ಸೋಮವಾರ, ಏಪ್ರಿಲ್ 28, 2025
HomeCinemaMouni Roy dance : ಗ್ಲಾಸ್ ಹಿಡಿದು ಹೆಜ್ಜೆ ಹಾಕಿದ ಗಲೀ ಗಲೀ ಹುಡುಗಿ: ಮಾಲ್ಢೀವ್ಸ್...

Mouni Roy dance : ಗ್ಲಾಸ್ ಹಿಡಿದು ಹೆಜ್ಜೆ ಹಾಕಿದ ಗಲೀ ಗಲೀ ಹುಡುಗಿ: ಮಾಲ್ಢೀವ್ಸ್ ನಲ್ಲಿ ಮೌನಿ ರಾಯ್ ಹವಾ

- Advertisement -

Mouni Roy dance : ನಟಿಮಣಿಯರ ಹಾಲಿಡೇ ಟ್ರಿಪ್ ಅಂದ್ರೇ ಸಾಕು ಅದು ಮಾಲ್ಡೀವ್ಸ್ ಅನ್ನೋವಷ್ಟರ ಮಟ್ಟಿಗೆ ನೀಲಿನೀರಿನ ಸಮುದ್ರ ಸೆಲೆಬ್ರೆಟಿಗಳನ್ನು ಸೆಳೆದಿದೆ. ಮೊನ್ನೆ ಮೊನ್ನೆ ಮಾಲ್ಡೀವ್ಸ್ ನಲ್ಲಿ ಸನ್ನಿ ಲಿಯೋನ್ ಬಿಕನಿ ತೊಟ್ಟು ಪೋಸ್ ಕೊಡುವ ಮೂಲಕ ಬಿಸಿ ಹೆಚ್ಚಿಸಿದ್ರೇ ಈಗ ಗಲೀ ಗಲೀ ಬೆಡಗಿ ಮೌನಿರಾಯ್ ಸಮುದ್ರ ತೀರದಲ್ಲಿ ಗ್ಲಾಸ್ ಹಿಡಿದು ಚಿಲ್ ಮಾಡುತ್ತಾ ಮತ್ತೇರಿಸುವ ಪೋಸ್ ನೀಡಿದ್ದಾರೆ.

ಕೆಳ ತಿಂಗಳ ಹಿಂದೆಯಷ್ಟೇ ವಿವಾಹ ಬಂಧನಕ್ಕೆ ಕಾಲಿಟ್ಟ ಕೆಜಿಎಫ್ ಬೆಡಗಿ ಮೌನಿರಾಯ್ ಇನ್ನೂ ಹನಿಮೂನ್ ಮೂಡದಿಂದ ಹೊರಬಂದಿಲ್ಲ. ಪತಿ ಜೊತೆ ದೇಶದ ನಾನಾ ಭಾಗಗಳಿಗೆ ಓಡಾಡಿ ಪೋಟೋಸ್ ಪೋಸ್ಟ್ ಮಾಡಿ ಎಂಜಾಯ್ ಮಾಡ್ತಿದ್ದ ಮೌನಿ ರಾಯ್ ಈಗ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಮಾಲ್ಡೀವ್ಸ್ ಮತ್ತೊಂದು ಸುತ್ತಿನ ಹನಿಮೂನ್ ಎಂಜಾಯ್ ಮಾಡ್ತಿರೋ ಮೌನಿರಾಯ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಟ್ರಿಪ್ ನ ಅಪ್ಡೇಟ್ ಕೊಡ್ತಿದ್ದಾರೆ.

ಸಮುದ್ರದ ಮಧ್ಯದಲ್ಲಿರೋ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರೋ ಮೌನಿರಾಯ್ ಅಲ್ಲೂ ಸಖತ್ ಸಖತ್ ಪೋಟೋಸ್ ಕ್ಲಿಕ್ಕಿಸಿಕೊಳ್ಳೋದಿಕ್ಕೆ ಮರೆತಿಲ್ಲ. ಮಾತ್ರವಲ್ಲ ಸಮುದ್ರ ತೀರದ ನಡುವೆಯೇ ಪಿಂಕ್ ಕಲರ್ ಬಿಕನಿ ತೊಟ್ಟ ಮೌನಿರಾಯ್ ಶಾಂಪೇನ್ ಗ್ಲಾಸ್ ಹಿಡಿದು ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದಾರೆ. ಸುತ್ತಲಿನ ತಿಳಿನೀಲಿಯ ನೀರು , ಮಧ್ಯದಲ್ಲಿ ಮೌನಿರಾಯ್ ಮೋಹಕ‌ ನೃತ್ಯ ಕಂಡ ನೆಟ್ಟಿಗರು ಮನಸೋತಿದ್ದಾರೆ.

ಕೇವಲ ಡ್ಯಾನ್ಸ್ ಮಾತ್ರವಲ್ಲ ಸಮುದ್ರದ ಅಲೆಗಳ ಜೊತೆ ಮೌನಿರಾಯ್ ಆಟವಾಡ್ತಿದ್ದು ಆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Dance wighy the waves,Move with the sea,let the rhythm of water set your soul free ಎಂದು ತಮ್ಮ ಪೋಸ್ಟ್ ಜೊತೆ ಟೆಕ್ಸ್ಟ್ ಕೂಡ ಅಪ್ಡೇಟ್ ಮಾಡಿದ್ದಾರೆ.

ಬಾಲಿವುಡ್ ಸಿನಿಮಾ, ಹಿಂದಿ ಸೀರಿಯಲ್, ಮಾಡೆಲಿಂಗ್ ಮೂಲಕವೇ ಗುರುತಿಸಿಕೊಂಡ ಮೌನಿರಾಯ್, ಕನ್ನಡದ ಕೆಜಿಎಫ್ ನ ಐಟಂ ಸಾಂಗ್ ಗೆ ಹೆಜ್ಜೆ ಹಾಕೋ ಮೂಲಕ ಸ್ಯಾ‌ಂಡಲ್ ವುಡ್ ಗೆ ಎಂಟ್ರಿ ನೀಡಿದ್ದರು. ಸದ್ಯ ಹಲವು ಭಾಷೆಯ ಸಿನಿಮಾದಲ್ಲಿ ಮೌನಿ ಬ್ಯುಸಿಯಾಗಿದ್ದು, ಬ್ರೇಕ್ ನಲ್ಲಿ ಟ್ರಿಪ್ ಗೆ ಹಾರಿದ್ದಾರೆ.

ಇದನ್ನೂ ಓದಿ : National cinema day : ಬ್ರಹ್ಮಾಸ್ತ್ರ ಸೂಪರ್‌ ಸಕ್ಸಸ್ : ರಾಷ್ತ್ರೀಯ ಸಿನಿಮಾ ದಿನ‌ ಮುಂದೂಡಿಕೆ

ಇದನ್ನೂ ಓದಿ : Kabza:”ಕಬ್ಜ” ಬಗ್ಗೆ ಕ್ರೇಜ್‌ ಹುಟ್ಟಿಸಿದ ಕಿಚ್ಚ ಸುದೀಪ್

inside Mouni Roy Maldives Vacation dance wighy the waves

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular