Hostel hudugaru bekagiddare : ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿತಂಡಕ್ಕೆ ಶಾಕ್‌ ಕೊಟ್ಟ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಕಳೆದ ಹಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಸಿನಿಮಾವೆಂದರೆ (Hostel hudugaru bekagiddare) ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ. ಈ ಸಿನಿಮಾವು ಪ್ರಾರಂಭದಿಂದಲೂ ಸಿಕ್ಕಾಪಟ್ಟೆ ವಿಭಿನ್ನವಾಗಿ ಪ್ರಚಾರವನ್ನು ಮಾಡಿಕೊಂಡು ಬಂದಿದೆ. ಅಷ್ಟೇ ಅಲ್ಲದೇ ಈ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌, ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಹಲವಾರು ಸ್ಟಾರ್‌ ನಟ-ನಟಿಯರು ಅಭಿನಯಿಸಿದ್ದಾರೆ. ಈ ಎಲ್ಲಾ ನಟರನ್ನು ಬಳಸಿಕೊಂಡು ಸಿನಿಮಾದ ಪ್ರಮೋಷನಲ್‌ ವಿಡಿಯೊಗಳನ್ನು ಮಾಡಿದ್ದು, ಸಿನಿಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು.

ಸಿನಿಮಾ ಪ್ರಚಾರಕ್ಕಾಗಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್‌ನಲ್ಲಿ ನಟಿ ರಮ್ಯಾ ಪ್ರಾಧ್ಯಾಪಕಿಯಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿತಂಡದ ಜೊತೆ ಕೈ ಜೋಡಿಸಿದ್ದ ರಮ್ಯಾ ಇದೀಗ ಅದೇ ಸಿನಿತಂಡಕ್ಕೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ.

ಆದರೆ ಮೊನ್ನೆಯಷ್ಟೇ ಬಿಡುಗಡೆಯಾದ ಟ್ರೈಲರ್‌ನಲ್ಲಿ ಪ್ರಾಧ್ಯಾಪಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಸಖತ್‌ ಖುಷಿಪಟ್ಟಿದ್ದರು. ಆದರೆ ಈ ಟ್ರೈಲರ್‌ನಲ್ಲಿ ತನ್ನ ಅನುಮತಿ ಇಲ್ಲದೇ ಈ ದೃಶ್ಯವನ್ನು ಬಳಸಿಕೊಂಡಿದ್ದಾರೆ ಎನ್ನುವ ಆರೋಪದಡಿಯಲ್ಲಿ ರಮ್ಯಾ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿತಂಡಕ್ಕೆ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Music Director Sam C.S : ಶಿವಣ್ಣನ ಹೊಸ ಸಿನಿಮಾಗೆ ಟ್ಯೂನ್ ಹಾಕಲಿದ್ದಾರೆ ವಿಕ್ರಂ ವೇದ ಮ್ಯೂಸಿಕ್ ಡೈರೆಕ್ಟರ್ ಸ್ಯಾಮ್ ಸಿ.ಎಸ್

ಇದನ್ನೂ ಓದಿ : Tatsama-Tadbhava’s teaser : ಪ್ರಜ್ವಲ್‌ ದೇವರಾಜ್‌, ಮೇಘನಾ ಸರ್ಜಾ ಅಭಿನಯದ ತತ್ಸಮ ತದ್ಭವ ಟೀಸರ್‌ ಔಟ್‌

ಅಷ್ಟೇ ಅಲ್ಲದೇ ತನ್ನ ಅನುಮತಿ ಇಲ್ಲದೇ ಬಳಸಲಾಗಿರುವ ದೃಶ್ಯ ಹಾಗೂ ಫೋಟೋಗಳನ್ನು ಎಲ್ಲಾ ಕಡೆಯಿಂದ ತೆಗೆದು ಹಾಕಬೇಕು ಹಾಗೂ ಈ ತಪ್ಪಿಗೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ಬೇಡಿಕೆಯನ್ನೂ ಸಹ ಇಟ್ಟಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ. ಆದರೆ ಈ ಕುರಿತಂತೆ ಸಿನಿಮಾದ ನಿರ್ಮಾಪಕ ವರುಣ್‌ ಮಾತನಾಡಿದ್ದು, ಯಾವುದೇ ರೀತಿಯ ಲೀಗಲ್‌ ನೋಟಿಸ್‌ ಬಂದಿಲ್ಲ ಎಂದು ಹೇಳಿದ್ದಾರೆ.

Hostel hudugaru bekagiddare Sandalwood queen Ramya gave a shock to the film team.

Comments are closed.