Alia Bhatt and Ranbir Kapoor : ಬಿ ಟೌನ್ನ ಈ ವರ್ಷದ ಮದುವೆ ಇಂದು ನೆರವೇರಿದೆ. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಇಂದು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಾಸ್ತು ನಿವಾಸದಲ್ಲಿ ಸಪ್ತಪದಿ ತುಳಿದಿದ್ದಾರೆ. ಕೃಷ್ಣ ರಾಜ್ ಬಂಗಲೆಯಲ್ಲಿ ನಡೆದ ದಂಪತಿಯ ಮೆಹಂದಿ ಸಮಾರಂಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಹಾಜರಿದ್ದರು.
ಸಮಾರಂಭದ ಬಳಿಕ ಸಾಹ್ನಿ ಕಟ್ಟಡದಿಂದ ಹೊರ ಬಂದ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಹಾಗೂ ಸಹೋದರಿ ರಿದ್ಧಿಮಾ ಕಪೂರ್ ಮದುವೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆದರೆ ಇಲ್ಲಿಯವರೆಗೆ ಮದುವೆಯ ಯಾವುದೇ ಫೋಟೋಗಳು ಹೊರ ಬಿದ್ದಿಲ್ಲ.
ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ರಿಮಾ ಜೈನ್, ರಣಧೀರ್ ಕಪೂರ್, ರಾಹುಲ್ ಭಟ್ ಹಾಗೂ ಕರಣ್ ಜೋಹರ್ ಸೇರಿದಂತೆ ಅನೇಕರು ಸಾಕ್ಷಿಯಾದರು. ಪಂಜಾಬಿ ಸಂಪ್ರದಾಯದಂತೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದೆ ಎನ್ನಲಾಗಿದೆ.
ಮದುವೆ ಸಮಾರಂಭದ ಥೀಮ್ ಬಣ್ಣ ಬಿಳಿ ಹಾಗೂ ಬಂಗಾರ ಬಣ್ಣವಾಗಿತ್ತು. ನೀತು ಕಪೂರ್, ಸೋನಿ ರಾಜ್ದಾನ್, ಶಹೀನ್ ಭಟ್, ರಿದ್ಧಿಮಾ ಕಪೂರ್, ರೀಮಾ ಜೈನ್, ಕರೀನಾ ಕಪೂರ್ ಖಾನ್ ಸೇರಿದಂತೆ ಅನೇಕರು ಗುಲಾಬಿ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡರು.
ಮದುವೆಯ ಸಂಭ್ರಮ ಮುಗಿದ ಬಳಿಕ ಇನ್ನೇನು ಕೆಲವೇ ದಿನಗಳಲ್ಲಿ ನಟ ರಣಬೀರ್ ಕಪೂರ್ ರಶ್ಮಿಕಾ ಮಂದಣ್ಣ ಜೊತೆಯಲ್ಲಿ ಆ್ಯನಿಮಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಲಿದ್ದಾರೆ. ಇತ್ತ ಸಾಲು ಸಾಲು ಸಿನಿಮಾಗಳ ಸಕ್ಸಸ್ನಲ್ಲಿ ತೇಲುತ್ತಿರುವ ನಟಿ ಆಲಿಯಾ ಭಟ್ ಹಾಲಿವುಡ್ ಅಂಗಳಕ್ಕೆ ಹಾರಲಿದ್ದಾರೆ.
ಇದನ್ನು ಓದಿ : Kanthara : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್
ಇದನ್ನೂ ಓದಿ : KGF Chapter 2 Piracy Leak: ಕೆಜಿಎಫ್ 2ಗೆ ಪೈರಸಿ ಶಾಕ್: ಮೊದಲ ದಿನವೇ ಲೀಕ್ ಆದ ಸಿನೆಮಾ
It’s official! Alia Bhatt and Ranbir Kapoor are now married | LIVE Updates