ಭಾನುವಾರ, ಏಪ್ರಿಲ್ 27, 2025
HomeCinemaHead Bush Movie Controversy : ಡಾಲಿ ಹೆಡ್ ಬುಷ್ ಗೆ ಕಂಟಕ : ಕಾನೂನು...

Head Bush Movie Controversy : ಡಾಲಿ ಹೆಡ್ ಬುಷ್ ಗೆ ಕಂಟಕ : ಕಾನೂನು ಸಮರದ ಎಚ್ಚರಿಕೆ ನೀಡಿದ ಜಯರಾಜ್ ಕುಟುಂಬ

- Advertisement -

ಬಡವ ರ್ಯಾಸ್ಕಲ್ ಸಿನಿಮಾದ ಬಳಿಕ ಟಗರು ಖ್ಯಾತಿಯ ನಟ ಡಾಲಿ ಧನಂಜಯ್ ತೆರೆಗೆ ತರ್ತಿರೋ ಸಿನಿಮಾ ಹೆಡ್ ಬುಷ್ (Head Bush Movie Controversy). ಸಿನಿಮಾ ನಟನೆಯ ಜೊತೆಗೆ ಹೆಡ್ ಬುಷ್ ನಿರ್ಮಾಣಕ್ಕೂ ಬಂಡವಾಳ ಹೂಡಿದ್ದಾರೆ ಡಾಲಿ ಧನಂಜಯ್. ಆದರೆ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ಗೆ ಸಿದ್ಧವಾಗ್ತಿರೋ ಸಿನಿಮಾ ಗೆ ಈ ಕಂಟಕ ಎದುರಾಗಿದೆ.

ಎಲ್ಲರಿಗೂ ಗೊತ್ತಿರೋ ಹಾಗೇ ಹೆಡ್ ಬುಷ್ ಒಂದು ಕಾಲದ ಅಂಡರ್ ವರ್ಲ್ಡ್ ಡಾನ್ ಜಯರಾಜ್ ಕತೆ. ಪಾತಕ ಲೋಕವನ್ನೇ ನಡುಗಿಸಿದ್ದ ಜಯರಾಜ್ ಕತೆಯನ್ನು ತೆರೆಗೆ ತರಲು ಡಾಲಿ ಧನಂಜಯ್ ಸಜ್ಜಾಗಿದ್ದರು. ಈಗ ಈ ಸಿನಿಮಾಗೆ ಜಯರಾಜ್ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಡ್’ಬುಷ್ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿಗೆ ಡಾನ್ ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ ಆಗ್ರಹಿಸಿದ್ದಾರೆ.

ಈ ಕುರಿತು ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ ಡಾನ್ ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್, ಎಂ.ಪಿ‌.ಜಯರಾಜ್ ಜೀವನಾಧಾರಿತ ಚಿತ್ರ ಹೆಡ್’ಬುಷ್ ಎಂದು ಹೇಳಲಾಗ್ತಿದೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಆ ಟ್ರೇಲರ್ ನಲ್ಲಿ ನಮ್ಮ ತಂದೆ  ಜಯರಾಜ್ ರನ್ನ ಕೆಟ್ಟ ವ್ಯಕ್ತಿಯಂತೆ ತೋರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು. ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನ ವಿರೋಧಿ ಸಿದವರು. ಕುಟುಂಬಸ್ಥರ ಅನುಮತಿ ಪಡೆಯದೇ ತಂದೆಯವರ ಜೀವನಾಧಾರಿತ ಕಥೆಯನ್ನ ಚಿತ್ರ ಮಾಡಲು ಹೊರಟಿದ್ದಾರೆ. ಇದರಿಂದ ನಮ್ಮ ಕುಟುಂಬದವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ.ಹೀಗಾಗಿ ಹೆಡ್ ಬುಷ್ ಚಿತ್ರದ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿಗೆ ನೀಡಿದ ದೂರಿನಲ್ಲಿ ಜಯರಾಜ್ ಪುತ್ರ ಆಗ್ರಹಿಸಿದ್ದಾರೆ.

ಅಗ್ನಿಶ್ರೀಧರ್ ರಚಿಸಿರುವ ಕಥಾಹಂದರ ಹೊಂದಿರುವ ಹೆಡ್ ಬುಷ್  ಚಿತ್ರವನ್ನು ಡಾಲಿ ಪಿಕ್ಚರ್ಸ್ ಅಡಿಯಲ್ಲಿ ತೆರೆಗೆ ತರಲು ಡಾಲಿ ಧನಂಜಯ್ ಸಿದ್ಧವಾಗಿದ್ದಾರೆ. ಆದರೆ ಈಗ ಈ ಸಿನಿಮಾಗೆ ಜಯರಾಜ್ ಕುಟುಂಬದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದೊಮ್ಮೆ ನಮ್ಮ ಅನುಮತಿ ಪಡೆಯದೇ ಹಾಗೂ ಸಿನಿಮಾದಲ್ಲಿ ನಮ್ಮ ತಂದೆಯ ಬಗ್ಗೆ ಆಕ್ಷೇಪಾರ್ಹ ಸಂಗತಿಗಳನ್ನು ತೋರಿಸಿದಲ್ಲಿ ಹೆಡ್ ಬುಷ್ ಚಿತ್ರತಂಡದ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ ಜಯರಾಜ್ ಪುತ್ರಅಜಿತ್ ಜಯರಾಜ್ ಎದುರಿಸಿದ್ದಾರೆ. ಸತ್ಯ ಕತೆ ಆಧಾರಿತ ಸಿನಿಮಾಗಳಿಗೆ ಈ ಸಂಕಟ ಕಾಮನ್ ಆಗಿದ್ದು, ಈ ಹಿಂದೆ ವೀರಪ್ಪನ್ ಕುರಿತು ಸಿನಿಮಾ ನಿರ್ಮಾಣದ ವೇಳೆ ವೀರಪ್ಪನ್ ಪತ್ನಿ ಕೂಡ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ

ಇದನ್ನೂ ಓದಿ : Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ

Head Bush Movie Controversy legal battle warning by Don Jayaraj family

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular