ಭಾನುವಾರ, ಜೂನ್ 15, 2025
HomeCinemaHead Bush Controversy : ಪರ-ವಿರೋಧಗಳ ಕತ್ತರಿಯಲ್ಲಿ 'ಹೆಡ್ ಬುಷ್' ವಿವಾದ; ಡಾಲಿ ಪರ ನಿಂತ...

Head Bush Controversy : ಪರ-ವಿರೋಧಗಳ ಕತ್ತರಿಯಲ್ಲಿ ‘ಹೆಡ್ ಬುಷ್’ ವಿವಾದ; ಡಾಲಿ ಪರ ನಿಂತ ಅಭಿಮಾನಿ ಬಳಗ

- Advertisement -

ಬೆಂಗಳೂರು: Head Bush support dhananjay :ಡಾಲಿ ಧನಂಜಯ್ ನಿರ್ಮಿಸಿ, ನಟಿಸಿರುವ ಹೆಡ್ ಬುಶ್ ವಿವಾದ ತಾರಕಕ್ಕೇರಿದೆ. ಚಿತ್ರದಲ್ಲಿ ವೀರಗಾಸೆ ಹಾಗೂ ಕರಗಕ್ಕೆ ಅಪಮಾನ ಮಾಡಲಾಗಿದೆ ಅಂತ ಕೆಲ ಸಂಘಟನೆ, ಸಮುದಾಯಗಳು ಸಿನಿಮಾ ಪ್ರದರ್ಶನ ರದ್ದುಗೊಳಿಸುವಂತೆ ಆಗ್ರಹಿಸಿವೆ. ಈ ಬೆನ್ನಲ್ಲೇ ನಟ ಡಾಲಿ ಧನಂಜಯ್‍ಗೆ ಅಭಿಮಾನಿಗಳಿಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಡಾಲಿ ಬೆಂಬಲಿಸಿ ಸೋಶಿಯಲ್ ಮೀಡಿಯಾದಲ್ಲಿ ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ’ ಎಂಬ ಅಭಿಯಾನ ಹುಟ್ಟಿಕೊಂಡಿದ್ದು, ‘ವಿ ಸಪೋರ್ಟ್ ಧನಂಜಯ್’ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ, ಧನಂಜಯ್ ಮೇಲಿನ ಅಭಿಮಾನದಿಂದ ವಿರೋಧಿಗಳಿಗೆ ಟಕ್ಕರ್ ನೀಡುವ ಸಲುವಾಗಿ ಅಭಿಮಾನಿಗಳು ಸಿನಿಮಾದ ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿದರೆ, ಇನ್ನೂ ಕೆಲವರು ಟಿಕೆಟ್ ಖರೀದಿಸಿ ಉಚಿತವಾಗಿ ಹಂಚುತ್ತಿವೆ. ಈ ಮೂಲಕ ಯಾವುದೇ ಕಾರಣಕ್ಕೂ ಚಿತ್ರ ಸೋಲದಂತೆ ಪ್ರಯತ್ನ ನಡೆಯುತ್ತಿದೆ.

ಅಮೆರಿಕಾದಲ್ಲಿರುವ ವ್ಯಕ್ತಿಯೊಬ್ಬರು ಬೆಂಗಳೂರಿನ ಲಗ್ಗೆರೆ ಬಳಿಯ ಥಿಯೇಟರ್ ಒಂದರಲ್ಲಿ 10 ಟಿಕೆಟ್ ಬುಕ್ ಮಾಡಿ ಯಾರೋ ಬೇಕಾದರೂ ಈ ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸುವಂತೆ ಆಫರ್ ನೀಡಿದ್ದಾರೆ. ಸದ್ಯ ಟ್ವಿಟರ್, ವಾಟ್ಸಾಪ್, ಫೇಸ್ ಬುಕ್ ಮೊದಲಾದ ಸೋಶಿಯಲ್ ಮಾಧ್ಯಮಗಳಲ್ಲಿ ಡಾಲಿ ಧನಂಜಯ್ ಪರ ಅಭಿಮಾನಿಗಳು ಧ್ವನಿ ಎತ್ತಿರುವುದು ಚಿತ್ರತಂಡಕ್ಕೆ ಬಲ ಬಂದಂತಾಗಿದೆ.

ಅಂದುಕೊಂಡಷ್ಟು ಸುಲಭವಾಗಿರದ ಡಾಲಿ ಸಿನಿಮಾ ಹಾದಿ:
ಪ್ರಸ್ತುತ ದಿನಗಳಲ್ಲಿ ಒಬ್ಬ ಅತ್ಯುತ್ತಮ ನಟ ಎನಿಸಿಕೊಂಡು, ಲಕ್ಷಾಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿರುವ ನಟ ಡಾಲಿ ಧನಂಜಯ್ ಸಿನಿಮಾ ಜರ್ನಿ ಕಲ್ಲು-ಮುಳ್ಳುಗಳಿಂದ ತುಂಬಿತ್ತು. ಐಟಿಯಲ್ಲಿ ಉತ್ತಮ ಸಂಬಳಕ್ಕೆ ದುಡಿಯುತ್ತಿದ್ದ ಅವರು ಸಿನಿಮಾದ ಮೇಲಿನ ವ್ಯಾಮೋಹದಿಂದ ಉದ್ಯೋಗ ಬಿಟ್ಟು ಸಿನಿರಂಗಕ್ಕೆ ಎಂಟ್ರಿಕೊಟ್ಟವರು. ತನ್ನ ಯಶಸ್ಸಿಗಾಗಿ ಅವಮಾನಗಳನ್ನೂ ಲೆಕ್ಕಿಸದೇ ಹಲವು ವರ್ಷಗಳ ತಾಳ್ಮೆಯಿಂದ ಕಾದರು. ಬಳಿಕ ಟಗರು ಸಿನಿಮಾ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತ್ತು. ಆ ಬಳಿಕ ಹಿಂತಿರುಗಿ ನೋಡದ ಅವರು ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ಹೀರೋ, ವಿಲನ್, ಪೊಲೀಸ್ ಪಾತ್ರಗಳಲ್ಲಿ ಮಿಂಚಿದರು. ಬಡವ ರಾಸ್ಕಲ್ ಚಿತ್ರದ ಮೂಲಕ ನಿರ್ಮಾಪಕನಾಗಿ ಗುರುತಿಸಿಕೊಂಡರು. ನಿರ್ಮಾಪಕನಾಗಿ ಮೊದಲ ಚಿತ್ರದಲ್ಲೇ ಗೆದ್ದ ಡಾಲಿಗೆ ತನ್ನ 2ನೇ ಸಿನಿಮಾ ವಿವಾದ ಸೃಷ್ಟಿಸಿದೆ. ಅಲ್ಲಲ್ಲಿ ಪ್ರತಿಭಟನೆಗಳು ಮಾತ್ರವಲ್ಲದೇ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. ನಿನ್ನೆಯಷ್ಟೆ ತಾನು ವೀರಶೈವ, ಕರಗಕ್ಕೆ ಅಪಮಾನ ಮಾಡಿಲ್ಲ ಎಂಬ ಸ್ಪಷ್ಟನೆ ನೀಡಿದ್ದರೂ ಹೋರಾಟ ಮುಂದುವರೆದಿದೆ. ಈ ಬೆನ್ನಲ್ಲೇ ಡಾಲಿ ಹಿಂದೆ ದೊಡ್ಡ ಅಭಿಮಾನಿಗಳ ಬಳಗ ಸಪೋರ್ಟ್ ನೀಡಲು ನಿಂತಿವೆ.

ಡಾಲಿ ತುಂಬಾ ಕಷ್ಟಪಟ್ಟು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಪ್ರಗತಿಪರ ಚಿಂತಕರೂ ಹೌದು, ಅಪ್ಪಟ ಅಂಬೇಡ್ಕರ್ ವಾದಿಯಾಗಿರುವ ಮಾನವತಾವಾದಿಯೂ ಹೌದು. ಅವರನ್ನು ತುಳಿಯುವ ಕೆಲಸ ಮಾಡಬಾರದು. ಚಿತ್ರದ ಬಗ್ಗೆ ಅಪಪ್ರಚಾರ ನಿಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರು ಬೇಡಿಕೆಯಿಟ್ಟಿದ್ದಾರೆ.

ಇದನ್ನೂ ಓದಿ: KSCA felicitate Roger Binny : ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ನಾಳೆ ತವರೂರ ಗೌರವ, ಚಿನ್ನಸ್ವಾಮಿಯಲ್ಲಿ ನಡೆಯಲಿದೆ ಅದ್ಧೂರಿ ಸನ್ಮಾನ

ಇದನ್ನೂ ಓದಿ: BCCI offers equal pay:ಟೀಂ ಇಂಡಿಯಾ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ : ಬಿಸಿಸಿಐ ಐತಿಹಾಸಿಕ ಘೋಷಣೆ

head bush controversy: we support dhananjay campaign in social media

RELATED ARTICLES

Most Popular