Megha Shetty Special Photoshoot : ನಟಿಸಿದ ಮೊದಲ ಧಾರಾವಾಹಿಯಲ್ಲೇ (Kannada Serial) ಕನ್ನಡಿಗರ ಮನಗೆದ್ದ ನಟಿ ಮೇಘಾ ಶೆಟ್ಟಿ ಸದ್ಯ ಕನ್ನಡದ ಬಹುಬೇಡಿಕೆಯ ನಟಿ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಮೇಘಾ ಶೆಟ್ಟಿ ಇದೆಲ್ಲದರ ಮಧ್ಯೆಯೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ (Social Media) ಹೊಸ ಹೊಸ ಪೋಟೋಶೂಟ್ ಗಳನ್ನು (megha Shetty Photoshoot) ಅಪ್ಲೋಡ್ ಮಾಡೋದಿಕ್ಕೆ ಮರೆಯೋದಿಲ್ಲ.

ಮೊನ್ನೆ ಮೊನ್ನೆ ವೈಟ್ ನೆಟೆಡ್ ಸೀರೆಯಲ್ಲಿ ದೇಹದ ಅಂದ-ಚೆಂದ ತೋರಿಸಿ ಪಡ್ಡೆ ಹೈಕಳನಿದ್ದೆ ಕದ್ದಿದ್ದ ಮೇಘಾ ಶೆಟ್ಟಿ ಈಗ ಮತ್ತೊಂದು ವೈಟ್ ಕೋಟ್ ಹಾಟ್ ಪೋಟೋಸ್ ಶೇರ್ ಮಾಡೋ ಮೂಲಕ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದಾರೆ. ವೈಟ್ ಒಫನ್ ಕೋಟ್ ಹಾಗೂ ಗೋಲ್ಡ್ ಚೈನ್, ಓಫನ್ ಹೇರ್ ನಲ್ಲಿ ಮೇಘಾ ಶೆಟ್ಟಿಯ ಹೊಸ ಪೋಟೋಶೂಟ್ ಸಖತ್ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಸಿನಿಮಾಗೆ ಬೇಕಿರೋ ಚೆಂದದ ಬಾಡಿಶೇಪ್, ಮಾದಕ ಕಣ್ಣೋಟ, ಸಿಲ್ಕಿ ಹೇರ್ ಹೊಂದಿರೋ ಮೇಘಾ ಮೊದಲ ಬಾರಿಗೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಾಗಲೇ ಸೋಷಿಯಲ್ ಮೀಡಿಯಾ ಹಾಗೂ ಕನ್ನಡಿಗರ ಮನೆ ಮನದಲ್ಲಿ ಹೆಸರು ಮಾಡಿದ್ದರು. ತನಗಿಂತ ದೊಡ್ಡ ವಯಸ್ಸಿನ ಹುಡುಗನನ್ನು ಮದುವೆಯಾಗೋ ಪಾತ್ರದಲ್ಲಿ ಅನುಸಿರಿಯನೆಯಾಗಿ ಮೇಘಾ ಶೆಟ್ಟಿ ನೀಡಿದ ಮನೋಜ್ಞ ಅಭಿನಯ ಎಲ್ಲರನ್ನೂ ಸೆಳೆದಿತ್ತು.
