Hostel hudugaru bekagiddare Trailer : ಇದೇ 21ಕ್ಕೆ ತೆರೆಗೆ ಬರಲಿದೆ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ : ಟ್ರೈಲರ್‌ ಔಟ್‌

ಕಳೆದ ವರ್ಷದಿಂದ ದಿನಕ್ಕೊಂದು ಹೊಸತನ ತರುತ್ತಿದ್ದ ಸಿನಿಮಾವೆಂದರೆ (Hostel hudugaru bekagiddare Trailer) ಹಾಸ್ಟೆಲ್‌ ಹುಡುಗರು. ಈ ಸಿನಿಮಾವು ವಿಶೇಷ ಏನೆಂದರೆ ಹೊಸ ಕಲಾವಿದರ ಜೊತೆಗೆ ರಮ್ಯಾ, ದಿಗಂತ್‌ ಮಂಚಾಲೆ, ಪವನ್‌ ಕುಮಾರ್‌ ರಿಷಬ್‌ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಬಹು ನಿರೀಕ್ಷಿತ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೈಲರ್‌ ಇಂದು ಬಿಡುಗಡೆ ಮಾಡಲಿದ್ದಾರೆ. ಹಾಗೆಯೇ ಇದೇ ತಿಂಗಳು 21ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಕೂತುಹಲದಿಂದ ಕಾದಿದ್ದಾರೆ.

ಸದ್ಯ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಲಿದ್ದು, ಸಿನಿಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಈ ಸಿನಿಮಾಕ್ಕೆ ನಿತಿನ್‌ ಕೃಷ್ಣಮೂರ್ತಿ ನಿರ್ದೇಶನ ನೀಡಿದ್ದಾರೆ. ಈಗಾಗಲೇ ಹಾಸ್ಟೆಲ್‌ ಹುಡುಗರು ಟ್ರೈಲರ್‌ ರಿಲೀಸ್‌ ಮಾಡಿದ ರಕ್ಷಿತ್‌ ಶೆಟ್ಟಿ ಅವರು ಈ ಸಿನಿಮಾವನ್ನು ಎರಡು ಬಾರಿ ನೋಡಿದ್ದಾರಂತೆ. ಸಿನಿಮಾ ರಿಲೀಸ್‌ಗೂ ಮುನ್ನ ಪ್ರೀಮಿಯರ್‌ ಶೋ ಬಿಡುಗಡೆಯಾಗಲಿದ್ದು, ಮತ್ತೊಮ್ಮೆ ನೋಡುವುದಾಗಿ ನಟ ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ : Superstar Rajinikanth : ಆಗಸ್ಟ್ 10ಕ್ಕೆ ಮೂರು ಭಾಷೆಯಲ್ಲಿ ತೆರೆ ಅಪ್ಪಳಿಸಲಿದೆ ‘ಜೈಲರ್’ ಸಿನಿಮಾ

ಇದನ್ನೂ ಓದಿ : Exclusive : ಸಪ್ತಪದಿ ತುಳಿದ ವಿಕ್ರಾಂತ್ ರೋಣಾ ನಟಿ ನೀತಾ ಅಶೋಕ್‌

ತುಂಬಾ ಕಾಮಿಡಿ ಸೀನ್‌ಗಳನ್ನು ಒಳಗೊಂಡ ಈ ಸಿನಿಮಾ ಸಿನಿಪ್ರೇಕ್ಷಕರಿಗೆ ನಿರಾಸೆಗೊಳಿಸಲ್ಲ ಎಂದಿದ್ದಾರೆ. ಹಾಗೆಯೇ ಈ ಸಿನಿಮಾವು ಫ್ಯಾಮಿಲಿ ಹಾಗೂ ಕಾಲೇಜಿ ಹುಡುಗರು ಕೂಡ ನೋಡಬಹುದಾದ ಸಿನಿಮಾವಾಗಿ ತೆರೆ ಕಾಣಲಿದೆ. ಯೂತ್ ಸಬ್ಜೆಕ್ಟ್ ಒಳಗೊಂಡ ಸಿನಿಮಾ ವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಈ ಸಿನಿಮಾದಲ್ಲಿರಲಿದೆ. ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ನೀಡಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಹಾಗೂ ಸುರೇಶ್ ಅವರ ಸಂಕಲನ ಈ ಸಿನಿಮಾಕ್ಕಿದೆ.

Hostel Hudugaru Bekagiddare Trailer: It will be released on 21st Hostel Hudugaru Bekagiddare Movie: Trailer Out

Comments are closed.