Bus caught fire in depot: ಡಿಪ್ಪೋದಲ್ಲಿ ನಿಲ್ಲಿಸಿದ್ದ ಮೂರು ಬಸ್‌ ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಬೆಂಗಳೂರು: (Bus caught fire in depot) ಡಿಪ್ಪೊದಲ್ಲಿ ನಿಂತಿದ್ದ ಮೂರು ಖಾಸಗಿ ಬಸ್‌ ಗಳು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿ ಸುಟ್ಟು ಭಸ್ಮವಾದ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಆರ್.ವಿ ಇಂಜಿನಿಯರಿಂಗ್‌ ಕಾಲೇಜು ಬಳಿಯಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಮೂರು ಬಸ್‌ ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಎಸ್‌ ಆರ್‌ ಎಸ್‌ ಸಂಸ್ಥೆಗೆ ಸೇರಿದ್ದ ಮೂರು ಬಸ್‌ ಗಳನ್ನು ಡಿಪ್ಪೊದಲ್ಲಿ ಪಾರ್ಕ್‌ ಮಾಡಲಾಗಿತ್ತು. ಈ ವೇಳೆಯಲ್ಲಿ ಬಸ್‌ ನಲ್ಲಿ ಏಕಾಏಕಿ ಬೆಂಕಿ (Bus caught fire in depot) ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲೇ ಮೂರು ಬಸ್‌ ಗಳು ಧಗಧಗನೇ ಹೊತ್ತಿ ಉರಿದಿವೆ.

ಡಿಪ್ಪೊ ಬಳಿಯಲ್ಲಿರುವ ಸಾರ್ವಜನಿಕರು ಕೂಡಲೇ ಅವಘಡದ ಬಗ್ಗೆ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂಧಿಗಳು ಸ್ಥಳಕ್ಕೆ ಆಗಮಿಸಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಏಕಾಏಕಿ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣಗಳು ಏನೆಂಬುದು ತಿಳಿದುಬಂದಿಲ್ಲ.

ಪ್ರಧಾನಿ ಮೋದಿ ಸೋದರನ ಕಾರು ಅಪಘಾತ: ಮೂವರಿಗೆ ಗಾಯ

ಮೈಸೂರು: ಪ್ರಧಾನಿ ಮೋದಿ ಸೋದರ ಪ್ರಹ್ಲಾದ್‌ ಮೋದಿ ಅವರ ಕಾರು ಡಿವೈಡರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೋದಿ ಸಹೋದರ, ಮಗ ಹಾಗೂ ಸೊಸೆಗೆ ಗಾಯಗಳಾಗಿರುವ ಘಟನೆ ಮೈಸೂರು ಹೊರವಲಯದ ಕಡೆಕೋಳಿ ಬಳಿಯಲ್ಲಿ ನಡೆದಿದೆ.

ತನ್ನ ಮಗ ಹಾಗೂ ಸೊಸೆಯೊಂದಿಗೆ ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುವ ಮಾರ್ಗಮಧ್ಯೆ ಅಪಘಾತ ಸಂಭವಿಸಿದ್ದು, ಪ್ರಹ್ಲಾದ್‌ ಮೋದಿ ಅವರಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಪ್ರಾಣಾಪಯದಿಂದ ಮೋದಿ ಅವರ ಸಹೋದರ ಪಾರಾಗಿದ್ದಾರೆ. ಮಗ ಹಾಗೂ ಸೊಸೆಗೆ ಕೂಡ ಘಟನೆಯಲ್ಲಿ ಗಾಯಗಳಾಗಿದ್ದು, ಕಾರಿನ ಮುಂಬಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ಸಂದರ್ಭ ಕಾರಿನಲ್ಲಿದ್ದ ಏರ್‌ ಬ್ಯಾಗ್‌ ಓಪನ್‌ ಆದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ.

ಇದನ್ನೂ ಓದಿ : Mysuru accident: ಪ್ರಧಾನಿ ಮೋದಿ ಸೋದರನ ಕಾರು ಅಪಘಾತ: ಮೂವರಿಗೆ ಗಾಯ

ಗಾಯಗೊಂಡ ಮೂವರನ್ನು ಸದ್ಯ ಮೈಸೂರಿನ ಜೇಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಮೈಸೂರು ಎಸ್‌ ಪಿ ಮತ್ತು ಡಿವೈಎಸ್‌ ಪಿ ಕೂಡ ಸ್ಥಳಕ್ಕೆ ಬೇಟಿ ನೀಡಿದ್ದು, ಘಟನೆಗೆ ನಿಖರ ಕಾರಣಗಳೇನು ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

(Bus caught fire in depot) Three private buses parked in the depot accidentally caught fire and got burnt. The incident took place near RV Engineering College on Mysore Road, Bangalore. Three buses were completely gutted in the fire and no casualties have been reported so far.

Comments are closed.