್ ಆಫ್ ಹೀರೋ ಪ್ರಶಸ್ತಿ ನೀಡಿದೆ.

ಹೋರಾಟಗಳನ್ನು ಎದುರಿಸಿ ಬದುಕು ಕಟ್ಟಿದ ಸೆಲೆಬ್ರೆಟಿಗಳಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಈ ಹಿಂದೆ ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಪಡೆದುಕೊಂಡಿದ್ದಾರೆ. ಆದರೆ ಸೌತ್ ಇಂಡಸ್ಟ್ರಿ ಯಲ್ಲಿ ನಡೆದ ಈ ಪ್ರಶಸ್ತಿ ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಮೇಘನಾ ಸರ್ಜಾ ಪಾತ್ರರಾಗಿದ್ದಾರೆ‌. ವಿಶಿಷ್ಟವಾಗಿ ಸ್ವಾತಂತ್ರ್ಯೋತ್ಸವ ಆಚರಣೆಯೊಂದಿಗೆ ನಡೆಯೋ ಈ ಕಾರ್ಯಕ್ರಮದಲ್ಲಿ ಮೇಘನಾ ಸರ್ಜಾ ಖುಷಿಯಿಂದ ಪಾಲ್ಗೊಂಡಿದ್ದಾರೆ.

ಸಮಾರಂಭಕ್ಕೂ ಮುನ್ನ ಮೇಘನಾ ಸರ್ಜಾ ಸೇರಿದಂತೆ ಎಲ್ಲ ಗಣ್ಯರನ್ನು ಸಾರೋಟಿನಲ್ಲಿ ಮೆರವಣಿಗೆ‌ ಮಾಡಲಾಯಿತು. ಈ ಮೆರವಣಿಗೆಯಲ್ಲಿ ನಟಿ ಮೇಘನಾ ಸರ್ಜಾ ಕ್ರೀಂ ಬಣ್ಣದ ಗ್ರ್ಯಾಂಡ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಮೇಘನಾ ಗ್ರ್ಯಾಂಡ್ ಡ್ರೆಸ್ ನಲ್ಲಿ ಸಾರೋಟಿನಲ್ಲಿ ಕೂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿ ಗಳು ಮೇಘನಾ ಗೆ ಶುಭಹಾರೈಸಿದ್ದಾರೆ. ಸ್ಯಾನಪ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಿದ್ದ ಮೇಘನಾ ಅಲ್ಲಿಯ ತಾಣಗಳಿಗೂ ವಿಸಿಟ್ ಮಾಡಿದ್ದು ಆ ಫೋಟೋಗಳನ್ನು ಕೂಡ ಮೇಘನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮನ್ನು ಕ್ಯಾಲಿಪೋರ್ನಿಯಾಗೆ ಆಹ್ವಾನಿಸಿ ಸನ್ಮಾನಿಸಿದ ಕ್ಯಾಲಿಪೋರ್ನಿಯಾ ಫೆಡರೇಶನ್ ನವರಿಗೆ ಮೇಘನಾ ರಾಜ್ ಧನ್ಯವಾದ ಹೇಳಿದ್ದಾರೆ.

ಸದ್ಯ ಮೇಘನಾ ರಾಜ್ ಸರ್ಜಾ ಕನ್ನಡದ ಹಲವು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಜಾಹೀರಾತು ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಮುಂದಿನ ದಿನದಲ್ಲಿ ಹೋಂ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೂ ಚಿಂತನೆ ನಡೆಸಿದ್ದಾರಂತೆ. ಇದೆಲ್ಲದರ ಮೂಲಕ ಚಿರು ಕನಸು ಈಡೇರಿಸೋದು ಮೇಘನಾ ಅಶಯ. ಪ್ರಶಸ್ತಿಯನ್ನು ಮೇಘನಾ ಚಿರು ಆಶಯದಂತೆ ಸ್ವೀಕರಿಸಿದ್ದು, ಚಿರು ನೆನಪಿನ ಜೊತೆ ಅವರ ಕನಸುಗಳನ್ನು ಈಡೇರಿಸೋದು ನನ್ನ ಗುರಿ ಎಂದು ಮೇಘನಾ ಹಲವು ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

ಇದನ್ನೂ ಓದಿ : Daali Dhananjay Birthday : ಹುಟ್ಟುಹಬ್ಬ ಮಾಡಿಕೊಳ್ಳಲ್ಲ ಎಂದ ಡಾಲಿಧನಂಜಯ್: ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು ಗೊತ್ತಾ

ಇದನ್ನೂ ಓದಿ : Puneeth Rajkumar name : ಅಭಿಮಾನಿ ಮಗುಗೆ ಅಪ್ಪು ಹೆಸರು, ಸ್ಪೆಶಲ್ ಗಿಫ್ಟ್ : ಶಿವಣ್ಣ,ಆಶ್ವಿನಿ ಕಾರ್ಯಕ್ಕೆ ಶ್ಲಾಘನೆ

Grand procession in Saroti, award Meghana raj sarja shared her happiness on social media

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular