India’s most valuable celebrities Virat Kohli: ಬೆಂಗಳೂರು: ಕ್ರಿಕೆಟ್ ಜಗತ್ತಿನ ಕಿಂಗ್ ವಿರಾಟ್ ಕೊಹ್ಲಿ (Virat Kohli) ಭಾರತದ ಅತ್ಯಂತ ಮೌಲ್ಯಯುತವಾದ ಸೆಲೆಬ್ರಿಟಿ ಬ್ರ್ಯಾಂಡ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಸಾಲಿನಲ್ಲಿ ವಿರಾಟ್ ಕೊಹ್ಲಿ ಬಾಲಿವುಡ್’ನ ಖ್ಯಾತ ತಾರೆಗಳನ್ನೇ ಹಿಂದಿಕ್ಕಿದ್ದಾರೆ. ಬಾಲಿವುಡ್ ಬಾದ್’ಷಾ ಖ್ಯಾತಿ ಶಾರುಖ್ ಖಾನ್ ಅವರಿಗಿಂತಲೂ ಹೆಚ್ಚು ಮೌಲ್ಯಯುತವಾದ ಸೆಲೆಬ್ರಿಟಿ ಬ್ರ್ಯಾಂಡ್ ವಿರಾಟ್ ಕೊಹ್ಲಿ ಅವರದ್ದಾಗಿದೆ.

ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಒಟ್ಟು 1901 ಕೋಟಿ ರೂ. ಮೌಲ್ಯದ ಸೆಲೆಬ್ರಿಟಿ ಬ್ರ್ಯಾಂಡ್’ಗಳ ಒಡೆಯರಾಗಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ 1693 ಕೋಟಿ ಮೌಲ್ಯದ ಸೆಲೆಬ್ರಿಟಿ ಬ್ರ್ಯಾಂಡ್ ಹೊಂದಿದ್ದಾರೆ. ಕಿಂಗ್ ಖಾನ್ ಶಾರುಖ್ 1001 ಕೋಟಿ ರೂ. ಮೌಲ್ಯದ ಸೆಲೆಬ್ರಿಟಿ ಬ್ರ್ಯಾಂಡ್’ನೊಂದಿಗೆ ಈ ಸಾಲಿನಲ್ಲಿ 3ನೇ ಸ್ಥಾನದಲ್ಲಿದ್ದಾರೆ.
4ನೇ ಸ್ಥಾನದಲ್ಲಿರುವ ಬಾಲಿವುಡ್’ನ ಮತ್ತೊಬ್ಬ ಹಿರಿಯ ನಟ ಅಕ್ಷಯ್ ಕುಮಾರ್ 931 ಕೋಟಿ ರೂ. ಮೌಲ್ಯದ ಸೆಲೆಬ್ರಿಟಿ ಬ್ರ್ಯಾಂಡ್ ಹೊಂದಿದ್ದಾರೆ. ಬಾಲಿವುಡ್ ನಟಿ ಅಲಿಯಾ ಭಟ್ 842 ಕೋಟಿ ರೂ. ಮೌಲ್ಯದ ಸೆಲೆಬ್ರಿಟಿ ಬ್ರ್ಯಾಂಡ್’ನೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಕರ್ನಾಟಕದ ಮೂಲದ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ 800 ಕೋಟಿ ರೂಪಾಯಿ ಮೌಲ್ಯದ ಸೆಲೆಬ್ರಿಟಿ ಬ್ರ್ಯಾಂಡ್ ಹೊಂದಿದ್ದಾರೆ.

ಇದನ್ನೂ ಓದಿ : India Women Cricket: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ ಆರ್’ಸಿಬಿ ಸ್ಟಾರ್ ಆಶಾ ಶೋಭನ !
ಭಾರತದ ಅತ್ಯಂತ ಮೌಲ್ಯಯುತವಾದ ಸೆಲೆಬ್ರಿಟಿ ಬ್ರ್ಯಾಂಡ್
1. ವಿರಾಟ್ ಕೊಹ್ಲಿ: 1,901 ಕೋಟಿ
2. ರಣವೀರ್ ಸಿಂಗ್: 1693 ಕೋಟಿ
3. ಶಾರುಖ್ ಖಾನ್: 1001 ಕೋಟಿ
ಅಕ್ಷಯ್ ಕುಮಾರ್: 931 ಕೋಟಿ
ಅಲಿಯಾ ಭಟ್: 842 ಕೋಟಿ
ದೀಪಿಕಾ ಪಡುಕೋಣೆ: 800 ಕೋಟಿ
ಇದನ್ನೂ ಓದಿ : Lockie Ferguson: 4 ಓವರ್, 4 ಮೇಡನ್; ಟಿ20 ವಿಶ್ವದಾಖಲೆ ದಾಖಲೆ ಬರೆದ RCB ಸ್ಟಾರ್!
34 ವರ್ಷದ ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆದರೆ ಲೀಗ್ ಹಂತದಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ. 3 ಪಂದ್ಯಗಳಲ್ಲಿ ಕೊಹ್ಲಿ ಗಳಿಸಿರುವುದು ಕೇವಲ 5 ರನ್. ಐರ್ಲೆಂಡ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ 1 ರನ್ನಿಗೆ ಔಟಾಗಿದ್ದ ವಿರಾಟ್ ಕೊಹ್ಲಿ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿ ಔಟಾಗಿದ್ದರು. ಕ್ರಿಕೆಟ್ ಶಿಶು ಅಮೆರಿಕ ವಿರುದ್ಧದ ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಇದನ್ನೂ ಓದಿ : Gautam Gambhir India Coach: ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್, ತಿಂಗಳ ಅಂತ್ಯದಲ್ಲಿ ಘೋಷಣೆ !
ಸೂಪರ್-8 ಹಂತದಲ್ಲಿ (Super-8) ಭಾರತ ತಂಡ ಗ್ರೂಪ್-1ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳ ಜೊತೆ ಸ್ಥಾನ ಪಡೆದಿದೆ. ಜೂನ್ 20ರಂದು (ಗುರುವಾರ) ಬಾರ್ಬೆಡೋಸ್’ನ ಬ್ರಿಡ್ಜ್’ಟೌನ್’ನಲ್ಲಿ ನಡೆಯಲಿರುವ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ತಂಡದ ಅಪಾಯಕಾರಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಜೂನ್ 22ರಂದು ಆಂಟಿಗುವಾದಲ್ಲಿ ನಡೆಯುವ 2ನೇ ಸೂಪರ್-8 ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ. ಜೂನ್ 24ರಂದು ಸೇಂಟ್ ಲೂಸಿಯಾದಲ್ಲಿ ನಡೆಯುವ 3ನೇ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡದ ಸವಾಲಿಗೆ ಉತ್ತರಿಸಲಿದೆ.
India’s most valuable celebrity No 1 Virat Kohli Ranveer Singh Shahrukh Khan Akshaya Kumar Alia Bhatt Deepika Padukone in list