Janhvi Kapoor: ಕನಸು ಈಡೇರಿಸಿಕೊಂಡ ಖುಷಿಯಲ್ಲಿ‌ ಜಾಹ್ನವಿ ಕಪೂರ್

ಸೌತ್ ನಟಿಯರು ಬಾಲಿವುಡ್ ಗೆ ಲಗ್ಗೆ ಇಡ್ತಿರೋ ಕಾಲಘಟ್ಟದಲ್ಲಿ ಬಾಲಿವುಡ್ ನಟಿಯರೂ ಸೌತ್ ಸಿನಿಮಾಗಳ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ಶ್ರೀದೇವಿ ಪುತ್ರಿ ಜಾಹ್ನವಿ (Janhvi Kapoor) ಈಗ ಸೌತ್ ಸಿನಿಮಾದಲ್ಲಿ ಮೋಡಿ ಮಾಡಲು ಸಿದ್ಧವಾಗಿದ್ದಾರೆ. ಜನತಾ ಗ್ಯಾರೇಜ್ ನಂತರ ತೆಲುಗಿನ ಸ್ಟಾರ್ ನಟ ಜ್ಯೂನಿಯರ್ ಎನ್ ಟಿ ಆರ್ ಮತ್ತು ನಿರ್ದೇಶಕ ಕೊರಟಾಲ್ ಶಿವು ಹೊಸ ಚಿತ್ರಕ್ಕೆ ಜೊತೆಯಾಗಿದ್ದಾರೆ. ಈ ಅದ್ದೂರಿ ಜೋಡಿಯ ಸಿನಿಮಾಕ್ಕೆ ನಾಯಕಿಯಾಗಿ ನಟಿ ಜಾಹ್ನವಿ ಕಪೂರ್ ಆಯ್ಕೆಯಾಗಿದ್ದಾರೆ.

ಈ ಸಿಹಿ ಸುದ್ದಿಯ ಗುಟ್ಟನ್ನು ನಟಿ ಜಾಹ್ನವಿ ಕಪೂರ್ ಬಿಟ್ಟು ಕೊಟ್ಟಿಲ್ಲ. ಬದಲಾಗಿ ಚಿತ್ರ ತಂಡ ಜಾಹ್ನವಿ ಕಪೂರ್ ಹುಟ್ಟುಹಬ್ಬದಂದು ವಿಶೇಷ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಪ್ರೈಸ್ ನೀಡಿದೆ. ಈ ಸಿನಿಮಾ ಘೋಷಣೆಯೊಂದಿಗೆ ಜಾಹ್ನವಿ ಹೊಸ ಕನಸೊಂದು ಈಡೇರಿದಂತಾಗಿದೆ. ಹೌದು ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ನಟಿ ಜಾಹ್ನವಿ ಕಪೂರ್ ಸೌತ್ ನ ಸೂಪರ್ ಹಿಟ್ ಹಿರೋ ಜ್ಯೂನಿಯರ್ ಎನ್ ಟಿ ಆರ್ ಜೊತೆ ನಟಿಸಬೇಕೆಂಬ ಆಸೆ ಹಂಚಿಕೊಂಡಿದ್ದರು. ಈಗ ಜಾಹ್ನವಿ ಕನಸು ಈಡೇರುತ್ತಿದ್ದು, ಜ್ಯೂನಿಯರ್ ಎನ್ ಟು ಆರ್ ಮೂವತ್ತನೇ ಸಿನಿಮಾಕ್ಕೆ ನಾಯಕಿಯಾಗುವ ಸೌತ್ ನಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಇದು ಕೇವಲ ಆಕ್ಷ್ಯನ್ ಮಾತ್ರವಲ್ಲ ಸೆಂಟಿಮೆಂಟ್ ಕತೆ ಕೂಡ ಒಳಗೊಂಡಿದ್ದು , ಅಭಿಮಾನಿಗಳ ಮನೆಗೆಲ್ಲೋದು ಬಹುತೇಕ ಖಚಿತವಾಗಿದೆ.

https://www.instagram.com/p/CpcHcs7IajF/?igshid=YmMyMTA2M2Y=

ಮಾರ್ಚ್ ಅಂತ್ಯಕ್ಕೆ ಈ ಸಿನಿಮಾದ ಮುಹೂರ್ತ ನೆರವೇರಲಿದ್ದು, ಯುವಸುಧಾ ಆರ್ಟ್ಸ್ ಮತ್ತು ಎನ್ ಟಿ ಆರ್ ಆರ್ಟ್ಸ್ ಸಂಸ್ಥೆಗಳಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ‌ ನಿರ್ಮಿಸುತ್ತಿರುವ ಈ ಸಿನಿಮಾಗೆ ರತ್ನವೇಲು ಛಾಯಾಗ್ರಹಣವಿದೆ. ರಾಕ್ ಸ್ಟಾರ್ ಅನಿರುದ್ಧ ಸಂಗೀತ ನೀಡ್ತಿರೋ ಈ ಸಿನಿಮಾಗೆ ಶ್ರೀಕರಪ್ರಸಾದ್ ಸಂಕಲನವಿದೆ. ಸಿನಿಮಾ‌ ಮುಹೂರ್ತಕ್ಕೂ ಮುನ್ನವೇ ಸಿನಿಮಾದ ರಿಲೀಸ್ ಡೇಟ್ ಕೂಡ ಅಂತಿಮಗೊಂಡಿದ್ದು ಜಾಹ್ನವಿಯನ್ನು ಸೌತ್ ಸಿನಿಮಾದಲ್ಲಿ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು 2024 ರ ಏಪ್ರಿಲ್ 05 ರವರೆಗೂ ಕಾಯೋದು ಅನಿವಾರ್ಯ. ಸೋಮವಾರ ಗ್ರ್ಯಾಂಡ್ ಬರ್ತಡೇ ಆಚರಿಸಿಕೊಂಡ ಜಾಹ್ನವಿಗೆ ಸೌತ್ ಸಿನಿಮಾದಿಂದ ಗ್ರ್ಯಾಂಡ್ ಪೋಸ್ಟರ್ ಮೂಲಕ ಶುಭಹಾರೈಸಲಾಗಿದೆ.

https://www.instagram.com/p/CpW6367oPtO/?igshid=YmMyMTA2M2Y=

ಇದನ್ನೂ ಓದಿ : “ಕಬ್ಜ” ಬಿಡುಗಡೆಗೂ ಮುನ್ನವೇ ಪಾರ್ಟ್‌ 2 ಬಗ್ಗೆ ಕನ್ಫರ್ಮ್ ಮಾಡಿದ ಆರ್‌ ಚಂದ್ರು

Janhvi Kapoor: Janhvi Kapoor is happy to fulfill her dream

Comments are closed.