ಇದನ್ನೂ ಓದಿ : ಮಾಲಿವುಡ್ ಗೆ ಮರಳಿದ ಮೇಘನಾ ರಾಜ್ ಸರ್ಜಾ: ಸದ್ಯದಲ್ಲೇ ಅನೌನ್ಸ್ ಆಗಲಿದೆ ಕುಟ್ಟಿಮಾ ಹೊಸ ಸಿನಿಮಾ
ಅನುಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ಎಷ್ಟು ಮನಸೆಳೆದಿದ್ದರೂ ಅಂದ್ರೇ ಸೀರಿಯಲ್ ಮುಗಿಯೋ ಮುನ್ನವೇ ಮೇಘಾಗೆ ಸಾಕಷ್ಟು ಸಿನಿಮಾ ಅವಕಾಶಗಳು ಬಂದು ಮನೆಯ ಬಾಗಿಲು ತಟ್ಟಲಾರಂಭಿಸಿದ್ದವು. ಸೀರಿಯಲ್ ಜೊತೆಗೆ ಮೇಘಾ ಶೆಟ್ಟಿ , ಗಣೇಶ್ ಜೊತೆ ತ್ರಿಬಲ್ ರೈಡ್ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಕಿರುತೆರೆಗೆ ವಿದಾಯ ಹೇಳಿದ ಮೇಘಾ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ : Sonu Gowda : ಯಾರೀ ಸೋನು ಗೌಡ ? ಟಿಕ್ ಟಾಕ್ ಸ್ಟಾರ್ ಸೋನುಶ್ರೀನಿವಾಸ್ ಗೌಡ ಅಸಲಿಯತ್ತೇನು ! ಇಲ್ಲಿದೆ Exclusive ಸ್ಟೋರಿ
ಇತ್ತೀಚೆಗೆ ಮೇಘಾ ನಟನೆಯ ಕೈವಾ ಸಿನಿಮಾ ರಿಲೀಸ್ ಆಗಿದ್ದು, ಇದರ ಜೊತೆಗೆ ಈಗ ಮೇಘಾ ಗ್ರಾಮಾಯಣ ಸಿನಿಮಾದಲ್ಲಿ ಯುವಾಗೆ ಜೋಡಿ ಆಗ್ತಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಆಗಿರೋ ನಟಿ ಮೇಘಾ ಶೆಟ್ಟಿ ತಮ್ಮ ಪೋಟೋ ಹಾಗೂ ಹಾಟ್ ಹಾಟ್ ಪೋಟೋಶೂಟ್ ವಿಡಿಯೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ.

ಲಕ್ಷಾಂತರ ಫಾಲೋವರ್ಸ್ ಗಳು ಮೇಘಾ ಪೋಟೋಗಳಿಗೆ ಮನಸೋತಿದ್ದು, ನಟಿಯ ಫೋಟೋಗಳಿಗೆ ಅಭಿಮಾನಿಗಳು ಸಕತ್ ಕಾಮೆಂಟ್ ಮಾಡುತ್ತಾ ಆರಾಧಿಸುತ್ತಿದ್ದಾರೆ. “ಮುದ್ರ ತೀರದ ಮುತ್ತು ಸಿಕ್ಕಿದ ಹಾಗೆ ತಾಜಮಹಲದಲ್ಲಿ ಎದ್ದು ಬಂದ ನೂರಜಾಹನ ಮುಖದಲ್ಲಿ ಮೊನಾಲಿಸಾಳ ನಗು ಕಂಡ ಹಾಗೆ ನೀ ನನ್ನ ಪ್ರೇಮದ ಪಲ್ಲಕ್ಕಿ” ಎಂದು ಅಭಿಮಾನಿಯೊಬ್ಬರು ಚಂದದ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ರಾಜಕೀಯಕ್ಕೆ ನಟ ಸುದೀಪ್ ಎಂಟ್ರಿ : ಕಿಚ್ಚ ಈ ಬಗ್ಗೆ ಹೇಳಿದ್ದೇನು ?
ಕೇವಲ ಆಕ್ಟಿಂಗ್ ಮಾತ್ರವಲ್ಲ ಫಿಟ್ ನೆಸ್ ವಿಚಾರದಲ್ಲೂ ನಟಿ ಮೇಘಾ ಶೆಟ್ಟಿ ಆಕ್ಟಿವ್ ಆಗಿದ್ದು, ಸಖತ್ ವರ್ಕೌಟ್ ಹಾಗೂ ಯೋಗಾಭ್ಯಾಸವನ್ನು ಮೇಘಾ ಶೆಟ್ಟಿ ಮಾಡ್ತಾರೆ. ನಟಿ ಪವಿತ್ರಾ ಗೌಡ ಅವರ ರೆಡ್ ಕಾರ್ಪೆಟ್ ಬೂಟಿಕ್ ನ ಮಾಡೆಲ್ ಕೂಡ ಆಗಿರೋ ಮೇಘಾ ಆಗಾಗ ರೆಡ್ ಬೂಟಿಕ್ ಕ್ರಿಯೇಟಿವ್ ಡ್ರೆಸ್ ಗಳ ಜೊತೆ ರ್ಯಾಂಪ್ ವಾಕ್ ಕೂಡ ಮಾಡ್ತಾರೆ. ಒಟ್ನಲ್ಲಿ ಮೇಘಾ ಶೆಟ್ಟಿ ಸದ್ಯ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿದ್ದು, ಹಾಟ್ ಹಾಟ್ ಅವತಾರದಿಂದಲೇ ಹೆಸರು ಮಾಡ್ತಿದ್ದಾರೆ.
Kaiva Actress Megha Shetty pose White Dress Anu Sirimane Special Photo Shoot