Santosh‌ Suicide Case : ಈಶ್ವರಪ್ಪ ಬಚಾವ್ ಮಾಡಲು ಸಿಎಂ ಮಾಸ್ಟರ್ ಪ್ಲ್ಯಾನ್ : ಸಿಐಡಿ ತನಿಖೆಗೆ ಸಂತೋಷ್ ಕೇಸ್

ಬೆಂಗಳೂರು : ಸದ್ಯ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರೋ ಕನಸಿನಲ್ಲಿ ಯೋಜನೆಗಳನ್ನು ರೂಪಿಸೋದರಲ್ಲಿ ಬ್ಯುಸಿಯಾಗಿದ್ದ ಸರ್ಕಾರಕ್ಕೆ ಈಶ್ವರಪ್ಪ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಈಶ್ವರಪ್ಪ ವಿರುದ್ಧ 40 % ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh‌ Suicide Case) ತಮ್ಮ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸುತ್ತಿರುವ ಕಾಂಗ್ರೆಸ್ ಈಶ್ವರಪ್ಪ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸುತ್ತಿದೆ.

ಹೀಗಾಗಿ ಬಿಜೆಪಿ ತೀವ್ರ ಮುಜುಗರಕ್ಕಿಡಾಗಿದೆ. ಈ ಮುಜುಗರವನ್ನು ತಪ್ಪಿಸಿಕೊಳ್ಳಲುಮೊದಲು ಸಚಿವ ಈಶ್ವರಪ್ಪ ವಿರುದ್ದ ಕ್ರಮದ ಬದಲು ತನಿಖೆಗೆ ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಮುಜುಗರವನ್ನು ತಪ್ಪಿಸಿಕೊಳ್ಳಲು ಹಾಗೂ ಕಾಂಗ್ರೆಸ್ ಬಾಯಿ ಮುಚ್ಚಿಸುವ ಉದ್ದೇಶದಿಂದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ನೀಡಲು ಸಿಎಂ ಚಿಂತನೆ ನಡೆಸಿದ್ದಾರಂತೆ.

ಈ ಪ್ರಕರಣವನ್ನು ಸಿಐಡಿಗೆ ಕೊಡುವ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಡಿಜಿಪಿ ಪ್ರವೀಣ್ ಸೂದ್ ಜೊತೆ ಸಿಎಂ ಮಹತ್ವದ ಮಾತುಕತೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ವಿಸ್ತೃತ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ, ಈಶ್ವರಪ್ಪ ಮೇಲಿನ ಕಮಿಷನ್ ಆರೋಪ ಪ್ರಕರಣ,ಈಶ್ವರಪ್ಪ ಮೇಲಿನ ಸಂತೋಷ ಆರೋಪ,ಸಂತೋಷ್ ಆತ್ಮಹತ್ಯೆ ನಂತರ ಈಶ್ವರಪ್ಪ ವಿರುದ್ಧ ಆಗಿರುವ ಎಫ್ಐಆರ್ ಬಗ್ಗೆ ಮಾಹಿತಿ ಪಡೆದಿದ್ದಾರಂತೆ. ಈ ಪ್ರಕರಣದ ತನಿಖೆಯ ಬಗ್ಗೆ ವಿಸ್ತೃತ ವರದಿ ಪಡೆದ ಸಿಎಂ, ಆ ನಂತರ ಈ ಬಗ್ಗೆ ಉನ್ನತ ಮಟ್ಟದ ತನಿಖೆ ವಹಿಸುವ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಪ್ರಕಟಿಸಲಿದ್ದಾರೆ ಎನ್ನಲಾಗ್ತಿದೆ.

ಡಿಜಿಪಿ ಪ್ರವೀಣ್ ಸೂದ್ ಜೊತೆ ಚರ್ಚಿಸಿರುವ ಸಿಎಂ ಬೊಮ್ಮಾಯಿ, ಶೀಘ್ರವೇ ಈ ಪ್ರಕರಣ ವನ್ನು ಸಿಐಡಿಗೆ ವಹಿಸುವ‌ ಬಗ್ಗೆ ನಿರ್ಧಾರ ಸಾಧ್ಯತೆ ಇದೆ. ಈ ಮೂಲಕ ಸದ್ಯದ ಮಟ್ಟಿಗೆ ವಿಪಕ್ಷಗಳ ಬಾಯಿ ಮುಚ್ಚಿಸುವ ತಂತ್ರ ಸಿಎಂರದ್ದು. ಈಗಾಗಲೇ ಈಶ್ವರಪ್ಪ ಬಂಧನಕ್ಕೆ ಪಟ್ಟು ಹಿಡಿದಿರುವ ವಿಪಕ್ಷಗಳು, ಪ್ರತಿಭಟನೆಗೆ ಮುಂದಾಗಿವೆ. ಹೀಗಾಗಿ ವಿಪಕ್ಷಗಳ ತಂತ್ರಕ್ಕೆ ಸಿಐಡಿ ಪ್ರತಿತಂತ್ರ ಬಳಸಲು ಸಿಎಂ ಯೋಚಿಸಿದಂತಿದೆ. ಪ್ರಕರಣ ವನ್ನು ಸಿಐಡಿಗೆ ವಹಿಸಿದ್ದೇವೆ. ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಣಯ ಸದ್ಯ ಈಶ್ವರಪ್ಪ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ಕೊಡಲು ಸಿಎಂ ಪ್ಲ್ಯಾನ್ ಮಾಡಿದ್ದಾರಂತೆ.

ಇದನ್ನೂ ಓದಿ : KS Eshwarappa : ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್​ ಈಶ್ವರಪ್ಪ

ಇದನ್ನೂ ಓದಿ : ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್​ ಬಿಗಿಪಟ್ಟು: ನಾಳೆ ಅಹೋರಾತ್ರಿ ಧರಣಿ

Santosh‌ Suicide Case KS Eshwarappa Saving CM Master Plan

Comments are closed.