man records wife attempting suicide :ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋ ರೆಕಾರ್ಡ್​ ಮಾಡಿದ ಪತಿರಾಯ

ಉತ್ತರ ಪ್ರದೇಶ : man records wife suicide : ದೇಶದಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಜರುಗಬಾರದು ಅಂತಾ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರನ್ನು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬಾರದಂತೆ ತಡೆಯಲು ಸಹಾಯವಾಣಿ ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಲೇ ಇದ್ದರೂ ಸಹ ಇನ್ನೂ ಕೂಡ ಆತ್ಮಹತ್ಯೆಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದೇ ಮಾತಿಗೆ ಉದಾಹರಣೆ ಎಂಬಂತೆ ದಾಂಪತ್ಯ ಕಲಹದಿಂದ ಮನನೊಂದಿದ್ದ ಗೃಹಿಣಿಯೊಬ್ಬಳು ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ. ಇನ್ನೊಂದು ವಿಚಿತ್ರ ಏನು ಅಂದರೆ ಪತ್ನಿಯು ಆತ್ಮಹತ್ಯೆಗೆ ಶರಣಾಗುತ್ತಿದ್ದುದನ್ನು ನೋಡಿದ ಪತಿಯು ಆಕೆಯನ್ನು ತಡೆಯುವುದು ಬಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾನೆ.

ಮೃತ ಗೃಹಿಣಿ ಶೋಭಿತಾ ಗುಪ್ತಾ ಎಂಬಾಕೆ ಮೊದಲ ಪ್ರಯತ್ನದಲ್ಲಿ ವಿಫಲಳಾದ ಬಳಿಕ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಲೇ ಇದ್ದಳು. ಇದನ್ನು ಮೊಬೈಲ್​ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಳ್ತಿದ್ದ ಪತಿ ಸಂಜೀವ್​ ಪತ್ನಿಯನ್ನು ಉಳಿಸುವ ಸಣ್ಣ ಪ್ರಯತ್ನ ಕೂಡ ಮಾಡಿಲ್ಲ. ಶೋಭಿತಾ ಗುಪ್ತಾ ಆತ್ಮಹತ್ಯೆಗೆ ಶರಣಾದ ಬಳಿಕ ಆಕೆಯ ಪೋಷಕರಿಗೆ ಮಾಹಿತಿ ನೀಡಿದ ಸಂಜೀವ್​ ವಿಡಿಯೋವನ್ನೂ ಕಳುಹಿಸಿಕೊಟ್ಟಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೋಷಕರಿಗೆ ಆಕೆಯ ಶವ ಹಾಸಿಗೆ ಮೇಲೆ ಬಿದ್ದಿರುವುದು ಕಂಡಿದೆ.

ನಾವು ಪುತ್ರಿಯ ಮನೆಗೆ ಬರುವ ವೇಳೆಗೆ ಆಕೆಯ ಶವವು ಹಾಸಿಗೆಯ ಮೇಲಿತ್ತು. ಸಂಜೀವ್​ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲೇ ಇಲ್ಲ. ನಾವು ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ವೈದ್ಯರು ಅಷ್ಟರಲ್ಲಾಗಲೇ ಆಕೆ ಮೃತ ಪಟ್ಟಿದ್ದಾಳೆ ಎಂದು ಘೋಷಣೆ ಮಾಡಿದರು. ಸಂಜೀವ್​ ನಮಗೆ ಮಗಳ ಆತ್ಮಹತ್ಯೆಯ ವಿಡಿಯೋವನ್ನು ತೋರಿಸಿದ್ದಾನೆ. ಅಲ್ಲದೇ ಹಿಂದೆಯೂ ಆಕೆಯ ಈ ರೀತಿ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿದ್ದಳು ಎಂದು ಕೂಡ ಹೇಳಿಕೊಂಡಿದ್ದ ಎಂದು ಶೋಭಿತಾ ತಂದೆ ರಾಜ್​ಕಿಶೋರ್​ ಹೇಳಿ್ದ್ದಾರೆ.

ಪತಿಯೊಂದಿಗೆ ಜಗಳ ಮಾಡಿಒಂಡ ಬಳಿಕ ಪತ್ನಿಯು ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಖ್ಕೆ ತೆರಳಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪತಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಎಸಿಪಿ ಅನುಪ್​ ಸಿಂಗ್​​ ಹೇಳಿದ್ದಾರೆ.

ಇದನ್ನು ಓದಿ : India Offered Bad Sandwich : ಸಿಡ್ನಿಯಲ್ಲಿ ಭಾರತ ತಂಡಕ್ಕೆ “ಕೆಟ್ಟು ಹೋಗಿದ್ದ ಸ್ಯಾಂಡ್ ವಿಚ್” ನೀಡಿದ ವಿಶ್ವಕಪ್ ಆಯೋಜಕರು, ಐಸಿಸಿಗೆ ದೂರಿತ್ತ ಟೀಮ್ ಇಂಡಿಯಾ

ಇದನ್ನೂ ಓದಿ : India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ

UP: Kanpur man records wife attempting suicide on camera

Comments are closed.