ಭಾನುವಾರ, ಏಪ್ರಿಲ್ 27, 2025
HomeCinemaUrvashi Rautela : ಚಿನ್ನದ ಗೌನ್, ವಜ್ರದ ಅಲಂಕಾರ : ಬಾಲಿವುಡ್ ಬೆಡಗಿ ಊರ್ವಶಿ ಒಂದು...

Urvashi Rautela : ಚಿನ್ನದ ಗೌನ್, ವಜ್ರದ ಅಲಂಕಾರ : ಬಾಲಿವುಡ್ ಬೆಡಗಿ ಊರ್ವಶಿ ಒಂದು ರಾಂಪ್‌ವಾಕ್‌ ಗೆ 40 ಕೋಟಿ ಡ್ರೆಸ್

- Advertisement -

ಬಾಲಿವುಡ್ ನಟಿಯರು ನಟನೆಗಿಂತ ಹೆಚ್ಚು ಸುದ್ದಿಯಾಗೋದು ತಮ್ಮ ಉಡುಪು, ಸೋಷಿಯಲ್ ಮೀಡಿಯಾ ಸ್ಟೇಟಸ್ ಗಳಿಂದ. ಅದರಲ್ಲಿ ಮೊದಲ ಸ್ಥಾನದಲ್ಲಿರೋದು ಸುಂದರಿ ಊರ್ವಶಿ ರೌಟೆಲ್ಲಾ (Urvashi Rautela) . ಈಕೆ ಬಾಲಿವುಡ್ ಸಿನಿಮಾಗಳ ಮೂಲಕ ಕೆರಿಯರ್ ಆರಂಭಿಸಿದ್ರೂ ಸುದ್ದಿಯಾಗಿದ್ದು ಹಾಗೂ ಹೆಸರು ಗಳಿಸಿದ್ದು ತನ್ನ ಮಾದಕ ಮೈಮಾಟ, ಫ್ಯಾಶನ್ ಶೋ ಹಾಗೂ ರ್ಯಾಂಪ್ ವಾಕ್ ಮೂಲಕ. ಸದ್ಯ ಒಂದಲ್ಲ ಎರಡಲ್ಲ ಬರೋಬ್ಬರಿ 40 ಕೋಟಿ ಬೆಲೆಯ ಡ್ರೆಸ್ ಧರಿಸೋ ಮೂಲಕ ಊರ್ವಶಿ ಫ್ಯಾಶನ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.

ಬೈ ಬರ್ತ್ ರಿಚ್ ಎನ್ನಿಸಿಕೊಂಡಿರೋ ಊರ್ವಶಿ ರೌಟೆಲ್ಲಾ ತಂದೆ ಹಾಗೂ ತಾಯಿ ಉದ್ಯಮಿಗಳು. ಹೀಗಾಗಿ ಊರ್ವಶಿ ಬದುಕಿನಲ್ಲಿ ಎಲ್ಲವೂ ರಾಯಲ್ ಸಂಗತಿಗಳೇ ಇರೋದು. ಬಾಲ್ಯದಲ್ಲಿಯೇ ಫ್ಯಾಶನ್ ಲೋಕಕ್ಕೆ ಆಕರ್ಷಿತಳಾದ ಊರ್ವಶಿ, 2015 ರಲ್ಲಿ ಮಿಸ್‌ ದೀವಾ ಯುನಿವರ್ಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದಾದ ಮೇಲೆ 2015 ರಲ್ಲಿ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಖ್ಯಾತಿ ಗಳಿಸಿದ ಊರ್ವಶಿ, ಸದ್ಯ ಅರಬ್ ದೇಶದಲ್ಲಿ ನಡೆದ ಪ್ರಸಿದ್ಧ ಫ್ಯಾಶನ್ ಶೋದಲ್ಲಿ ಬರೋಬ್ಬರಿ 40 ಕೋಟಿ ಬೆಲೆಬಾಳುವ ಚಿನ್ನ ಹಾಗೂ ವಜ್ರ ಖಚಿತ ಉಡುಪು ಧರಿಸಿ ಮೆರೆಯುವ ಮೂಲಕ ಸದ್ದು ಮಾಡಿದ್ದಾರೆ.

