ಸ್ಟಾರ್ ಸೆಲೆಬ್ರಿಟಿಗಳು ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಹೀಗಾಗಿ ಇದೀಗ ಸೆಲೆಬ್ರಿಟಿಗಳ ಯಾವುದೇ ಸಂದರ್ಶನವೊಂದರಲ್ಲಿ ಹೃದಯಾಘಾತದ ಬಗ್ಗೆ ಚರ್ಚೆ ಮಾಡುವುದು ಕಾಮನ್ ಆಗಿ ಹೋಗಿದೆ. ಇದೇ ರೀತಿ ಸಂದರ್ಶನವೊಂದರಲ್ಲಿ ಹೃದಯಾಘಾತದ ಬಗ್ಗೆ ಮಾತನಾಡಲು ಹೋಗಿ ಬಾಲಿವುಡ್ ನಟ ಜಾನ್ ಅಬ್ರಾಹಂ (John Abraham) ನೆಟ್ಟಿಗರ ಎದುರು ತಮಾಷೆಯ ವಸ್ತುವಾಗಿದ್ದಾರೆ.
ಜಾನ್ ಅಬ್ರಾಹಂ ಅನೇಕ ವರ್ಷಗಳಿಂದಲೂ ತಮ್ಮ ಫಿಟ್ನೆಸ್ ಕಾಯ್ದುಕೊಂಡು ಬರ್ತಿದ್ದಾರೆ. ದೈಹಿಕ ಕಸರತ್ತು ಹಾಗೂ ಸರಿಯಾದ ಆಹಾರ ಕ್ರಮದ ಮೂಲಕ ಕಟ್ಟುಮಸ್ತಾದ ದೇಹವನ್ನು ಹೊಂದಿರುವ ಜಾನ್ ಅಬ್ರಾಹಂ ಹೃದಯಾಘಾತಕ್ಕೆ ಕಾರಣ ಹೇಳಲು ಹೋಗಿ ಯಡವಟ್ಟು ಮಾಡಿದ್ದಾರೆ.
ಜಯತೇ 2 ಸಿನಿಮಾದ ಪ್ರಮೋಷನ್ಗಾಗಿ ನಟಿ ದಿವ್ಯಾ ಖೋಸ್ಲಾ ಕುಮಾರ್ ಜೊತೆಯಲ್ಲಿ ಕಪಿಲ್ ಶರ್ಮಾರ ಕಾರ್ಯಕ್ರಮಕ್ಕೆ ನಟ ಜಾನ್ ಅಬ್ರಾಹಂ ತೆರಳಿದ್ದರು.ಈ ವೇಳೆ ಹೃದಯಾಘಾತದ ಬಗ್ಗೆ ವಿವರಿಸಿದ ಜಾನ್ ಅಬ್ರಹಾಂ ಕಳಪೆ ಆಹಾರ ಕ್ರಮ ಹಾಗೂ ಒತ್ತಡದಿಂದ ಹೃದಯಾಘಾತ ಸಂಭವಿಸುತ್ತದೆ ಎಂದಿದ್ದಾರೆ. ಇಷ್ಟು ಹೇಳಿದ್ದರೆ ಸಮಸ್ಯೆ ಇರಲಿಲ್ಲ. ಇನ್ನೂ ಮುಂದುವರಿದು.. ನೀರಿನ ಮೇಲೆ ಹೇಗೆ ಎಣ್ಣೆಯು ಗುಳ್ಳೆಯಂತೆ ಕಾಣುತ್ತೋ ಅದೇ ರೀತಿ ರಕ್ತದಲ್ಲಿ ಟ್ರೈಗ್ಲಿಸರೈಡ್ಗಳು ರಕ್ತದಲ್ಲಿ ಗುಳ್ಳೆಯಂತೆ ಇರುತ್ತದೆ. ಇವು ಹೃದಯದ ಸಮೀಪ ಹೋದಾಗ ಹೃದಯಾಘಾತವಾಗುತ್ತೆ ಎಂದಿದ್ದಾರೆ.
I wish our medical students had this much confidence!!!
— Prerna Chettri (@prernachettri) December 8, 2021
Gibberish at all level!!! pic.twitter.com/eOfFI5FUm0
ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗಿದೆ. ನೀವು ಮಾತನಾಡುತ್ತಿರುವ ವಿಚಾರ ತಪ್ಪೆಂದು ಗೊತ್ತಿದ್ದರು ಮುಖದ ಮೇಲೆ ಇರುವ ಆ ಕಾನ್ಫಿಡೆನ್ಸ್ ಮೆಚ್ಚುವಂತದ್ದೇ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ನಿಮ್ಮ ವಿವರಣ ಕೇಳಿಯೇ ಹೃದಯಾಘಾತವಾಗುವಂತಿದೆ ಎಂದು ಅಬ್ರಹಾಂ ಕಾಲೆಳೆದಿದ್ದಾರೆ.
ಇದನ್ನು ಓದಿ : 83 movie Cheating Complaint : ರಿಲೀಸ್ ಗೂ ಮುನ್ನ83 ಗೇ ಸಂಕಷ್ಟ: ನಿರ್ಮಾಪಕರ ವಿರುದ್ಧ ವಂಚನೆ ಪ್ರಕರಣ ದಾಖಲು
ಇದನ್ನೂ ಓದಿ : IMDb Top 10 Indian Films of 2021 : ಭಾರತದ ಟಾಪ್ 10 ಸಿನಿಮಾ, ವೆಬ್ ಸಿರೀಸ್ ಪಟ್ಟಿ ರಿಲೀಸ್ ಮಾಡಿದ IMDb
John Abraham bizarre explanation of what causes a heart attack is now a viral video. Not impressed, says Internet