ನಿರ್ಮಾಪಕರಾದ್ರು ಸ್ಯಾಂಡಲ್ ವುಡ್ ವಿಲನ್….! ಹೆಡ್ ಬುಶ್ ಗಾಗಿ ಡಾಲಿ ಧನಂಜಯ್ ಸಾಹಸ…!!

ಸ್ಯಾಂಡಲ್ ವುಡ್ ಸೇರಿದಂತೆ ಬಹುಭಾಷೆಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚ್ತಿರೋ ನಟ ಡಾಲಿ ಧನಂಜಯ್ ಏಕಾಏಕಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೆಡ್ ಬುಶ್ ಗಾಗಿ ಡಾಲಿ ಬಂಡವಾಳ ಹೂಡಲು ಮುಂದಾಗಿದ್ದಾರೆ.

ನಾಯಕನಾಗಿ, ವಿಲನ್ ಆಗಿ ಪ್ರತಿಭೇ ಸಾಬೀತುಪಡಿಸಿರೋ ಡಾಲಿ ಧನಂಜಯ್ ಏಕಾಏಕಿ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಹೆಡ್ ಬುಶ್ ಅನ್ನೋ ಸಿನಿಮಾಗೆ ಧನಂಜಯ್ ನಾಯಕರಾಗಿದ್ದು, ಇದೇ ಸಿನಿಮಾವನ್ನು ಪಾಲುದಾರಿಕೆಯಲ್ಲಿ ನಿರ್ಮಿಸೋಕೆ ಡಾಲಿ ಸಿದ್ಧವಾಗಿದ್ದಾರೆ.

ಬೆಂಗಳೂರನ್ನು ನಡುಗಿಸಿದ್ದ ರೌಡಿ ಜಯರಾಜ್ ಕತೆ ಆಧರಿಸಿದ ಹೆಡ್ ಬುಶ್ ಸಿನಿಮಾ ಕಳೆದ ವರ್ಷ ಲಾಕ್ ಡೌನ್ ಗೂ ಮೊದಲೇ ಘೋಷಣೆಯಾಗಿತ್ತು. ಆದರೆ ಕೊರೋನಾದಿಂದ ಚಿತ್ರ ನಿರ್ಮಾಣ ಆರಂಭವಾಗಿರಲಿಲ್ಲ.

 ಈ ಮಧ್ಯೆ ಡಾಲಿ ಧನಂಜಯ್ ಹೆಡ್ ಬುಶ್ ಸಿನಿಮಾಗಾಗಿ ದೇಹ ಹುರಿಗೊಳಿಸಿ ಸಿದ್ಧವಾಗಿದ್ದರು. ಆದರೆ ನಿರ್ಮಾಪಕರೊಬ್ಬರು ಸಿನಿಮಾದಿಂದ ದೂರ ಸರಿದಿರೋದರಿಂದ ಅನಿವಾರ್ಯವಾಗಿ ಡಾಲಿ ಬಂಡವಾಳ ಹೂಡುತ್ತಿದ್ದಾರೆ.ಅಗಸ್ಟ್ 9 ರಂದು ಚಿತ್ರೀಕರಣ ಆರಂಭಿಸಲಿರುವ ಹೆಡ್ ಬುಶ್ ಅಗಸ್ಟ್ 23 ಕ್ಕೆ ಫರ್ಸ್ಟ್ ಲುಕ್ ರಿಲೀಸ್ ಮಾಡಲಿದೆ. ಹೆಡ್ ಬುಶ್ ಗೆ ಅಗ್ನಿಶ್ರೀಧರ್ ಕತೆ ಬರೆದಿದ್ದಾರೆ. ಸೋಮಣ್ಣ ಜೊತೆ ಸೇರಿ ಡಾಲಿ ಸಿನಿಮಾ ನಿರ್ಮಿಸಲಿದ್ದಾರೆ.

ಸದ್ಯ ತೆಲುಗಿನ ಪುಷ್ಪದಲ್ಲಿ ವಿಲನ್ ರೋಲ್ ಹಾಗೂ ತಮಿಳು ಸಿನಿಮಾ ಸೇರಿದಂತೆ ಹಲವು ಸಿನಿಮಾದಲ್ಲಿ ಬ್ಯುಸಿಯಾಗಿರೋ ಡಾಲಿ ಧನಂಜಯ್ ಹೆಡ್ ಬುಶ್ ಮೂಲಕ ರೌಡಿಪಾತ್ರದಲ್ಲಿ ತೆರೆಗೆ ಬರಲಿದ್ದಾರೆ.

Comments are closed.