ಸೋಮವಾರ, ಏಪ್ರಿಲ್ 28, 2025
HomeCinemaKantara Film Controversy : ವಿವಾದಕ್ಕೆ ಸಿಲುಕಿದ ಹೊಂಬಾಳೆ ಫಿಲ್ಸ್ಮ್ ನೆಕ್ಸ್ಟ್ ಮೂವಿ...! ...

Kantara Film Controversy : ವಿವಾದಕ್ಕೆ ಸಿಲುಕಿದ ಹೊಂಬಾಳೆ ಫಿಲ್ಸ್ಮ್ ನೆಕ್ಸ್ಟ್ ಮೂವಿ…! ಕಾಂತಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೈರಮುಡಿ‌ ನಿರ್ದೇಶಕ…!!

- Advertisement -

ಹೊಂಬಾಳೆ‌ ಫಿಲ್ಸ್ಮ್ ಮತ್ತು ರಿಷಬ್ ಶೆಟ್ಟಿ ಕಂಬಳ ಕ್ರೀಡೆ ಆಧಾರಿತ ಕಾಂತಾರ ಸಿನೆಮಾ ಘೋಷಿಸಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಅಸಮಧಾನ ಭುಗಿಲೆದ್ದಿದೆ. ಮೊದಲೇ ಈ ಕುರಿತು ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಚಂದ್ರಶೇಖರ ಬಂಡಿಯಪ್ಪ ಕಂಬಳ ಆಧಾರಿತ ಕತೆಯನ್ನು ಇಟ್ಟುಕೊಂಡು ಎರಡು ವರ್ಷದ ಹಿಂದೆಯೇ ವೈರಮುಡಿ ಸಿನಿಮಾ ಘೋಷಣೆ ಮಾಡಿದ್ದೇನೆ. ಆದರೆ ಈಗ ವಿಷಯ ಇಟ್ಟು ಕೊಂಡು ರಿಷಬ್ ಶೆಟ್ಟಿ ಸಿನಿಮಾ ತೆಗೆಯಲು ಮುಂಧಾಗಿದ್ದು ಒಂದು ಮಾತು ಕೂಡ ಕೇಳಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ವೈರಮುಡಿ ಸಿನಿಮಾವನ್ನು ಎರಡು ವರ್ಷದ ಹಿಂದೆ ಅನೌನ್ಸ್ ಮಾಡಿದ್ದು ಶಿವರಾಜ್ ಕುಮಾರ್ ಗಾಗಿ. ಆದರೆ ಅದೇ ವಿಷಯದ ಕುರಿತು ಸಿನಿಮಾ‌ಮಾಡುವಾಗ ಸೌಜನ್ಯಕ್ಕೆ ಒಳಗಾದರೂ ರಿಷಬ್ ಶೆಟ್ಟಿಯವರು ಕೇಳಬಹುದಿತ್ತು ಎಂದು ಚಂದ್ರಶೇಖರ್ ಬಂಡಿಯಪ್ಪ ಅಸಮಧಾನ ತೋಡಿ ಕೊಂಡಿದ್ದಾರೆ.

ಚಂದ್ರಶೇಖರ್ ಬಂಡಿಯಪ್ಪ ಶಿವರಾಜ್ ಕುಮಾರ್ ಗಾಗಿ ಈ ಸಿನಿಮಾ ಘೋಷಿಸಿದ್ದು ಅವರ ಬರ್ತಡೇಯಂದೇ ಸಿನಿಮಾ ಟೈಟಲ್ ಅನೌನ್ಸ್ ಅಗಿತ್ತು. ಶಿವಣ್ಣನ ಹುಟ್ಟುಹಬ್ಬದಂದೇ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.ಇದಲ್ಲದೇ ಚಂದ್ರಶೇಖರ್ ಕಂಬಳದ ಬಗ್ಗೆ ಅಧ್ಯಯನ ಮಾಡಲು ಕರಾವಳಿ ಭಾಗದಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿ ಕತೆ ಸಿದ್ಧಪಡಿಸಿದ್ದಾರಂತೆ. ಆದರೆ ಈಗ ರಿಷಬ್ ಶೆಟ್ಟಿ ಸಿನಿಮಾ ಅನೌನ್ಸ್ ಮಾಡಿರೋದರಿಂದ ಚಂದ್ರಶೇಖರ್ ಶ್ರಮ ವ್ಯರ್ಥವಾದಂತಾಗಿದೆ.

ಇದು ಶಿವಣ್ಣನಿಗಾಗಿ ಅನೌನ್ಸ್ ಮಾಡಿದ ಸಿನಿಮಾ. ಈಗ ರಿಷಬ್ ಶೆಟ್ಟಿ ಅದೇ ಸಬ್ಜೆಕ್ಟ್ ನಲ್ಲಿ ಸಿನಿಮಾ‌ ಮಾಡ್ತಿರೋದರಿಂದ ಸದ್ಯ ನಾನು ವೈರ್ ಮುಡಿ ಸಿನಿಮಾ‌ಮಾಡೋದಿಲ್ಲ. ಕಾಂತಾರ ಸಿನಿಮಾ ಬಂದ ಮೇಲೆ ತೀರ್ಮಾನ ಮಾಡುತ್ತೇನೆ ಎಂದು ಚಂದ್ರಶೇಖರ್ ಬಂಡಿಯಪ್ಪ ಹೇಳಿದ್ದಾರೆ. ಅಲ್ಲದೇ ಶಿವಣ್ಣನಿಗಾಗಿ ನಾನು ತಯಾರಿಸಲು ಸಿದ್ಧಪಡಿಸಿದ ಸಿನಿಮಾವನ್ನು ಮಾಡಲು ನೀವು ಸಿದ್ಧವಾಗಿರೋದು ನಕಲಿ ಮಾಡಿದಂತೆ. ನೀವು ವೈರಮುಡಿ ಪೋಸ್ಟರ್ ನೋಡದಿದ್ದರೇ ನೋಡಿ ಸಂಬಂಧ ಪಟ್ಟ ಚಿತ್ರ ತಂಡ ದ ಜೊತೆ ಚರ್ಚಿಸಿ ಮುಂದುವರೆಯಿರಿ ಎಂದು ಚಂದ್ರಶೇಖರ ರಿಷಬ್ ಶೆಟ್ಟಿ ಗೆ ಹೇಳಿದ್ದಾರೆ.

RELATED ARTICLES

Most Popular