ಸೋಮವಾರ, ಜೂನ್ 16, 2025
HomeCinema'ನಾನು ಮಾದಕ ವ್ಯಸನಿಯಾಗಿದ್ದೆ' : ವೈರಲ್ ಆಯ್ತು ಕಂಗನಾ ವಿಡಿಯೋ

‘ನಾನು ಮಾದಕ ವ್ಯಸನಿಯಾಗಿದ್ದೆ’ : ವೈರಲ್ ಆಯ್ತು ಕಂಗನಾ ವಿಡಿಯೋ

- Advertisement -

ಬಾಲಿವುಡ್ ನಟಿ ಕಂಗನಾ ರಾಣಾವತ್ ಸದ್ಯ ದೇಶಾದ್ಯಂತ ಭಾರಿ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆ ಕಂಗನಾ ಮನೆಯನ್ನು ದ್ವಂಸ ಮಾಡಿತ್ತು. ಸಾಲದಕ್ಕೆ ಕಂಗನಾ ಹೆಸರು ಡ್ರಗ್ಸ್ ದಂಧೆಯಲ್ಲಿಯೂ ಕೇಳಿಬಂದಿದೆ.

ಈ ನಡುವಲ್ಲೇ ಕಂಗನಾ ರಾಣಾವತ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ವಿಡಿಯೋದಲ್ಲಿ ಕಂಗನಾ ತಾನೇ ಸ್ವತಃ ಡ್ರಗ್ಸ್ ಎಡಿಕ್ಟ್ ಆಗಿದ್ದೇನೆ ಅಂತಾ ಹೇಳಿಕೆ ನೀಡಿರೋದು ಚರ್ಚೆಯನ್ನು ಹುಟ್ಟು ಹಾಕಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಅನುಮಾನ ಮೂಡುವಂತೆ ಮಾಡಿದ್ದು, ಕಂಗನಾ ರಾಣಾವತ್. ಬಾಲಿವುಡ್ ನ ಹಲವರ ಹೆಸರುಗಳನ್ನು ರಿವೀಲ್ ಮಾಡಿದ್ದರು. ಸುಶಾಂತ್ ಸಾವಿಗೂ ಶಿವಸೇನೆಗೂ ಲಿಂಕ್ ಇದೆ ಅಂತಾನೂ ಹೇಳಿಕೆ ನೀಡಿದ್ದರು.

ಇದೆಲ್ಲದರ ಬೆನ್ನಲ್ಲೇ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಇದೀಗ ಡ್ರಗ್ಸ್ ಮಾಫಿಯಾದ ಜೊತೆಗೆ ಲಿಂಕ್ ಇರೋದು ಬಯಲಾಗಿದೆ. ಮಾತ್ರವಲ್ಲ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಈ ನಡುವಲ್ಲೇ ಕಂಗನಾ ಹೇಳಿಕೆ ರಾದ್ದಾಂತ ಸೃಷ್ಟಿಸಿದೆ.

ಬಾಲಿವುಡ್​ನಲ್ಲಿನ ನೆಪೋಟಿಸಂ ಬಗ್ಗೆ ಹರಿಹಾಯ್ದಿದ್ದ ಕಂಗನಾ, ಇದೀಗ ಬಾಲಿವುಡ್​ನಲ್ಲಿನ ಡ್ರಗ್​ ವ್ಯಸನದ ಬಗ್ಗೆ ಮಾತನಾಡಿದ್ದರು. ಆದರೀಗ ಸ್ವತಃ ನಾನೇ ಡ್ರಗ್​ ವ್ಯಸನಿಯಾಗಿದ್ದೆ ಎಂದು ಕಂಗನಾ ನೀಡಿದ್ದ ಹೇಳಿಕೆಯ ವಿಡಿಯೋ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

‘ಇದು ನಿಜ, ನಾನು ಮನೆಯಿಂದ ಹೊರಬಂದೆ, ಎರಡು ವರ್ಷದಲ್ಲಿ ಸಿನಿಮಾ ಸ್ಟಾರ್ ಆದೆ, ಡ್ರಗ್​ ವ್ಯಸನಿಯಾದೆ, ನನ್ನ ಜೀವನದಲ್ಲಿ ಒಂದಷ್ಟು ಘಟನೆಗಳು ನಡೆದವು. ಒಂದಷ್ಟು ಜನರ ಕೈಯೊಳಗೆ ಸಿಲುಕಿಹಾಕಿಕೊಂಡಿದ್ದೆ. ಆದರೂ ನಾನು ಅದೆಲ್ಲವನ್ನು ಎದುರಿಸಿದ್ದೇನೆ. ವಿಚಾರ ಮಾಡಿ ನಾನು ಎಷ್ಟು ಡೇಂಜರ್​ ಎಂದು’ ಹೇಳಿಕೆ ನೀಡಿದ್ದ ವಿಡಿಯೋ ಸದ್ಯ ಚರ್ಚೆಗೆ ಕಾರಣವಾಗಿದೆ.

ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಸಾಲು ಸಾಲು ನಟರ ಹೆಸರು ಕೇಳಿಬರುತ್ತಿರುವ ನಡುವಲ್ಲೇ ತಾನು ಡ್ರಗ್ಸ್ ಟೆಸ್ಟ್ ಗೆ ಒಳಪಡುವುದಕ್ಕೆ ಸಿದ್ದವಾಗಿದ್ದೇನೆ. ತನ್ನ ಮೊಬೈಲ್ ಕರೆಗಳ ಮಾಹಿತಿಯನ್ನೂ ನೀಡುತ್ತೇನೆ. ಡ್ರಗ್ಸ್ ಮಾಫಿಯಾದಲ್ಲಿ ತನಗೆ ಲಿಂಕ್ ಇರೋದು ಖಚಿತವಾದ್ರೆ ಮುಂಬೈ ತೊರೆಯುವುದಾಗಿಯೂ ಕಂಗನಾ ಹೇಳಿಕೊಂಡಿದ್ದಾರೆ.

ಇದೀಗ ಸ್ವತಃ ಕಂಗನಾ ತಾನೇ ಡ್ರಗ್ಸ್ ಎಡಿಕ್ಟ್ ಆಗಿದ್ದೇನೆ ಅಂತಾ ಹೇಳಿಕೆ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಸಿಸಿಬಿ ವಶದಲ್ಲಿರುವ ರಿಯಾ ಚಕ್ರವರ್ತಿ ಕೂಡ ಈಗಾಗಲೇ 15 ಮಂದಿಯ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಗನಾ ಸೇರಿದಂತೆ 15 ಮಂದಿಗೂ ಸಿಸಿಬಿ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಹೇಳುವ ಸಾಧ್ಯತೆಯಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular