Vikranthrona: ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಸ್ಪೆಶಲ್ ಧಮಾಕಾ: ವಿಕ್ರಾಂತ್ ರೋಣ ಅಡ್ಡಾದಿಂದ ಸಿಗಲಿದೆ ಭರ್ಜರಿ ಗಿಫ್ಟ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಕೊರೋನಾ ಹಿನ್ನೆಲೆಯಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಣೆ ಕೈಬಿಟ್ಟಿದ್ದಾರೆ. ಇದರಿಂದ ಸುದೀಪ್ ಭೇಟಿ ಮಾಡೋ ಕನಸಿನ ಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಈಗ ವಿಕ್ರಾಂತ ರೋಣ ಅಡ್ಡಾದಿಂದ ಹೊರಬಿದ್ದ ಸುದ್ದಿ ಕಿಚ್ಚನ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಹೌದು ವಿಕ್ರಾಂತ್ ರೋಣ ಸದ್ಯ ಸುದೀಪ್ ಅಭಿಮಾನಿಗಳು ಕಾತುರರಾಗಿ ಕಾಯ್ತಿರೋ ಬಿಗ್ ಬಜೆಟ್, ಫ್ಯಾನ್ ಇಂಡಿಯಾ ಮೂವಿ. ಫ್ಯಾಂಟಸಿ,ಆಕ್ಷ್ಯನ್, ಅಡ್ವೆಂಚರ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ  ಈ ಸಿನಿಮಾ ಇನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಚಿತ್ರ ಬಿಡುಗಡೆಗೆ ಇನ್ನೂ ದಿನಾಂಕ ನಿಗದಿಯಾಗದೇ ಇದ್ದರೂ ಅಭಿಮಾನಿಗಳ ಕುತೂಹಲ ತಣಿಸೋಕೆ ಚಿತ್ರದ ಸಣ್ಣಝಲಕ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಸುದೀಪ್ ಬರ್ತಡೇಯಂದು ಅಂದ್ರೇ ಸಪ್ಟೆಂಬರ್ 2 ರಂದು ವಿಕ್ರಾಂತ ರೋಣ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.

ಇದನ್ನೂ ಓದಿ : ಕಿಚ್ಚನ ಖದರ್​ಗೆ ಅಭಿಮಾನಿಗಳು ಪುಲ್ ಫಿದಾ: ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಜಾಕ್ ಮಂಜು ಬಂಡವಾಳ ಹೂಡಿರುವ  ಈ ಸಿನಿಮಾದಲ್ಲಿ ಶ್ರೀಲಂಕಾ ಸುಂದರಿ ಜಾಕ್ವಲಿನ್ ಫರ್ನಾಂಡಿಸ್ ಸ್ಪೆಶಲ್ ಸಾಂಗ್ ಹಾಗೂ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿದ್ದು, ಸಪ್ಟೆಂಬರ್ 2 ರಂದು ಅಭಿಮಾನಿಗಳಿಗೆ ಟ್ರೇಲರ್ ನೋಡೋ ಭಾಗ್ಯ ಸಿಗಲಿದೆ. ಗಡಂಗ್ ರಕ್ಕಮ್ಮನಾಗಿ ಒಂದು ಐಟಂ ಸಾಂಗ್ ಗೆ ಕುಣಿದಿರೋ ಜಾಕ್ವಲಿನ್ ಫರ್ನಾಂಡಿಸ್ ಇದಕ್ಕಾಗಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  

ಇದನ್ನೂ ಓದಿ : ಶೂಟಿಂಗ್ ವೇಳೆ ಅವಘಡ: ಗಾಯಗೊಂಡ ಹಾಲಿವುಡ್-ಬಾಲಿವುಡ್ ನಟಿ ಪ್ರಿಯಾಂಕಾ ಚೋಫ್ರಾ

Comments are closed.