ಸೋಮವಾರ, ಏಪ್ರಿಲ್ 28, 2025
HomeBreakingಮಗು ಎತ್ತಿಕೊಂಡಾಗ ‌ನಮ್ಮವನೇ ಎಂಬ ಭಾವನೆ ಮೂಡಿತು...! ಜ್ಯೂ.ಚಿರುಗೆ ಎಮೋಶನಲ್ ಕಮೆಂಟ್...!!

ಮಗು ಎತ್ತಿಕೊಂಡಾಗ ‌ನಮ್ಮವನೇ ಎಂಬ ಭಾವನೆ ಮೂಡಿತು…! ಜ್ಯೂ.ಚಿರುಗೆ ಎಮೋಶನಲ್ ಕಮೆಂಟ್…!!

- Advertisement -

ದಿ.ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪುತ್ರ ಜ್ಯೂನಿಯರ್ ಚಿರು 6 ತಿಂಗಳಿಗೆ ಕಾಲಿಟ್ಟಿದ್ದಾನೆ. ಈ ಮಧ್ಯೆ ಜ್ಯೂನಿಯರ್ ಭೇಟಿಗೆ ಬಂದವರೊಬ್ಬರು ಜ್ಯೂ.ಚಿರು ಸ್ಪೆಶಲ್. ಎತ್ತಿಕೊಂಡಾಗಲೇ ನಮ್ಮವನು ಎಂಬ ಎಮೋಶನಲ್ ಫೀಲ್ ಬಂತು ಎಂದಿದ್ದಾರೆ.

ಹೌದು, ಇತ್ತೀಚಿಗೆ ಆರನೇ ತಿಂಗಳಿಗೆ ಕಾಲಿಟ್ಟ ಜ್ಯೂನಿಯರ್ ಚಿರುಗೆ ಮೇಘನಾ ಜಂಗಲ್ ಥೀಮ್ ನಲ್ಲಿ ಪೋಟೋಶೂಟ್ ಮಾಡಿಸಿದ್ದಾರೆ.
ಚಿತ್ರರಂಗದ ಹಿರಿಯ ನಟ ಕಿಶೋರ್ ಸರ್ಜಾ ಪುತ್ರ ಸೂರಜ್ ತಮ್ಮ ಕುಟುಂಬದ ಕುಡಿ ಸೂರಜ್ ಸರ್ಜಾ ಜ್ಯೂನಿಯರ್ ಚಿರು ಭೇಟಿಗೆ ಆಗಮಿಸಿದ್ದರು. ಜ್ಯೂನಿಯರ್ ಚಿರುವನ್ನು ಮಡಿಲಲ್ಲಿ ಎತ್ತಿಕೊಂಡ ಸೂರಜ್ ಭಾವುಕರಾಗಿದ್ದಾರೆ.

ಅಷ್ಟೇ ಅಲ್ಲ, ನಾನು ಈವರೆಗೂ ನನ್ನ ಜೀವನದಲ್ಲಿ ಯಾವ ಮಗುವನ್ನು ಎತ್ತಿಕೊಂಡಿಲ್ಲ. ಆದರೆ ಈ ಮಗುವನ್ನು ಎತ್ತಿಕೊಂಡ ಮೊದಲ ಕ್ಷಣವೇ ತುಂಬ ಕನೆಕ್ಟ್ ಆಗಿದ್ದೇನೆ. ಎತ್ತಿಕೊಂಡ‌ ತಕ್ಷಣವೇ ಇವನು ನಮ್ಮವನೇ ಎಂಬ ಭಾವನೆ ಮೂಡಿತು ಎಂದು ಬರೆದುಕೊಂಡಿದ್ದಾರೆ.

ಇನ್ನು ಸೂರಜ್ ಬರೆದ ಭಾವನಾತ್ಮಕ ಸಾಲುಗಳಿಗೆ ಮೇಘನಾ ರಾಜ್ ಅಷ್ಟೇ ಭಾವನಾತ್ಮಕವಾದ ರಿಪ್ಲೈ ನೀಡಿದ್ದು ಅವನು ನಿನ್ನವನೇ ಸೂರಜ್ ನನಗೆ ಈ ಪೋಟೋ ತುಂಬ ಇಷ್ಟವಾಯಿತು ಎಂದಿದ್ದಾರೆ.

ಇನ್ನು ಸೂರಜ್ ಜ್ಯೂನಿಯರ್ ಚಿರು ಎತ್ತಿಕೊಂಡ ಪೋಟೋಕ್ಕೆ ಅಭಿಮಾನಿಗಳು ಸಖತ್ ಕಮೆಂಟ್ ಮಾಡಿದ್ದು, ಜ್ಯೂನಿಯರ್ ನಲ್ಲಿರೋ ಚಿರು ನಿಮಗೆ ಕನೆಕ್ಟ್ ಆಗಿದ್ದಾರೆ ಎಂದು ಸೂರಜ್ ಗೆ ಅಭಿಮಾನಿಗಳು ಹೇಳಿದ್ದಾರೆ.

ಜ್ಯೂನಿಯರ್ ಗೆ ಐದು ತಿಂಗಳು ಮುಗಿದ ಸಂಭ್ರಮವನ್ನು ಜಂಗಲ್ ಥೀಮ್ ಪೋಟೋಶೂಟ್, ಲಯನ್ ಕಿಂಗ್ ಕೇಕ್ ಜೊತೆ ಸೆಲಿಬ್ರೇಟ್ ಮಾಡಲಾಗಿದ್ದು ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

RELATED ARTICLES

Most Popular