Indian movie industry : 2022 ವರ್ಷದ ಕೊನೆಯ ಶುಕ್ರವಾರ ರಿಲೀಸ್‌ ಆಗುವ ವಿವಿಧ ಇಂಡಸ್ಟ್ರಿಯ ಸಿನಿಮಾ ಯಾವುವು ಗೊತ್ತಾ ?

2022 ಕ್ಯಾಲೆಂಡರ್‌ ವರ್ಷ ಮುಗಿಸಿ 2023 ಹೊಸವರ್ಷಕ್ಕೆ ದಿನಗಣನೆ ಶುರುವಾಗಿದೆ. 2022 ಭಾರತೀಯ ಸಿನಿಮಾ ಕ್ಷೇತ್ರ (Indian movie industry) ದ ಪಾಲಿಗೆ ಕಮ್‌ಬ್ಯಾಕ್ ಎಂದೇ ಹೇಳಬಹುದು. ಈ ವರ್ಷ ಭಾರತದ ಬಹುತೇಕ ಎಲ್ಲಾ ಪ್ರಮುಖ ಇಂಡಸ್ಟ್ರಿಯ ಸಿನಿಮಾಗಳು ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಕಳೆದ ಎರಡು ವರ್ಷಗಳಲ್ಲಿ ಲಾಕ್ ಡೌನ್ ಕಾರಣದಿಂದ ಬಾರಿ ಹಿನ್ನಡೆ ಅನುಭವಿಸಿದ್ದ ಸಿನಿಮಾರಂಗಗಳು ಈ ವರ್ಷ ಮರುಜೀವ ಪಡೆದುಕೊಂಡಿದೆ.

ಅದರಲ್ಲಿ ಸೌತ್‌ ಇಂಡಿಯನ್‌ ಸಿನಿಮಾಗಳು ಈ ವರ್ಷ ಬಾಲಿವುಡ್ ಸಿನಿಮಾರಂಗಕ್ಕೆ ಅಬ್ಬರಿಸಿ ದೊಡ್ಡ ಮಟ್ಟದಲ್ಲಿ ಗೆಲುವವನ್ನು ಸಾಧಿಸಿವೆ. ಸ್ಯಾಂಡಲ್‌ವುಡ್‌ನ ಕೆಜಿಎಫ್ ಚಾಪ್ಟರ್ 2 ಹಾಗೂ ತೆಲುಗು ಸಿನಿಮಾರಂಗದ ಆರ್‌ಆರ್‌ಆರ್ ಈ ವರ್ಷ ಸಾವಿರ ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡುವ ಮೂಲಕ ಅತಿ ಹೆಚ್ಚು ಕಲೆಕ್ಷನ್‌ ಕಂಡ ಭಾರತದ ಎರಡು ಸಿನಿಮಾಗಳು ಎಂಬ ಖ್ಯಾತಿಯನ್ನು ಪಡೆದಿದೆ.

ಇನ್ನೂ ತಮಿಳಿನ ಪೊನ್ನಿಯಿನ್ ಸೆಲ್ವನ್ ಹಾಗೂ ವಿಕ್ರಮ್ 500 ಕೋಟಿ ಗಳಿಸಿದ ಸಿನಿಮಾಗಳು ಆಗಿವೆ. ಈ ಸಿನಿಮಾಗಳ ಜೊತೆಯಲಿ ನಿರ್ದೇಶಕ ಹಾಗೂ ನಟ ರಿಷಬ್‌ ಶೆಟ್ಟಿ ಅಭಿನಯದ “ಕಾಂತಾರ” ಕೇವಲ 16 ಕೋಟಿ ವೆಚ್ಚದಲ್ಲಿ ತಯಾರಾಗಿ 400 ಕೋಟಿ ಗಳಿಸಿ ಸಿನಿ ಮಂದಿಯ ಹುಬ್ಬೇರುವಂತೆ ಮಾಡಿದ್ದು, ಬಾಲಿವುಡ್‌ನ ಕಾಶ್ಮೀರ್ ಫೈಲ್ಸ್, ಸೌತ್‌ನ ಸೀತಾ ರಾಮಮ್, ತಿರುಚಿತ್ರಾಂಬಲಂ, ಕಾರ್ತಿಕೇಯ 2, ಲವ್ ಟುಡೇ ಮುಂತಾದ ಸಿನಿಮಾಗಳು ಕೂಡ ಜನರ ಮನಸ್ಸನ್ನು ಗೆದ್ದು ಸದ್ದು ಮಾಡಿವೆ.

ಹೀಗೆ ಹಲವಾರು ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳು ತೆರೆಕಂಡಿರುವ ಈ ಗೋಲ್ಡನ್ ಇಯರ್‌ಗೆ ಡಿಸೆಂಬರ್ 30ರ ಕೊನೆಯ ಶುಕ್ರವಾರ ಬಿಡುಗಡೆಯಾಗುವ ಸಿನಿಮಾಗಳ ಮೂಲಕ ತೆರೆ ಬೀಳಲಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂತಸದಲ್ಲಿರುವ ದೇಶದ ಸಿನಿಪ್ರಿಯರಿಗೆ ವರ್ಷಾಂತ್ಯದಲ್ಲಿ ವೀಕ್ಷಿಸಲು ಹಲವಾರು ಸಿನಿಮಾಗಳು ಲಭ್ಯವಿದೆ. ಅಂದಹಾಗೆ ವರ್ಷದ ಕೊನೆಯ ಶುಕ್ರವಾರ ಸಿನಿಮಂದಿರಗಳಿಗೆ ಲಗ್ಗೆ ಇಡಲಿರುವ ವಿವಿಧ ಇಂಡಸ್ಟ್ರಿಯ ಸಿನಿಮಾಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಕನ್ನಡ ಸಿನಿಮಾಗಳು :
ಲೂಸ್ ಮಾದ ಯೋಗೇಶ್ ನಟನೆಯ ‘ನಾನು ಅದು ಮತ್ತು ಸರೋಜ’, ಯುವ ಕಲಾವಿದರವನ್ನು ಒಳಗೊಂಡ ‘ಮೇಡ್ ಇನ್ ಬೆಂಗಳೂರು’, ಯೋಗರಾಜ್ ಭಟ್ ನಿರ್ದೇಶನದ ‘ಪದವಿ ಪೂರ್ವ’, ಮಕ್ಕಳ ಸಿನಿಮಾವಾದ ‘ಜೋರ್ಡನ್’, ಕಿರುತರೆ ಚಂದು ಗೌಡ ಅಭಿನಯದ “ದ್ವಿಪಾತ್ರ”, ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ಅಭಿನಯದ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಈ ಎಲ್ಲಾ ಕನ್ನಡ ಸಿನಿಮಾ ಈ ವರ್ಷದ ಕೊನೆಯ ವಾರದಂದು ತೆರೆಕಾಣಲಿದೆ.

ಟಾಲಿವುಡ್ ಸಿನಿಮಾಗಳು :
ಆದಿ ಸಾಯಿಕುಮಾರ್ ನಟನೆಯ ‘ಟಾಪ್ ಗೇರ್’, ಲಕ್ಕಿ ಲಕ್ಷ್ಮಣ್, ಪ್ರೇಮದೇಶಂ, ಡಾಲಿ ಧನಂಜಯ್ ನಟನೆಯ ಕನ್ನಡ ಸಿನಿಮಾ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ದ ತೆಲುಗು ವರ್ಷನ್ ‘ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ’‌, ರಾಜಯೋಗಂ, ವ್ರೈಟರ್ ಪದ್ಮಭೂಷಣ್, ಕೋರಮೀನು ( ಡಿಸೆಂಬರ್ 31ರ ಶನಿವಾರ ಬಿಡುಗಡೆ ) ಈ ಎಲ್ಲಾ ತೆಲುಗು ಸಿನಿಮಾ ಈ ವರ್ಷದ ಕೊನೆಯ ವಾರದಂದು ತೆರೆ ಕಾಣಲಿದೆ.

ತಮಿಳು ಹಾಗೂ ಮಲಯಾಳಂ ಸಿನಿಮಾಗಳು :
ದ ಗ್ರೇಟ್ ಇಂಡಿಯನ್ ಕಿಚನ್ ( ತಮಿಳು ) ಡಿಸೆಂಬರ್ 29ರ ಗುರುವಾರ ಬಿಡುಗಡೆಯಾಗಲಿದೆ. ಐಶ್ವರ್ಯ ರಾಜೇಶ್ ನಟನೆಯ ಡ್ರೈವರ್ ಜಮುನಾ ( ತಮಿಳು ) ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ. ಸೆಂಬಿ ( ತಮಿಳು ) ಸಿನಿಮಾ ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ. ಓಹ್ ಮೈ ಘೋಷ್ಟ್ ( ತಮಿಳು ) ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ. ತ್ರಿಶಾ ನಟನೆಯ ರಾಂಗಿ ತಮಿಳು ಸಿನಿಮಾ ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ. ಮಲಯಾಳಂನ ಮಲಿಕಾಪ್ಪುರಂ ಹಾಗೂ ಡ್ಜಿನ್ ಡಿಸೆಂಬರ್ 30ರ ಶುಕ್ರವಾರ ಬಿಡುಗಡೆಯಾಗಲಿದೆ.

ಇದನ್ನೂ ಓದಿ : Salman Khan birthday celebration : ಸಲ್ಮಾನ್‌ ಖಾನ್‌ ಬರ್ತಡೆಗೆ ತಡವಾಗಿ ಬಂದ ಶಾರುಖ್‌ ಸಖತ್‌ ವೈರಲ್ ಆಯ್ತು ವಿಡಿಯೋ

ಇದನ್ನೂ ಓದಿ : Ravi Teja Dhamaka movie : ತೆಲುಗು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ ನಟ ರವಿತೇಜ “ಧಮಾಕಾ” ಸಿನಿಮಾ

ಇದನ್ನೂ ಓದಿ : Sushant Singh death case: ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಆಸ್ಪತ್ರೆ ಸಿಬ್ಬಂದಿ; ಅಂದು ಅಲ್ಲಿ ನಡೆದಿದ್ದೇ ಬೇರೆ ಹೊರಬಿದ್ದ ಸುದ್ದಿಯೇ ಬೇರೆ ಅಂತೆ..!

ಬಾಲಿವುಡ್ ಸಿನಿಮಾಗಳು :
ಈ ವರ್ಷದ ಕೊನೆಯ ವಾರ (ಡಿಸೆಂಬರ್‌ 30)ದಂದು ಕನ್ನಡದ ವೇದ ಸಿನಿಮಾ ಹಿಂದಿಯಲ್ಲಿ ತೆರೆ ಕಾಣಲಿದೆ. ಹಿಟ್ ದ ಸೆಕೆಂಡ್ ಕೇಸ್ ಹಾಗೂ ಆತ್ಮರಕ್ಷ ಸಿನಿಮಾಗಳು ಕೂಡ ತೆರೆಗೆ ಬರಲಿವೆ.‌

Indian movie industry : Do you know the movies of various industries that will be released on the last Friday of the year 2022?

Comments are closed.