ಭಾನುವಾರ, ಏಪ್ರಿಲ್ 27, 2025
HomeCinemaತರುಣ್‌ ಸುಧೀರ್‌ ನಿರ್ದೇಶನದ ಕಾಟೇರಗಾಗಿ ಸಖತ್‌ ವರ್ಕ್‌ ಓಟ್‌ ಶುರುಮಾಡಿದ ನಟ ದರ್ಶನ್‌

ತರುಣ್‌ ಸುಧೀರ್‌ ನಿರ್ದೇಶನದ ಕಾಟೇರಗಾಗಿ ಸಖತ್‌ ವರ್ಕ್‌ ಓಟ್‌ ಶುರುಮಾಡಿದ ನಟ ದರ್ಶನ್‌

- Advertisement -

ನಟ ದರ್ಶನ್‌ ಸದ್ಯ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಈ ನಡುವಲ್ಲೇ ತರುಣ್‌ ಸುಧೀರ್‌ ನಿರ್ದೇಶನದ ಕಾಟೇರ ಸಿನಿಮಾಕ್ಕಾಗಿ (Kaatera movie – Actor Darshan) ಸಖತ್‌ ವರ್ಕೌಟ್‌ ಮೂಲಕ ದೇಹ ತೂಕವನ್ನು ಇಳಿಸುತ್ತಿದ್ದಾರೆ.

ಕಾಟೇರ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಕಳೆದ ಜನವರಿಯಲ್ಲಿ ತೆರೆಕಂಡ ಕ್ರಾಂತಿ ಸಿನಿಮಾದ ನಂತರ ಕಾಟೇರ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಿನಿಮಾವು 70ರ ದಶಕದ ಕಾಲಘಟ್ಟದ ಕಥಾಹಂದರವನ್ನು ಒಳಗೊಂಡಿದ್ದು, ಈ ಹಿಂದೆ ಸರಕಾರ ಜಾರಿಗೆ ತಂದ ಉಳುವವನೇ ಹೊಲದೊಡಯ ಕಾಯ್ದೆಯಿಂದ ರೈತರಿಗೆ ಏನೆಲ್ಲಾ ಸಂಕಷ್ಟ ಎದುರಿಸಿದ್ದಾರೆ ಎನ್ನುವುದನ್ನು ಈ ಸಿನಿಮಾ ಮೂಲಕ ಹೇಳಲಾಗುತ್ತದೆ. ಈ ಕುರಿತಂತೆ ಸ್ವತಃ ನಟ ದರ್ಶನ್‌ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಲುಂಗಿ ಉಟ್ಟು ಬಹಳ ವಿಭಿನ್ನವಾದ ಲುಕ್‌ನಲ್ಲಿ ನಟ ದರ್ಶನ್‌ ಕಾಣಿಸಿಕೊಂಡಿದ್ದಾರೆ.

ಸದಾ ಫಿಟ್‌ ಆಗಿರುವ ನಟ ದರ್ಶನ್‌ ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುವುದನ್ನು ಮಿಸ್‌ ಮಾಡುವುದಿಲ್ಲ. ತಮ್ಮ ಮನೆಯಲ್ಲೇ ಸಣ್ಣದೊಂದು ಜಿಮ್‌ ಮಾಡಿಕೊಂಡಿರುವ ದರ್ಶನ್‌ ಅದರಲ್ಲೇ ಕಸರತ್ತು ಮಾಡುತ್ತಾರೆ. ದಿನನಿತ್ಯ ದೇಹವನ್ನು ದಂಡಿಸಿ ಆರೋಗ್ಯಕರವಾಗಿದ್ದಾರೆ. ತೆರೆ ಮೇಲೆ ತಮ್ಮ ಮೆಚ್ಚಿನ ಪ್ರೇಕ್ಷಕರನ್ನು ರಂಜಿಸಲು ಸದಾ ತಯಾರಿರುತ್ತಾರೆ. ಲಾಕ್‌ಡೌನ್‌ನಲ್ಲಿ ವರ್ಕೌಟ್ ಮಾಡದೇ ತೂಕ ಹೆಚ್ಚಾಗಿದ್ದು, ನಂತರ ಡಯೆಟ್, ವರ್ಕೌಟ್ ಮಾಡಿ ತೂಕ ಇಳಿಸಿ ‘ಕ್ರಾಂತಿ’ ಸಿನಿಮಾದಲ್ಲಿ ನಟಿಸಿದ್ದರು.

ಇದನ್ನೂ ಓದಿ : ಸಾವಿನ ಬಗ್ಗೆ ಸುಳ್ಳು ವದಂತಿ ಸ್ಪಷ್ಟನೆ ನೀಡಿದ ಹಿರಿಯ ನಟ ದ್ವಾರಕೀಶ್‌

ಇದನ್ನೂ ಓದಿ : ತಾಯಿಯ ಕ್ರಿಯೆಯಂದು ಭಾವುಕರಾದ ನಟಿ ಮಾನ್ವಿತಾ ಕಾಮತ್‌

ಲಾಕ್‌ಡೌನ್‌ ನಂತರ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿ ದರ್ಶನ್ ಅಚ್ಚರಿ ಮೂಡಿಸಿದ್ದರು. ಇನ್ನು ಕಾಟೇರ ಸಿನಿಮಾಕ್ಕಾಗಿ ಹೆಚ್ಚಿನ ತೂಕ ಇಳಿಸಿ ತೆರೆ ಮೇಲೆ ರಂಜಿಸಲಿದ್ದಾರೆ. ನಟ ದರ್ಶನ್ ಮುಂದಿನ ಐದರಿಂದ ಆರು ಸಿನಿಮಾಗಳನ್ನು ಬ್ಯುಸಿಯಾಗಿದ್ದಾರೆ. ಸದ್ಯ ಅವರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Kaatera movie – Actor Darshan : Actor Darshan started working hard for Kaatera directed by Tarun Sudhir.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular