ಹುಡ್ಗಿ ಬೇಕಾ ಬಾಟ್ಲು ಬೇಕಾ” ಅಂತಿದ್ದಾರೆ ಅಂಥೋನಿ ದಾಸನ್. ಬಹಳ ದಿನಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಎಣ್ಣೆ ಸಾಂಗ್ ಒಂದು ಸಾಕಷ್ಟು ಸದ್ದು ಮಾಡ್ತಿದ್ದು, ಕೇಳುಗರಿಗೆ ಕಿಕ್ ಕೊಡುತ್ತಿದೆ. ನವೀನ್ ಸಜ್ಜು ಅವರ “ಎಣ್ಣೆ ನಮ್ದು ಊಟ ನಿಮ್ದು” ಎಂಬ ಎಣ್ಣೆ ಹಾಡಿನ ದೊಡ್ಡ ಹಿಟ್ ನಂತರ ಈ ಹಾಡು ಅದೇ ಹಾದಿಯಲ್ಲಿ ಸೌಂಡ್ ಮಾಡುತ್ತಿದೆ.

ಹೌದು ಸಂಜಯ್ ವದತ್ ಆಕ್ಷನ್ ಕಟ್ ಹೇಳಿರೋ ಕಾಲವೇ ಮೋಸಗಾರ ಸಿನಿಮಾದಲ್ಲಿ ಟಗರು ಖ್ಯಾತಿಯ ಅಂಥೋನಿ ದಾಸನ್ ಹಾಡಿರೋ “ಹುಡ್ಗಿ ಬೇಕಾ… ಬಾಟ್ಲು ಬೇಕಾ” ಸಾಂಗ್ ಈಗ ವೈರಲ್ ಆಗಿದ್ದು, ಪಡ್ಡೆಹೈಕ್ಲ ಬಾಯಲ್ಲಿ ಗುನುಗುತ್ತಿದೆ. ಹೊಸ ಸಂಗೀತ ನಿರ್ದೇಶಕ ಲೋಕೇಶ್ ಕೆ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದು, ಹೊಸತನದ ಹಾಡುಗಳನ್ನು ನಿರೀಕ್ಷೆ ಮಾಡಬಹುದು.

ಭಾವಸ್ಪಂದನ ಪ್ರೊಡಕ್ಷನ್ ನಿರ್ಮಾಣ ಮಾಡಿರೋ ಈ ಕಾಲವೇ ಮೋಸಗಾರ ಸಿನಿಮಾದಲ್ಲಿ ಇದೇ ಬಿಡುಗಡೆ ಮಾಡಿರೋ ಮೊದಲ ಹಾಡಾಗಿದ್ದು, ಬ್ರೇಕ್ ಅಪ್ ಈದ ಹುಡುಗರಿಗೆ ಈ ಸಾಂಗ್ ಅರ್ಪಣೆ ಅಂದೆ ಹೇಳಲಾಗಿದೆ.

Break up anthem of the year ಎಂಬ ಟ್ಯಾಗ್ ಲೈನ್ ನೊಂದಿಗೆ ಈ ವರ್ಷದ ಹಿಟ್ ಹಾಡುಗಳ ಪಟ್ಟಿಗೆ ಸೇರುತ್ತಿದೆ. ಚಿತ್ರ ಸಾಕಷ್ಟು ನಿರೀಕ್ಷೆಗಳೊಂದಿಗೆ ಬಿಡುಗಡೆಗೆ ರೆಡಿಯಿದ್ದು, ಹೊಸಬರ ಪ್ರಯತ್ನ ಬಲು ಜೋರಾಗಿದೆ.

ಟಗರು ಖ್ಯಾತಿಯ ಆಂಥೋನಿ ದಾಸನ್ ಟಗರು ಮತ್ತು ಸಲಗದ ಸೂರಿ ಅಣ್ಣ ಸಾಂಗ್ ನಂತರ ಈ ಹಾಡು ಅಂಥೋನಿ ದಾಸನ್ ಹಿಟ್ ಲಿಸ್ಟ್ ನಲ್ಲಿ ಸೇರ್ಪಡೆಯಾಗಿರೋದು ಖುಷಿಯ ವಿಚಾರ.

ಈ ಹಾಡಿಗೆ ಸ್ವತಃ ನಿರ್ದೇಶಕ ಸಂಜಯ್ ವದತ್ ಸಾಹಿತ್ಯ ಬರೆದಿದ್ದು, ಚಂದನವನಕ್ಕೆ ಮತ್ತೊಬ್ಬ ಪ್ರತಿಭಾವಂತ ಬರಹಗಾರ ಕಮ್ ಡೈರೆಕ್ಟರ್ ಸಿಕ್ಕಂತಾಗಿದೆ.

ಭರತ್ ಸಾಗರ್ ನಾಯಕನಾಗಿ ಕಾಣಿಸಿಕೊಂಡಿದ್ದು ಅವರಿಗೆ ಜೋಡಿಯಾಗಿ ಯಶಸ್ವಿನಿ ರವೀಂದ್ರ ಅಭಿನಯಿಸಿದ್ದಾರೆ. ಇನ್ನುಳಿದಂತೆ ತಾರಾಂಗಣದಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ಶಂಕರ್ ಮೂರ್ತಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಿಂಚಿದ್ದು, ಕುರಿ ಪ್ರತಾಪ್, ಬ್ಯಾಂಕ್ ಜನಾರ್ಧನ್, ವಿಜಯ್ ಚಂದೂರ್, ದರ್ಶನ್ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರ ಕಂಪ್ಲೀಟ್ ಆಗಿದ್ದು, ಅಂದುಕೊಂಡಂತೆ ಆದರೆ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ಸಿನಿಮಾ.
ಕಾಲವೇ ಮೋಸಗಾರ ಸಿನಿಮಾದ ಸೂಪರ್ ಹಿಟ್ ಎಣ್ಣೆ ಸಾಂಗ್ ನೀವೂ ನೋಡಿ…