Poor level plate let : ರಕ್ತದ ಪ್ಲಾಸ್ಮಾ ಬದಲು ಮುಸುಂಬಿ ಜ್ಯೂಸ್‌ ಪ್ರಕರಣ ಬಿಗ್ ಟ್ವಿಸ್ಟ್

ಲಕ್ನೋ : (Poor level plate let) ಡೆಂಗ್ಯೂ ರೋಗಿಗೆ ರಕ್ತದ ಪ್ಲಾಸ್ಮಾ ಬದಲು ಮುಸುಂಬಿ ಜ್ಯೂಸ್‌ ನೀಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸರ್ಕಾರ ತನಿಖೆಗೆ ಆದೇಶಿಸಿದೆ.ಡೆಂಗ್ಯೂ ರೋಗಿಗೆ ರಕ್ತದ ಪ್ಲಾಸ್ಮಾ ಬದಲು ಮುಸುಂಬಿ ಜ್ಯೂಸ್‌ ನೀಡಿರಲಿಲ್ಲ, ಬದಲಾಗಿ ಕಳಪೆ ಮಟ್ಟದ ಪ್ಲೇಟ್‌ ಲೆಟ್‌(Poor level plate let) ಗಳನ್ನು ನೀಡಲಾಗಿತ್ತು ಎಂಬ ಮಾಹಿತಿ ಬಯಲಾಗಿದೆ.

ಸದ್ಯದ ವರದಿಗಳ ಪ್ರಕಾರ ರೋಗಿಗೆ ಕಳಪೆ ರಕ್ತದ ಪ್ಲೇಟ್‌ ಲೆಟ್‌ (Poor level plate let)ಗಳನ್ನು ನೀಡಲಾಗಿತ್ತು. ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಪ್ಲೇಟ್‌ ಲೆಟ್‌ ಗಳನ್ನು ಕಳಪೆ ಮಟ್ಟದಲ್ಲಿ ಸಂಗ್ರಹಿಸಲಾಗಿತ್ತು. ಅದಲ್ಲದೆ ಕಳಪೆ ಮಟ್ಟದ ಪ್ಲೇಟ್‌ ಲೆಟ್‌ ಗಳು ಹೆಪ್ಪುಗಟ್ಟಿರುವ ಕಾರಣದಿಂದ ಮೂಸುಂಬಿ ಹಣ್ಣಿನ ರಸದ ಬಣ್ಣಕ್ಕೆ ತಿರುಗಿರಬಹುದು, ಆದರೆ ಅಲ್ಲಿರುವುದು ಕಳಪೆ ಪ್ಲೇಟ್‌ ಲೆಟ್‌ ಹೊರತು ಮುಸುಂಬಿ ಜ್ಯೂಸ್‌ ಅಲ್ಲ. ಕಳಪೆ ಮಟ್ಟದ ಪ್ಲೇಟ್‌ ಲೆಟ್‌(Poor level plate let) ನೀಡಿರುವುದಕ್ಕೆ ರೋಗಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ಸಂಜಯ್‌ ಕುಮಾರ್ ಕತ್ರಿ ಅವರು ತಿಳಿಸಿದ್ದಾರೆ. ರಕ್ತದ ಪ್ಲಾಸ್ಮಾ ಬದಲು ಮುಸುಂಬಿ ಜ್ಯೂಸ್‌ ಪ್ರಕರಣಕ್ಕೆ ಇದೀಗ ಹೊಸದೊಂದು ಟ್ವಿಸ್ಟ್‌ ಸಿಕ್ಕಿದೆ .

ಇದನ್ನೂ ಓದಿ : Head Bush Controversy: ಪರ-ವಿರೋಧಗಳ ಕತ್ತರಿಯಲ್ಲಿ ‘ಹೆಡ್ ಬುಷ್’ ವಿವಾದ; ಡಾಲಿ ಪರ ನಿಂತ ಅಭಿಮಾನಿ ಬಳಗ

ಇದನ್ನೂ ಓದಿ : man records wife attempting suicide:ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋ ರೆಕಾರ್ಡ್​ ಮಾಡಿದ ಪತಿರಾಯ

ಕಳೆದ ವಾರ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ ನ ಆಸ್ಪತ್ರೆಯೊಂದರಲ್ಲಿ 32 ವರ್ಷದ ಡೆಂಗ್ಯೂ ರೋಗಿಯೊಬ್ಬರಿಗೆ ರಕ್ತದ ಬದಲಿಗೆ ಮುಸುಂಬಿ ಜ್ಯೂಸ್‌ ನೀಡಿ ಆ ವ್ಯಕ್ತಿ ಸಾವನ್ನಪ್ಪಿದ್ದರು ಎಂಬ ಆರೋಪದ ಹಿನ್ನಲೆಯಲ್ಲಿ ತನಿಖೆ ಆರಂಭವಾಗಿದ್ದು, 10 ಮಂದಿ ಆರೋಪಿಗಳನ್ನು ಬಂದಿಸಲಾಗಿತ್ತು. ಈ ಘಟನೆಯ ಬಳಿಕ ಆಸ್ಪತ್ರೆಯನ್ನು ಸೀಲ್‌ ಮಾಡಲಾಗಿತ್ತು. ಇದಾದ ಬಳಿಕ ತನಿಖಾ ತಂಡವನ್ನು ರಚಿಸಿದ್ದು, ತನಿಖೆಯ ಬಳಿಕ ಯಾವುದೇ ಅನುಮತಿಯನ್ನು ಪಡೆಯದೆ ಅನಧೀಕೃತವಾಗಿ ಆಸ್ಪತ್ರೆಯನ್ನು ನಿರ್ಮಿಸಿರುವುದು ತಿಳಿದು ಬಂದಿತ್ತು. ಈ ಘಟನೆಯ ಬೆನ್ನಲ್ಲೆ ಅನಧೀಕೃತವಾಗಿ ನಿರ್ಮಿಸಿದ ಖಾಸಗಿ ಆಸ್ಪತ್ರೆಯನ್ನು ನೆಲಸಮ ಮಾಡುವುದಾಗಿ ಸರ್ಕಾರ ನೋಟಿಸ್‌ ಕಳಿಸಿತ್ತು . ಅನುಮತಿ ಇಲ್ಲದೆ ನಿರ್ಮಿಸಿದ ಆಸ್ಪತ್ರೆಯನ್ನು ಶುಕ್ರವಾರದೊಳಗಾಗಿ ತೆರವು ಮಾಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.ಈ ಘಟನೆಯ ಬೆನ್ನಲ್ಲೆ ಇದೀಗ ಈ ಪ್ರಕರಣಕ್ಕೆ ಸಂಭಂದಿಸಿದಂತೆ ಹೊಸದೊಂದು ಟ್ವಿಸ್ಟ್‌ ಸಿಕ್ಕಿದೆ.

ಇದನ್ನೂ ಓದಿ : KSCA felicitate Roger Binny : ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ನಾಳೆ ತವರೂರ ಗೌರವ, ಚಿನ್ನಸ್ವಾಮಿಯಲ್ಲಿ ನಡೆಯಲಿದೆ ಅದ್ಧೂರಿ ಸನ್ಮಾನ

(Poor level plate let) The case of giving musumbi juice instead of blood plasma to a dengue patient got a big twist. The Uttar Pradesh government has ordered an investigation into the case. It has been revealed that the dengue patient was not given musumbi juice instead of blood plasma, but poor level platelets were given instead.

Comments are closed.