Lunar Eclipse 2023: ವರ್ಷದ ಮೊದಲ ಚಂದ್ರ ಗ್ರಹಣ; ಭಾರತದಲ್ಲಿ ಗೋಚರಿಸಲಿದೆಯಾ? ದಿನ, ಸಮಯ ಮತ್ತು ವೀಕ್ಷಣೆ ಹೇಗೆ…

ಈ ವರ್ಷದ ಮೊದಲ ಚಂದ್ರ ಗ್ರಹಣ (Lunar Eclipse 2023) ಇದೇ ಮೇ 5 2023 ರಂದು ನಭೋಮಂಡಲದಲ್ಲಿ ಜರುಗಲಿದೆ. ಇದು ಸೂರ್ಯನ ಸುತ್ತ ಒಂದೇ ಪಥದಲ್ಲಿ ಸುತ್ತುವ ಆಕಾಶ ಕಾಯಗಳ ನಡುವೆ ನಡೆಯುವ ಒಂದು ವಿದ್ಯಮಾನ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಸಂಭವಿಸುವುದೇ ಚಂದ್ರ ಗ್ರಹಣ. ಸೂರ್ಯನ ಬೆಳಕು ಭೂಮಿಯ ಮೇಲಿಂದ ಹಾದು ಹೋಗಿ ಚಂದ್ರನ ಮೇಲ್ಮೈ ಕೆಂಪು ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಇದೊಂದು ರಾತ್ರಿಯ ನೀಲಾಕಾಶದಲ್ಲಿ ಕಾಣಸಿಗುವ ಅಪರೂಪದ ಅದ್ಭುತ ಚಿತ್ರಣ. ಚಂದ್ರ ಗ್ರಹಣದ ದಿನ, ಸಮಯ, ಮತ್ತು ಎಲ್ಲೆಲ್ಲಿ ವೀಕ್ಷಿಸಬಹುದು ಇಲ್ಲಿದೆ ಓದಿ.

ಚಂದ್ರ ಗ್ರಹಣ 2023 ದಿನ ಮತ್ತು ಸಮಯ :
ವರ್ಷದ ಮೊದಲ ಚಂದ್ರ ಗ್ರಹಣವು ಮೇ 5 ರಂದು ಸಂಭವಿಸಲಿದೆ. ಗ್ರಹಣ ಕಾಲವು ಮೇ 5 ರ ರಾತ್ರಿ 8 ಗಂಟೆ 44 ನಿಮಿಷಕ್ಕೆ ಪ್ರಾರಂಭವಾಗಿ ಮೇ 6 ರ 1 ಗಂಟೆ 1 ನಿಮಿಷಕ್ಕೆ (ಭಾರತೀಯ ಕಾಲ ಮಾನ) ಮುಕ್ತಾಯವಾಗಲಿದೆ. ಒಟ್ಟೂ ಗ್ರಹಣ ಕಾಲವು 4 ಗಂಟೆ 18 ನಿಮಿಷಗಳ ವರೆಗೆ ನಡೆಯಲಿದೆ.

ಎಲ್ಲೆಲ್ಲಿ ಗ್ರಹಣ ಗೋಚರಿಸಲಿದೆ?
ಈ ವರ್ಷದ ಮೊದಲ ಚಂದ್ರ ಗ್ರಹಣವು ಭಾರತದಲ್ಲಿ ಭಾಗಶಃ ಗೋಚರಿಸುವುದಿಲ್ಲ. ಆದರೆ ಗ್ರಹಣವು ಯೂರೋಪ್‌, ಏಷ್ಯಾದ ಇತರ ಭಾಗಗಳು, ಆಸ್ಟ್ರೇಲಿಯಾ, ಆಫ್ರೀಕಾ, ಅಂಟಾರ್ಕಟಿಕಾ, ಅಟ್ಲಾಂಟಿಕ್‌ ಮತ್ತು ಹಿಂದೂ ಮಹಾಸಾಗರ ಸೇರಿದಂತೆ ಇತರ ಪ್ರದೇಶಗಳಿಂದ ಇದನ್ನು ವೀಕ್ಷಿಸಬಹುದಾಗಿದೆ. 2023 ರ ಚಂದ್ರ ಗ್ರಹಣವು ಬುದ್ಧ ಪೂರ್ಣಿಮೆಯಂದೇ ಜರುಗಲಿದ್ದು, ಇದು ಭಾರತೀಯ ಸಂಪ್ರದಾಯಗಳಲ್ಲಿ ಮಹತ್ವವನ್ನು ಹೊಂದಿದೆ. ಚಂದ್ರ ಗ್ರಹಣ ಮೂರು ರೀತಿಯಲ್ಲಿ ಏರ್ಪಡುತ್ತದೆ. ಪೂರ್ಣ ಚಂದ್ರ ಗ್ರಹಣ, ಭಾಗಶಃ ಚಂದ್ರ ಗ್ರಹಣ ಮತ್ತು ಖಂಡ ಚಂದ್ರ ಗ್ರಹಣ. ಮೇ 5 ರಂದು ಸಂಭವಿಸಲಿರುವ ಗ್ರಹಣವು ಖಂಡಛಾಯಾ ಚಂದ್ರ ಗ್ರಹಣವಾಗಿದೆ. ಇದೇ ವರ್ಷ ಅಕ್ಟೋಬರ್‌ 28 ರಂದು ಸಂಭವಿಸಲಿರುವ ಗ್ರಹಣವು ಭಾಗಶಃ ಚಂದ್ರ ಗ್ರಹಣವಾಗಿದೆ.

ಚಂದ್ರ ಗ್ರಹಣವನ್ನು ಬರೀಗಣ್ಣಿನಿಂದಲೇ ವೀಕ್ಷಿಸಬಹುದು. ಅದರೆ ಈ ರೋಚಕ ಘಟನೆಯನ್ನು ಸಂಪೂರ್ಣವಾಗಿ ನೋಡಲು ಬೈನಾಕ್ಯಲರ್‌ ಅಥವಾ ಟೆಲಿಸ್ಕೋಪ್‌ಗಳನ್ನು ಬಳಸಬೇಕಾಗಬಹುದು.

ಇದನ್ನೂ ಓದಿ : ಕಾರ್ಮಿಕ ದಿನ ಆರಂಭಗೊಂಡಿದ್ದು ಯಾವಾಗ ? ಏನಿದರ ಇತಿಹಾಸ, ಮಹತ್ವ

ಇದನ್ನೂ ಓದಿ : ಕರ್ನಾಟಕದ ಮುಂದಿನ ಸಿಎಂ ಹೆಸರು ಘೋಷಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

(Lunar Eclipse 2023, Know the date, time and visibility in India)

Comments are closed.