Shubman Gill hits maiden hundred : ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶುಭಮನ್ ಗಿಲ್


ಹರಾರೆ: ಭಾರತ ತಂಡದ ಭವಿಷ್ಯದ ತಾರೆ ಶುಭಮನ್ ಗಿಲ್ Shubman Gill hits maiden hundred) ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ(India vs Zimbabwe ODI Series) 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಶುಭಮನ್ ಗಿಲ್ ಕೇವಲ 82 ಎಸೆತಗಳಲ್ಲಿ ಚೊಚ್ಚಲ ಶತಕ ಪೂರ್ತಿಗೊಳಿಸಿದರು.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿ ಅಜೇಯ 82 ರನ್ ಬಾರಿಸಿದ್ದ ಗಿಲ್, 2ನೇ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿ 33 ರನ್ ಗಳಿಸಿದ್ದರು. 3ನೇ ಪಂದ್ಯದಲ್ಲಿ ಮತ್ತೆ ಮಿಂಚಿದ ಪಂಜಾಬ್ ಬ್ಯಾಟ್ಸ್’ಮನ್ 23 ವರ್ಷದ ಪಂಜಾಬ್ ಆಟಗಾರ, 97 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು ಒಂದು ಸಿಕ್ಸರ್ ನೆರವಿನಿಂದ ಸ್ಫೋಟಕ 130 ರನ್ ಸಿಡಿಸಿದರು. ಆ ಮೂಲಕ ತಾವು ಭಾರತೀಯ ಕ್ರಿಕೆಟ್’ನ ಭವಿಷ್ಯದ ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ಕಳೆದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಅಬ್ಬರಿಸಿದ್ದ ಶುಭಮನ್ ಗಿಲ್, 3 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 205 ರನ್ ಗಳಿಸಿದ್ದರು. 3ನೇ ಪಂದ್ಯದಲ್ಲಿ ಅಜೇಯ 98 ರನ್ ಗಳಿಸಿದ್ದ ಗಿಲ್ ಅವರಿಗೆ ಕೇವಲ 2 ರನ್’ಗಳ ಅಂತರದಲ್ಲಿ ಚೊಚ್ಚಲ ಶತಕ ಕೈತಪ್ಪಿತ್ತು. ಅದನ್ನೀಗ ಜಿಂಬಾಬ್ವೆ ಪ್ರವಾಸದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ದಕ್ಕಿಸಿಕೊಂಡಿದ್ದಾರೆ.

ಮೊದಲ ಶತಕದ ಸಂಭ್ರಮದಲ್ಲಿರುವ ಪಂಜಾಬ್ ಆಟಗಾರನಿಗೆ ಪಂಜಾಬ್’ನ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವಿಟರ್’ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

23 ವರ್ಷದ ಬಲಗೈ ಬ್ಯಾಟ್ಸ್’ಮನ್ ಶುಭಮನ್ ಗಿಲ್ ಭಾರತ ಅಂಡರ್-19 ವಿಶ್ವಕಪ್ ಹೀರೋ. 2018ರಲ್ಲಿ ನ್ಯೂಜಿಲೆಂಡ್’ನಲ್ಲಿ ನಡೆದ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಗಿಲ್ 6 ಪಂದ್ಯಗಳಿಂದ ಒಂದು ಶತಕ ಮತ್ತು 3 ಅರ್ಧಶತಕಗಳೊಂದಿಗೆ 124ರ ಅಮೋಘ ಸರಾಸರಿಯಲ್ಲಿ 372 ರನ್ ಕಲೆ ಹಾಕಿದ್ದರು. ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಭಾರತ ಫೈನಲ್ ತಲುಪಲು ಕಾರಣರಾಗಿದ್ದರು.

ಇದನ್ನೂ ಓದಿ : KL Rahul Zimbabwe player : ಕೆ.ಎಲ್ ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಬಂದ ಜಿಂಬಾಬ್ವೆ ಆಟಗಾರ

ಇದನ್ನೂ ಓದಿ : Virat Kohli 1000 days without Century: ಶತಕವಿಲ್ಲದೆ ಸಾವಿರ ದಿನ ಕಳೆದ ವಿರಾಟ್ ಕೊಹ್ಲಿ

Zimbabwe vs India Shubman Gill hits maiden hundred

Comments are closed.