ಮತ್ತೆ ಜೋಡಿಯಾದ ಜಗ್ಗೇಶ್ – ಗುರುಪ್ರಸಾದ್….! ಮಠ ತಂಡದಿಂದ ತೆರೆಗೆ ರಂಗ ನಾಯಕ..!!

ಇತ್ತೀಚಿಗಷ್ಟೇ ತಮ್ಮ 40 ವರ್ಷಗಳ ಸಿನಿ ಜರ್ನಿಯ ಸಂಭ್ರಮ ಹಂಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಈಗ, ಮತ್ತೊಮ್ಮೆ ಹಳೆ ಜೋಡಿ ಜೊತೆ ಹೊಸ ಚಿತ್ರಕ್ಕೆ ಜೈ ಎಂದಿದ್ದಾರೆ.ಮಠ ಖ್ಯಾತಿಯ ಗುರುಪ್ರಸಾದ್ ಜೊತೆ ನಟ ಜಗ್ಗೇಶ್ ರಂಗನಾಯಕಕ್ಕೆ ಸಿದ್ಧವಾಗಿದ್ದು, 2021 ರ ಜನವರಿಯಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಸಂಪೂರ್ಣ ಹಾಸ್ಯಚಿತ್ರವಾದ ರಂಗನಾಯಕ ಕಳೆದ ಅಕ್ಟೋಬರ್ ನಲ್ಲೇ ಚಿತ್ರ ಘೋಷಿಸಿದ್ದ ಗುರುಪ್ರಸಾದ್ ಹಾಗೂ ಜಗ್ಗೇಶ್ ಚಿತ್ರಕ್ಕೆ ಸಂಬಂಧಿಸಿದ ಟೀಸರ್ ಕೂಡ ರಿಲೀಸ್ ಮಾಡಿದ್ದರು. ಆದರೆ ಕೊರೋನಾ ಎಫೆಕ್ಟ್ ನಿಂದ ಚಿತ್ರದ ಶೂಟಿಂಗ್ ರದ್ದಾಗಿತ್ತು. ಹೀಗಾಗಿ 2021 ಜನವರಿಯಿಂದ ಜಗ್ಗೇಶ್ ರಂಗನಾಯಕ ನ ಅವತಾರ ತಾಳಲಿದ್ದಾರೆ.

2006 ರಲ್ಲಿ ತೆರೆ ಕಂಡಿದ್ದ ಮಠ ಚಿತ್ರ ಸಿನಿಪ್ರಿಯರನ್ನು ರಂಜಿಸಿತ್ತು.ವಿಭಿನ್ನ ಚಿತ್ರಕತೆ ಹೊಂದಿದ್ದ ಈ ಚಿತ್ರದ ಗೆಲುವು ಜಗ್ಗೇಶ್ ಗೆ ವಿಭಿನ್ನ ಇಮೇಜ್ ತಂದುಕೊಟ್ಟಿತ್ತು. ಆ ಬಳಿಕ 2009 ರಲ್ಲಿ ಮತ್ತೆ ಎದ್ದೇಳು ಮಂಜುನಾಥ ಮೂಲಕ ಮತ್ತೊಂದು ಔಟ್ ಆ್ಯಂಡ್ಔಟ್ ಕಾಮೆಡಿ ಚಿತ್ರ ನೀಡಿತ್ತು. ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ಮತ್ತೆ ಗುರುಪ್ರಸಾದ್ ನವರಸ ನಾಯಕನ ಜೊತೆ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಮತ್ತೇ ಕಾಮಿಡಿ ರಸದೌತಣ ಬಡಿಸಲು ಸಜ್ಜಾಗಿದ್ದಾರೆ.

ವಿಖ್ಯಾತ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಇದಕ್ಕೂ ಅನೂಪ್ ಸಿಳಿನ್ ಸಂಗೀತವಿದೆ. ಚಿತ್ರತಂಡ ಈಗಾಗಲೇ ಶೂಟಿಂಗ್ ಸಿದ್ಧತೆಯಲ್ಲಿದ್ದು ಹೊಸವರ್ಷಕ್ಕೆ ಹೊಸರೀತಿಯ ಕಾಮಿಡಿ ಭರ್ಜರಿ ಊಟದ ಜೊತೆ ಜಗ್ಗೇಶ್ ತೆರೆಗೆ ಬರಲಿದ್ದಾರೆ.

https://www.youtube.com/watch?app=desktop&v=iQjHpDHxnf8

Comments are closed.