Ishan Kishan : IPL 2022 ರಲ್ಲಿ RCB ಪರ ಆಡುತ್ತಾರೆ ಇಶಾನ್ ಕಿಶನ್

ಐಪಿಎಲ್‌ ( IPL 2022 )ರ ಹರಾಜು ಪ್ರಕ್ರಿಯೆ ಸಮೀಪಿಸುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್‌ 15 ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಲು ಟೀಮ್‌ ಮ್ಯಾನೇಜ್ಮೆಂಟ್‌ ಸಜ್ಜಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವ ಆರ್‌ಸಿಬಿ, ವಿಕೆಟ್‌ ಕೀಪರ್‌ ಕೋಟಾದಡಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಖ್ಯಾತ ಆಟಗಾರ, ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ (Ishan Kishan) ಅವರನ್ನು ಖರೀದಿಸಲು ಉತ್ಸಾಹ ತೋರಿದೆ.

2022ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸಾವಿರಕ್ಕೂ ಅಧಿಕ ಆಟಗಾರರು ಹರಾಜಿಗೆ ಸಜ್ಜಾಗಿದ್ದಾರೆ. ಅದ್ರಲ್ಲೂ ಈ ಬಾರಿ ತಂಡಗಳ ಸಂಖ್ಯೆಯಲ್ಲಿಯೂ ಏರಿಕೆಯನ್ನು ಕಂಡಿದೆ. ಲಕ್ನೋ ಮತ್ತು ಅಹಮದಾಬಾದ್‌ ತಂಡಗಳು ಹೊಸದಾಗಿ ಐಪಿಎಲ್‌ಗೆ ಎಂಟ್ರಿ ಕೊಟ್ಟಿವೆ. 19 ಭಾರತೀಯರು ಮತ್ತು 8 ವಿದೇಶಿ ಆಟಗಾರರನ್ನು ಒಳಗೊಂಡಂತೆ 27 ಆಟಗಾರರನ್ನು ತಂಡಗಳು ಉಳಿಸಿಕೊಂಡಿವೆ. ಲಕ್ನೋ ಮತ್ತು ಅಹಮದಾಬಾದ್‌ನಿಂದ ಇನ್ನೂ ಆರು ಆಟಗಾರರನ್ನು ಡ್ರಾಫ್ಟ್‌ಗಳಲ್ಲಿ ಆಯ್ಕೆ ಮಾಡಲಾಗಿದೆ. ‌ವಿಕೆಟ್‌ ಕೀಪರ್‌ ಆಗಿದ್ದ ಪಾರ್ಥಿವ್‌ ಪಟೇಲ್‌ ನಿವೃತ್ತಿಯ ಬೆನ್ನಲ್ಲೇ ಆರ್‌ಸಿಬಿ ತಂಡ 2021 ರ ಐಪಿಎಲ್ ಹರಾಜಿನಲ್ಲಿ ವಿಕೆಟ್ ಕೀಪರ್ ಕೆಎಸ್ ಭರತ್ ಅವರನ್ನು ಮೂಲ ಬೆಲೆ ರೂ 20 ಲಕ್ಷಕ್ಕೆ ಖರೀದಿ ಮಾಡಿತ್ತು. ಅಲ್ಲದೇ ಕಳೆದ ಋತುವಿನಲ್ಲಿ ಸಿಕ್ಕ ಅವಕಾಶವನ್ನೇ ಭರತ್‌ ಉತ್ತಮವಾಗಿ ಬಳಸಿಕೊಂಡಿದ್ದಾರೆ. ಅದ್ರಲ್ಲೂ ರಾಷ್ಟ್ರೀಯ ತಂಡ ಹಾಗೂ ಐಪಿಎಲ್‌ನಲ್ಲಿಯೂ ಉತ್ತಮ ಆಟದ ಪ್ರದರ್ಶನ ನೀಡಿರುವ ಇಶಾನ್‌ ಕಿಶನ್‌ ಅವರ ಖರೀದಿಗೆ ಆರ್‌ಸಿಬಿ ಹೆಚ್ಚು ಆಸಕ್ತಿ ವಹಿಸಿದೆ.

2018 ರ ಐಪಿಎಲ್ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್‌ ತಂಡ ಸೇರಿಕೊಂಡಿದ್ದರು. ಅಂದಿನಿಂದ 45 ಐಪಿಎಲ್ ಪಂದ್ಯಗಳಿಂದ 1133 ರನ್ ಗಳಿಸಿದ್ದಾರೆ. ಐದು ಬಾರಿಯ ಚಾಂಪಿಯನ್‌ ತಂಡ ಅವರನ್ನು ಈ ಬಾರಿ ಮುಂಬೈ ಇಂಡಿಯನ್ಸ್‌ ಬಿಡುಗಡೆ ಮಾಡಿತ್ತು, ಐಪಿಎಲ್ 2020 ರಲ್ಲಿ ಅವರು ಮುಂಬೈ ಇಂಡಿಯನ್ಸ್‌ಗಾಗಿ ಆಡಿದ 14 ಪಂದ್ಯ ಗಳಲ್ಲಿ, ಅವರು ನಾಲ್ಕು ಅರ್ಧ ಶತಕಗಳನ್ನು ಒಳಗೊಂಡಂತೆ 57.33 ಸರಾಸರಿಯಲ್ಲಿ 516 ರನ್ ಗಳಿಸಿದ್ದರು. 2021 ರಲ್ಲಿ, ಅವರು 10 ಐಪಿಎಲ್ ಪಂದ್ಯಗಳಲ್ಲಿ ಕೇವಲ 241 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ಆಟಗಾರ ಇಶಾನ್‌ ಕಿಶನ್‌ ಅಗ್ರ ಕ್ರಮಾಂಕದ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅದ್ರಲ್ಲೂ ಸ್ಪೋಟಕ ಆಟದ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಐಪಿಎಲ್‌ ಮೆಗಾ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿಗೆ ನಿಗದಿಪಡಿಸಿಕೊಂಡಿದ್ದಾರೆ. ಅಲ್ಲದೇ ಅದಕ್ಕಿಂತಲೂ ಅಧಿಕ ಹಣವನ್ನು ಅವರು ಪಡೆಯುತ್ತಾರೆ ಎನ್ನಲಾಗುತ್ತಿದೆ.

ಆರ್‌ಸಿಬಿ ತಂಡ ಇಶಾನ್‌ ಕಿಶಾನ್‌ ಸೆಳೆಯಲು ಫ್ಲ್ಯಾನ್‌ ಮಾಡಿಕೊಂಡಿದೆ. ಅದ್ರಲ್ಲೂ ದೇಶೀಯ ಪಂದ್ಯಗಳಲ್ಲಿಯೂ ಇಶಾನ್‌ ಕಿಶನ್‌ ವಿಕೆಟ್‌ ಕೀಪರ್‌ ಹಾಗೂ ಬ್ಯಾಟ್ಸ್‌ಮನ್‌ ಆಗಿಯೂ ಮಿಂಚಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಆಟಗಾರರ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಇದನ್ನೂ ಓದಿ : Krunal Pandya : ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್‌ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಇದನ್ನೂ ಓದಿ : ಸನ್‌ರೈಸಸ್‌ ಹೈದ್ರಬಾದ್‌ ತಂಡದ ಖ್ಯಾತ ಆಟಗಾರನಿಗೆ 3 ವರ್ಷ ಕ್ರಿಕೆಟ್‌ನಿಂದ ನಿಷೇಧ ಹೇರಿದ ಐಸಿಸಿ

( Ishan Kishan play for RCB in IPL 2022)

Comments are closed.