KGF Chapter 2 Yash new look : “ಕೆಜಿಎಫ್”‌ ನಟ ಯಶ್‌ ಹೊಸ ಲುಕ್‌ ವೈರಲ್‌

KGF Chapter 2 Yash new look : ಕೆಜಿಎಫ್‌ 2 ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಯಶ್‌ ಮುಂದಿನ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. “ಕೆಜಿಎಫ್‌ 2” (KGF Chapter 2)ಚಿತ್ರ ರೀಲಿಸ್‌ ಆದ ನಂತರ ನಟ ಯಶ್‌ ಜನಪ್ರಿಯತೆ ವಿಶ್ವಮಟ್ಟಕ್ಕೆ ವ್ಯಾಪಿಸಿದೆ. ನಟ ಯಶ್‌ ಕಾಲಶೀಟ್‌ಗಾಗಿ ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು ಕಾದು ಕುಳಿತಿರಬೇಕಾಗಿದೆ. ಈ ನಡುವಲ್ಲೇ ಯಶ್‌ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಟೋಗಳು ಇದೀಗ ಸಖತ್‌ ವೈರಲ್‌ ಆಗುತ್ತಿವೆ.

(KGF Chapter 2)ಯಶ್‌ ರವರು ಇನ್‌ ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಶ್‌ ಅಷ್ಟೊಂದು ಆಕ್ಟಿವ್‌ ಆಗಿ ಇರುತ್ತಿರಲಿಲ್ಲ. ಆದರೆ ಕೆಜಿಎಫ್‌ 2 ಸಿನಿಮಾದ ನಂತರ ಹೊಸ ಹೊಸ ಪೋಸ್ಟ್‌ಗಳನ್ನು ಮಾಡೋದಕ್ಕೆ ಆರಂಭಿಸಿದ್ದಾರೆ. ಅಭಿಮಾನಿಗಳಿಗಾಗಿ ತಾವು ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಹಲವು ಪೋಟೊ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಯಶ್‌ ಅವರ ಇನ್‌ಸ್ಟಾಗ್ರಾಮ್ ಪೇಜ್‌ ನಲ್ಲಿ ಬರೋಬ್ಬರಿ 1.12ಕೋಟಿ ಜನರು ಹಿಂಬಾಲಕರಿದ್ದಾರೆ. ಚಿತ್ರರಂಗದ ಮಟ್ಟಿಗೆ ಇಷ್ಟೊಂದು ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿರುವುದು ಯಶ್‌ ಮಾತ್ರ.

ಯಶ್‌ ಬಿಳಿ ಬಣ್ಣದ ಉಡುಗೆಯಲ್ಲಿ ಟ್ರೀಮ್‌ ಗಡ್ಡ ಮತ್ತು ವಿಭಿನ್ನ ಹೇರ್‌ಸ್ಟೈಲ್‌ ಮೂಲಕ ಗಮನ ಸೆಳೆದಿದ್ದಾರೆ. ಈ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ11 ಲಕ್ಷ ಮಂದಿ ಲೈಕ್ಸ್‌ ಒತ್ತಿದ್ದಾರೆ. ಅದು ಇನ್ನೂ ಹೆಚ್ಚುತ್ತಲೇ ಉಂಟು. ಪೋಟೋ ನೋಡಿದ ಅಭಿಮಾನಿಗಳು “ಕೆಜಿಎಫ್”ನ ಫೇಮಸ್‌ ಡೈಲಾಗ್‌ ಆದ “ಸಲಾಂ ರಾಕಿ ಭಾಯ್‌” ಅಂತಾ ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ : ”ಕಬ್ಜ” ಬಗ್ಗೆ ಕ್ರೇಜ್‌ ಹುಟ್ಟಿಸಿದ ಕಿಚ್ಚ ಸುದೀಪ್

ಇದನ್ನೂ ಓದಿ : ರಾಮನ ಅಯೋಧ್ಯೆಯಲ್ಲಿ ನಟ ಪ್ರಭಾಸ್‌ರಿಂದ ರಾವಣ ದಹನ

ಕೆಜಿಎಫ್‌ 2 ಬಿಡುಗಡೆಯಾಗಿ ಐದು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ನಟ ಯಶ್‌ ತನ್ನ ಮುಂದಿನ ಸಿನಿಮಾದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಇತ್ತೀಚೆಗಿನ ಕೆಲವು ವರದಿ ಪ್ರಕಾರ ನಿರ್ದೇಶಕ ನರ್ತನ್‌ ಜೊತೆ ನಟ ಯಶ್‌ ಸಿನಿಮಾ ಮಾಡಲಿದ್ದಾರಂತೆ. ಅಲ್ಲದೇ ಆ ಸಿನಿಮಾದಲ್ಲಿ ರಾಮ್‌ ಚರಣ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಇನ್ನೊಂದೆಡೆಯಲ್ಲಿ ಕೆಜಿಎಫ್‌ ಸಿನಿಮಾ ನೋಡಿರುವ ಪ್ರೇಕ್ಷಕರು, ಅಭಿಮಾನಿಗಳು ಯಶ್‌ ಹೊಸ ಸಿನಿಮಾಕ್ಕಾಗಿ ಕಾದು ಕುಳಿತಿದ್ದಾರೆ.

ಇದನ್ನೂ ಓದಿ : ಬ್ರಹ್ಮಾಸ್ತ್ರ ಸೂಪರ್‌ ಸಕ್ಸಸ್ : ರಾಷ್ತ್ರೀಯ ಸಿನಿಮಾ ದಿನ‌ ಮುಂದೂಡಿಕೆ

KGF Chapter 2 Yash new look viral on social media

Comments are closed.