ಅರಬ್ ಫ್ಯಾಶ್ ವೀಕ್ ನ ರ್ಯಾಂಪ್ ವಾಕ್ ಗೇ ಅದರದ್ದೇ ಆದ ಘನತೆಯಿದೆ. ವಿಶ್ವದ ಮಾಡೆಲ್ ಗಳು ರ್ಯಾಂಪ್ ಮೇಲೆ ಒಮ್ಮೆ ವಾಕ್ ಮಾಡುವ ಅವಕಾಶ ಸಿಕ್ಕರೇ ಬದುಕು ಸಾರ್ಥಕ ಎಂದುಕೊಳ್ಳುತ್ತಾರೆ. ಹೀಗಿರುವಾಗ ಅದೇ ರ್ಯಾಂಪ್ ಮೇಲೆ ಎರಡನೇ ಭಾರಿ ಕ್ಯಾಟ್ ವಾಕ್‌ಮಾಡಿದ ಕೀರ್ತಿ ಊರ್ವಶಿ ಗಿದೆ. ಅದರಲ್ಲೂ ಈ ವರ್ಷ ಊರ್ವಶಿ ಚಿನ್ನದಿಂದ ಸಿದ್ಧವಾದ ಬಟ್ಟೆಯ ಮೇಲೆ ವಜ್ರಗಳನ್ನು ಅಳವಡಿಸಲಾದ ಗೌನ್ ತೊಟ್ಟು ಮಿರ‌ಮಿರ ಮಿಂಚಿದ್ದಾರೆ.

ಸಾಕ್ಷಾತ್ ಸುವರ್ಣ ಸುಂದರಿಯಂತೆ ಹೆಜ್ಜೆ ಹಾಕಿದ ಊರ್ವಶಿ ಪೋಟೋ ವಿಡಿಯೋ ಸಖತ್ ವೈರಲ್ ಆಗಿದ್ದು, ಚಿನ್ನದ ಕನ್ಯೆ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. 40 ಕೋಟಿ ಬಟ್ಟೆಯಿಂದ ಊರ್ವಶಿ ಅಂದ ಹೆಚ್ಚಿತೋ ಅಥವಾ ಊರ್ವಶಿಯಿಂದ 40 ಕೋಟಿ ಗೌನ್ ಗೆ ಬೆಲೆ ಬಂತೋ ಗೊತ್ತಿಲ್ಲ. ಆದರೆ ಬಲೂನ್ ಹ್ಯಾಂಡ್ ವಿನ್ಯಾಸದ ಈ ಗೌನ್ ತೊಟ್ಟು ಹೆಜ್ಜೆ ಹಾಕಿದ ಉರ್ವಶಿ ಮಾತ್ರ ಪಡ್ಡೆ ಗಳ ನಿದ್ದೆ ಕದ್ದಿದ್ದಾರೆ. ಸದ್ಯ ಎಲ್ಲಾ ಫ್ಯಾಶನ್ ಮ್ಯಾಗಜಿನ್, ಸೇರಿದಂತೆ ಸೋಷಿಯಲ್ ಮೀಡಿಯಾ ತುಂಬೆಲ್ಲ ಊರ್ವಶಿ ರೌಟೆಲ್ಲಾ ರಂಗೀನ ಫ್ಯಾಶನ್ ಶೋ ಸುದ್ದಿಯೇ ಸಖತ್ ಸದ್ದು ಮಾಡ್ತಿದೆ.

ಇದನ್ನೂ ಓದಿ : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್

ಇದನ್ನೂ ಓದಿ : ಬೇಬಿ ಬಂಪ್ ಜೊತೆ ಹಾಟ್ ಪೋಟೋಶೂಟ್ : ಸೋಷಿಯಲ್ ಮೀಡಿಯಾ ಗಮನ ಸೆಳೆದ ದಿಶಾ ಮದನ್

(Indian Actress Urvashi Rautela donned Rs 40 crore worth gold, diamond gown at Arab Fashion Week)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular