Joe Biden:ಜೋ ಬೈಡನ್‌ ಸರಕಾರದಲ್ಲಿ130ಕ್ಕೂ ಅಧಿಕ ಪ್ರಮುಖ ಹುದ್ದೆಗಳಲ್ಲಿ ಭಾರತೀಯರು

ಅಮೇರಿಕಾ : ವಿಶ್ವದ ದೊಡ್ಡಣ್ಣ ಅಮೇರಿಕ ಸರಕಾರದಲ್ಲಿನ ವಿವಿಧ ಸರಕಾರಿ ಸಂಸ್ಥೆಯಲ್ಲಿ ಭಾರತೀಯರು ಅತೀ ಹೆಚ್ಚು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದ್ರಲ್ಲೂ (Joe Biden)ಜೋ ಬೈಡನ್‌ ಸರಕಾರದಲ್ಲಿನ ಪ್ರಮುಖ 130 ಕ್ಕೂ ಹೆಚ್ಚು ಭಾರತೀಯ ಅಮೇರಿಕನ್ನರು ಕರ್ತವ್ಯದಲ್ಲಿದ್ದಾರೆ ಎಂದು ಶ್ವೇತಭವನ ಅಧಿಕೃತವಾಗಿ ತಿಳಿಸಿದೆ. ಈ ವಿಚಾರ ಬಹಿರಂಗವಾಗುತ್ತಲೇ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸೂಚಿಸಿದ್ದಾರೆ.

ಅಮೇರಿಕದ ಅಧ್ಯಕ್ಷ (Joe Biden)ಜೋ ಬೈಡನ್‌ ತಮ್ಮ ಆಡಳಿತ ಅವಧಿಯಲ್ಲಿ ಈವರೆಗೆ 130ಕ್ಕೂ ಹೆಚ್ಚಿನ ಭಾರತೀಯ – ಅಮೇರಿಕನ್ನರನ್ನು ಪ್ರಮುಖ ಸ್ಥಾನಗಳಲ್ಲಿ ನೇಮಕಗೊಳಿಸಿದ್ದಾರೆ.ಇದು ಅಮೇರಿಕದ ಜನಸಂಖ್ಯೆಗೆ ಹೋಲಿಸಿದ್ದರೆ ಶೇ.1 ರಷ್ಟಿದೆ. ಜೋ ಬೈಡನ್‌ 2020ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸಮುದಾಯಕ್ಕೆ ನೀಡಿದ ಆಶ್ವಾಸನೆಯನ್ನು ಪೂರೈಸಿದ್ದಾರೆ. ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 80ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರನ್ನು ನೇಮಕ ಮಾಡಿಕೊಂಡಿದ್ದರು. 8 ವರ್ಷಗಳ ಬರಾಕ್‌ ಒಬಾಮ ರವರ ಅಧ್ಯಕ್ಷತೆಯಲ್ಲಿ 60ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರನ್ನು ಪ್ರಮುಖ ಹುದ್ದೆಗಳಲ್ಲಿ ನೇಮಕಗೊಳಿಸಿದ್ದರು. ಹಾಗಾಗಿ ಜೋ ಬೈಡನ್‌ ರವರು ಇವರಿಬ್ಬರ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಜಾಗತಿಕ ಆರೋಗ್ಯ ಮತ್ತು ಜೈವಿಕ ರಕ್ಷಣೆಯ ಹಿರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ರಾಜ್‌ ಪಂಜಾಬಿರವರು ತಿಳಿಸಿದ್ದಾರೆ. ಬೈಡನ್‌ ಆಡಳಿತವನ್ನು ಪ್ರತಿನಿಧಿಸಿದ ರಾಜ್‌ ಪಂಜಾಬಿ ಭಾರತೀಯರನ್ನು ಉದ್ದೇಶಿಸಿ ಕೆಲವು ಮುಖ್ಯ ವಿಷಯಗಳನ್ನು ಯುಎಸ್‌ ಕ್ಯಾಪಿಟಲ್ ನಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಅಮೇರಿಕದ ಅಧ್ಯಕ್ಷ ಜೋ ಬಿಡನ್‌ ಈವರೆಗೂ 130 ಭಾರತೀಯರನ್ನು ತಮ್ಮ ಆಡಳಿತ ಸಮಯದಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಕಗೊಳಿಸಲು ಮುಖ್ಯ ಕಾರಣವೇನೆಂದರೆ ಅಮೇರಿಕವು ಭಾರತೀಯರ ಆಡಳಿತಾತ್ಮಕ ಮತ್ತು ಬೌದ್ಧಿಕತೆಯ ಪ್ರಬಲತೆಯನ್ನು ಪರಿಗಣಿಸಿದ್ದಾಗಿದೆ.ಭಾರತವು ಈ ಬಾರಿ ಐತಿಹಾಸಿಕ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಆಚರಿಸಿಕೊಂಡಿದೆ. ಇದರ ಸಲುವಾಗಿ 75 ಭಾರತೀಯ ಅಮೇರಿಕನ್‌ ಸಂಸ್ಥೆಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಯುಎಸ್‌ ಇಂಡಿಯಾ ರಿಲೇಶನ್ಸ್‌ ಕೌನ್ಸಿಲ್‌, ಸೇವಾ ಇಂಟರ್‌ನ್ಯಾಶನಲ್‌ , ಏಕಲ್‌ ವಿದ್ಯಾಲಯ ಫೌಂಡೇಶನ್‌, ಹಿಂದೂ ಸ್ವಯಂಸೇವಕ ಸಂಘ, GOPIO ಸಿಲಿಕಾನ್‌ ವ್ಯಾಲಿ, ಯುಎಸ್‌ ಇಂಡಿಯಾ ಫ್ರೇಂಡ್‌ ಶಿಪ್‌ ಕೌನ್ಸಿಲ್‌, ಸನಾತನ ಸಂಸ್ಕೃತಿಗಾಗಿ ಸರ್ದಾರ್‌ ಪಟೇಲ್‌ ಫಂಡ್‌ . ಬುಧವಾರ ನಡೆದ ಕಾರ್ಯಕ್ರಮದ ಥೀಮ್‌ “ಸ್ಟ್ರಾಂಗರ್‌ ಟುಗೆದರ್‌ ಯುಎಸ್-ಇಂಡಿಯಾ ಪಾಲುದಾರಿಕೆ”. ಈ ಕಾರ್ಯಕ್ರಮದಲ್ಲಿ ರಾಜ್‌ ಪಂಜಾಬಿ ಮಾತನಾಡಿ, ವೈವಿಧ್ಯಮಕ್ಕೆ ಬದ್ಧವಾಗಿರುವ ಆಡಳಿತದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದರು.

ಯುವ ವೇದಾಂತ್‌ ಪಟೇಲ್‌ ಈಗ ರಾಜ್ಯ ಇಲಾಖೆಯಲ್ಲಿ ಉಪವಕ್ತಾರರಾಗಿದ್ದಾರೆ, ಗರಿಮಾ ವರ್ಮಾ ಉಪಾಧ್ಯಕ್ಷರ ಕಚೇರಿಯಲ್ಲಿ ಡಿಜಿಟಲ್‌ ನಿರ್ದೇಶಕರಾಗಿದ್ದಾರೆ. ಇದಲ್ಲದೇ ಹಲವಾರು ಭಾರತೀಯ ಅಮೇರಿಕನ್ನರನ್ನು ಪ್ರಮುಖ ರಾಯಭಾರಿ ಹುದ್ದೆಗಳಲ್ಲಿ ಬೈಡನ್‌ ರವರು ನಾಮನಿರ್ದೇಶನ ಮಾಡಿದ್ದಾರೆ. ಇಂಡಿಯಾಸ್ಪೊರಾ ಸಿದ್ಧಪಡಿಸಿದ ಪಟ್ಟಿಯ ಪ್ರಕಾರ , 40ಕ್ಕೂ ಹೆಚ್ಚು ಭಾರತೀಯ ಅಮೇರಿಕನ್ನರು ದೇಶಾದ್ಯಂತ ವಿವಿಧ ಕಛೇರಿಗಳಿಗೆ ಆಯ್ಕೆ ಮಾಡಿದ್ದಾರೆ. ಹಾಗೆ ನಾಲ್ವರನ್ನು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ನಲ್ಲಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ : ತಲೆತಿರುಗಿಸುತ್ತೆ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಸರ್ಕಾರದಿಂದಾದ ಖರ್ಚು

ಇದನ್ನೂ ಓದಿ : ಭಾರತೀಯ ಹವಾಮಾನ ಇಲಾಖೆಯಲ್ಲಿದೆ ಸುವರ್ಣಾವಕಾಶ : 160 ಕ್ಕೂ ಹೆಚ್ಚು ಸೈಂಟಿಸ್ಟ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಸಲದ ಬೈಡನ್‌ ಸರಕಾರವು ಹೆಚ್ಚಿನ ಇಲಾಖೆ ಮತ್ತು ಏಜೆನ್ಸಿಗಳಿಗೆ ಭಾರತೀಯ-ಅಮೇರಿಕನ್ನರನ್ನು ನೇಮಕಗೊಳಿಸಿದ್ದಾರೆ. ಅಮೇರಿ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ನಲ್ಲಿ ನಾಲ್ವರು ಸೇರಿದಂತೆ ವಿವಿಧ ರಾಜ್ಯ ಮತ್ತು ಫೆಡರಲ್‌ ಹಂತಗಳಲ್ಲಿ 40ಕ್ಕೂ ಹೆಚ್ಚು ಭಾರತೀಯ-ಅಮೇರಿಕನ್ನರು ಚುನಾಯಿತರಾಗಿದ್ದಾರೆ. ರೊನಾಲ್ಡ್‌ ರೇಗನ್‌ ರವರ ಸಮಯದಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ನೇಮಕಾತಿ ಮಾಡಲಾಗಿದೆ.

Indians in more than 130 important positions in Joe Biden’s government

Comments are closed.