ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ( Kannada Bigg Boss ). ಹಿಂದಿಯಲ್ಲಿ ಆರಂಭವಾದ ಶೋ ಈಗ ಭಾರತದ ಬಹುತೇಕ ಚಿತ್ರರಂಗದಲ್ಲಿ ಜನಪ್ರಿಯ ಶೋ ಎನ್ನಿಸಿಕೊಂಡಿದೆ. ಕನ್ನಡದಲ್ಲಂತೂ ಹಲವು ಪ್ರತಿಭೆಗಳಿಗೆ ವೇದಿಕೆ ಒದಗಿಸಿದ ಬಿಗ್ ಬಾಸ್ ಮತ್ತೊಮ್ಮೆ ತೆರೆಗೆ ಬರಲು ಸಿದ್ಧವಾಗುತ್ತಿದ್ದು ಬಿಗ್ ಬಾಸ್ ಸೀಸನ್ 9 (BIGG BOSS Sudeep) ಯಾವಾಗ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು ಕಿಚ್ಚ ಸುದೀಪ್ ಶೋ ಆರಂಭ ಯಾವಾಗ ಎಂಬ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಬಿಗ್ ಬಾಸ್ ಸೀಸನ್ 8 ನೊರೆಂಟು ಅಡೆತಡೆಗಳು, ಕೊರೋನಾ ಲಾಕ್ ಡೌನ್ ಬಳಿಕವೂ ಪೂರ್ಣಗೊಂಡಿತ್ತು.ಕಳೆದ ಅಗಸ್ಟ್ ನಲ್ಲಿ ಸೀಸನ್ ಕೊನೆಗೊಂಡು ಮಂಜುಪಾವಗಡ್ ಸೀಸನ್ ೮ ರ ಟ್ರೊಫಿ ಗೆದ್ದಿದ್ದರು. ಇದಾದ ಬಳಿಕ ಎರಡೇ ತಿಂಗಳಲ್ಲಿ ಸೀಸನ್ 9 ಆರಂಭವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಶೋ ಆರಂಭವಾಗಿರಲಿಲ್ಲ. ಇದೀಗ ಮತ್ತೆ ಶೋ ಯಾವಾಗ ಆರಂಭ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರೋ ನಟ ಸುದೀಪ್ 2022 ರ ಜನವರಿ ವೇಳೆಗೆ ಕನ್ನಡ ಬಿಗ್ ಬಾಸ್ ಸೀಸನ್ 9 ಆರಂಭವಾಗಲಿದೆ ಎಂಬ ಸುಳಿವು ನೀಡಿದ್ದಾರೆ.
ಸೀಸನ್ 8 ಕೊರೋನಾ ಲಾಕ್ ಡೌನ್ ಕಾರಣಕ್ಕೆ ಅರ್ಧದಲ್ಲೇ ಸ್ಥಗಿತಗೊಂಡಿತ್ತು.75 ದಿನಗಳಿಗೆ ಸ್ಥಗಿತಗೊಂಡಿದ್ದ ಶೋ ಪುನರಾರಂಭಗೊಂಡು ವಿಭಿನ್ನತೆಗೆ ಸಾಕ್ಷಿಯಾಗಿದ್ದಲ್ಲದೇ ಮತ್ತಷ್ಟು ಟಿ.ಆರ್.ಪಿ ಗಳಿಸಿತ್ತು. ಈಗ ಮತ್ತೆ ಜನವರಿಯಲ್ಲಿ ಶೋ ಆರಂಭವಾಗಲಿದ್ದು ಇದಕ್ಕಾಗಿ ಈಗಾಗಲೇ ಶೋ ಆಯೋಜಕರು ಹಲವು ಸೆಲೆಬ್ರೆಟಿಗಳನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಸೀಸನ್ 8 ಕೊನೆಯ ಸೀಸನ್ ಮುಂದಿನ ಶೋಗಳಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳುವುದಿಲ್ಲ ಎಂಬ ಗಾಸಿಪ್ ಗಳು ಕೇಳಿಬಂದಿದ್ದವು.ಆದರೆ ಈಗ ಮತ್ತೆ ಸುದೀಪ್ ಶೋ ಆರಂಭದ ಮುನ್ಸೂಚನೆ ನೀಡಿರೋದರಿಂದ ಸುದೀಪ್ ಸೀಸನ್ 9 ರ ನಿರೂಪಣೆಗೂ ಬರೋದು ಫಿಕ್ಸ್ ಎನ್ನಲಾಗಿದೆ. ಇನ್ನು ರಾಜ್ಯದಲ್ಲಿ ಮತ್ತೆ ಓಮೈಕ್ರಾನ್ ಹಾಗೂ ಕೊರೋನಾ ಮೂರನೆ ಅಲೆಯ ಭೀತಿ ಎದುರಾಗಿದ್ದು ಜನವರಿ ವೇಳೆಗೆ ಮತ್ತಷ್ಟು ಕೊರೋನಾ ಪ್ರಕರಣಗಳು ಹೆಚ್ಚಬಹುದು ಎಂದು ತಜ್ಞರು ಅಭಿಪ್ರಾಯಿಸುತ್ತಿದ್ದಾರೆ.
ಹೀಗಾಗಿ ಮತ್ತೆ ಮನೋರಂಜನೆ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆನಿರ್ಭಂದ ಹೇರಿಕೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಜನವರಿಯಿಂದ ಬಿಗ್ ಬಾಸ್ ಆರಂಭವಾಗೋದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆಯೂ ಇದೆ. ಏನೇ ಅಗಲಿ ಮತ್ತೊಮ್ಮೆ ಒಂಟಿಮನೆಯ ಆಟಕ್ಕೆ ಆಯೋಜಕರು ಸಿದ್ಧವಾಗಿದ್ದು ಈ ಭಾರಿ ಶೋದಲ್ಲಿ ಸ್ಪರ್ಧಿ ಯಾರೆಲ್ಲ ಇರಬಹುದು ಅಂತ ಬಿಗ್ ಬಾಸ್ ಪ್ರಿಯರು ಲೆಕ್ಕ ಹಾಕ್ತಿದ್ದಾರೆ.
ಇದನ್ನು ಓದಿ : ಬಿಗ್ ಬಾಸ್ ಮನೆಯಲ್ಲಿ ಖುಲ್ಲಂಖುಲ್ಲ ಸೆಕ್ಸ್! ಸ್ಪರ್ಧಿ ಹೇಳಿದ್ರು ಶಾಕಿಂಗ್ ಸತ್ಯ!!
ಇದನ್ನೂ ಓದಿ : BIGG BOSS OTT : ಇನ್ಮುಂದೆ ಬೆತ್ತಲಾಗ್ತಾರೆ ಬಿಗ್‌ಬಾಸ್ ಸ್ಪರ್ಧಿಗಳು ..! ಬಿಗ್‌ಬಾಸ್ ವೀಕ್ಷಿಸೋ ಪೋಷಕರೇ ಹುಷಾರ್
( Kannada Bigg Boss Season 9 start : Sudeep hint)