‘ಕುಷ್ಕ’ ತಿನ್ಸೋಕೆ ರೆಡಿಯಾದ್ರು ಗುರುಪ್ರಸಾದ್

0

ಬಹಳಷ್ಟು ದಿನದಿಂದ ಟೈಟಲ್ ನಿಂದನೇ ಸದ್ದು ಮಾಡಿದ್ದ ಕುಷ್ಕ ಸಿನಿಮಾದ ಇವಾಗ ಟ್ರೈಲರ್ ಬಿಡುಗಡೆ ಮಾಡಿ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ವಿಕ್ರಮ್ ಯೋಗಾನಂದ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾ ಇದೇ ತಿಂಗಳ 13 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ಉಣಬಡಿಸೋದ್ರಲ್ಲಿ ಯಾವುದೇ ಸಂಶಯವಿಲ್ಲ.

ಖ್ಯಾತ ನಿರ್ದೇಶಕ ಗುರು ಪ್ರಸಾದ್ ವಿಶೇಷವಾದ ಪಾತ್ರದಲ್ಲಿ ಮಿಂಚುತ್ತಿದ್ದು, ಚಂದನ್ ಗೌಡ ಮತ್ತು ಸಂಜನ ಆನಂದ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಟ್ರೈಲರ್ ನೋಡಿದ ಪ್ರತಿಯೊಬ್ಬರು ಖುಷಿಪಡುತ್ತಿದ್ದು, ಎಲ್ಲರಲ್ಲೂ ನಿರೀಕ್ಷೆ ಮೂಡಿಸುತ್ತಿದೆ. ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಮತ್ತು ಪಿಎಮ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಈ ಸಿನಿಮಾಕ್ಕೆ ಸಹ ನಿರ್ಮಾಪಕರಾಗಿ ಐರಾ ಮೂವೀಸ್ ಕೈ ಜೋಡಿಸಿದ್ದು, ಸಿನಿಮಾ ಯಶಸ್ಸಿಗೆ ಕಾಯುತಿದ್ದಾರೆ.

ಸಿನಿಮಾದಲ್ಲಿ ಗುರುಪ್ರಸಾದ್, ಚಂದು ಗೌಡ ಮತ್ತು ಸಂಜನಾ ಆನಂದ್ ಜೊತೆ ಡಾ. ಪಾಲ್ ಖ್ಯಾತಿಯ ಕೈಲಾಷ್ ಪಾಲ್, ಶೋಭರಾಜ್, ಮಾಧುರಿ, ಅರುಣ್ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಇತ್ತೀತಿಗೆ ಹೊಸಬರ ಪ್ರಯೋಗಾತ್ಮಕ ಚಿತ್ರಗಳು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದು, ಅದೇ ಸಾಲಿಗೆ ಈ ಸಿನಿಮಾ ಸೇರುವ ನಿರೀಕ್ಷೆ ಇದೆ. ಟ್ರೈಲರ್ ನ ಪ್ರತಿಯೊಂದು ದೃಶ್ಯದಲ್ಲೂ ವಿಕ್ರಮ್ ಯೋಗಾನಂದ್ ಅವರ ಕೆಲ್ಸ ಎದ್ದು ಕಾಣುತ್ತೆ.

ಇದೇ ತಿಂಗಳ 13 ನೇ ತಾರೀಖು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಉತ್ತಮ ಆರಂಭ ಪಡೆದು ಯಶಸ್ಸಿನ ಗುರಿ ಮುಟ್ಟಲಿ ಎಂಬುದೇ ನ್ಯೂಸ್ ನೆಕ್ಸ್ಟ್ ಆಶಯ.

Leave A Reply

Your email address will not be published.