ಸೋಮವಾರ, ಏಪ್ರಿಲ್ 28, 2025
HomeCinemaPriyanka Chopra: ಶೂಟಿಂಗ್ ವೇಳೆ ಅವಘಡ: ಗಾಯಗೊಂಡ ಹಾಲಿವುಡ್-ಬಾಲಿವುಡ್ ನಟಿ ಪ್ರಿಯಾಂಕಾ ಚೋಫ್ರಾ

Priyanka Chopra: ಶೂಟಿಂಗ್ ವೇಳೆ ಅವಘಡ: ಗಾಯಗೊಂಡ ಹಾಲಿವುಡ್-ಬಾಲಿವುಡ್ ನಟಿ ಪ್ರಿಯಾಂಕಾ ಚೋಫ್ರಾ

- Advertisement -

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಶೂಟಿಂಗ್ ವೇಳೆ ಗಾಯಗೊಂಡ ಬೆನ್ನಲ್ಲೇ, ಈಗ ಹಾಲಿವುಡ್ ಮತ್ತು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಎಡಹುಬ್ಬಿಗೆ ಗಾಯವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಫ್ರಾ ಹಾಲಿವುಡ್ ನ ಸಿಟಾಡೆಲ್ ಎಂಬ ಬಿಗ್ ಬಜೆಟ್ ನ ವೆಬ್ ಸೀರಿಸ್ ವೊಂದರಲ್ಲಿ ನಟಿಸುತ್ತಿದ್ದಾರೆ. ವೆನ್ ಸೀರಿಸ್ ನಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿರುವ ಪ್ರಿಯಾಂಕಾಗೆ ಶೂಟಿಂಗ್ ವೇಳೆ ಗಾಯವಾಗಿದ್ದು, ರಕ್ತಸ್ರಾವದ ಪೋಟೋವನ್ನು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ತಮಗಾಗಿರುವ ಗಾಯದ ಪೋಟೋವನ್ನು ಹಂಚಿಕೊಳ್ಳೋ ಜೊತೆಗೆ ಅಭಿಮಾನಿಗಳಿಗೆ ಶಾಕ್ ನೀಡಿರುವ ಪ್ರಿಯಾಂಕಾ, ಇದರಲ್ಲಿ ಯಾವುದು ನಿಜವಾದ ಗಾಯ ಗುರುತಿಸಿ ಎಂದಿದ್ದಾರೆ. ಬಳಿಕ ತಾವೇ ಹುಬ್ಬಿನ ಮೇಲೆ ಆಗಿರೋದು ನಿಜವಾದ ಗಾಯ. ಕೆನ್ನೆಯದು ಶೂಟಿಂಗ್ ಗಾಯ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಇದನ್ನೂ ಓದಿ : ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್

ಸಿಟಾಡೆಲ್ ವೆಬ್ ಸರಣಿಯನ್ನು ಬ್ರಿಯಾನ್ ಕ್ರಿಕ್ ಹಾಗೂ ರೊಸ್ಸೊ ಸಹೋದರರು ನಿರ್ದೇಶಿಸುತ್ತಿದ್ದು, ಈ ವೆಬ್ ಸರಣಿ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ. ಬಹುತೇಕ ಹಾಲಿವುಡ್ ನಲ್ಲೇ ಬ್ಯುಸಿಯಾಗಿರೋ ಪ್ರಿಯಾಂಕಾ, ಹಿಂದಿಯಲ್ಲಿ ಕಲ್ಪನಾ ಚಾವ್ಲಾ ಬಯೋಪಿಕ್ ಹಾಗೂ ಶೀಲಾ ಜೀ ಲೇ ಜರಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.  

ಇದನ್ನೂ ಓದಿ : ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಸ್ಪೆಶಲ್ ಧಮಾಕಾ: ವಿಕ್ರಾಂತ್ ರೋಣ ಅಡ್ಡಾದಿಂದ ಸಿಗಲಿದೆ ಭರ್ಜರಿ ಗಿಫ್ಟ್

RELATED ARTICLES

Most Popular