ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋಗೆ ಅದ್ದೂರಿ ತೆರೆ ಬಿದ್ದಿದೆ. ಪಂಚಿಂಗ್ ಡೈಲಾಗ್, ಭರ್ಜರಿ ಮನರಂಜನೆಯ ಮೂಲಕ ಖ್ಯಾತಿಗಳಿಸಿದ ಮಂಜು ಪಾವಗಡ ಬಿಗ್‌ಬಾಸ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಬಲ ಪೈಪೋಟಿ ನೀಡಿದ್ದ ಉಡುಪಿ ಮೂಲದ ಕೆ.ಪಿ.ಅರವಿಂದ್ ರನ್ನರ್ಸ್ ಅಪ್ ಆಗಿ ಮೂಡಿಬಂದಿದ್ದಾರೆ.
ಬಿಗ್‍ಬಾಸ್ ಫೈನಲ್ ನ ಟಾಪ್ 5 ನಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ ಹಾಗೂ ದಿವ್ಯ ಉರುಡುಗ ಮನೆಯಿಂದ ಹೊರ ನಡೆದಿದ್ರು. ಅಂತಿಮವಾಗಿ ಮಂಜು, ಮತ್ತು ಅರವಿಂದ್ ಮಧ್ಯೆ ಮೊದಲ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ಎಂದು ಘೋಷಣೆ ಮಾಡಿದರು. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ಆರಂಭದಿಂದಲೂ ನಗುವಿನ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದ ಮಂಜು ಪಾವಡಗ ಟಾಸ್ಕ್ ನಲ್ಲಿಯೂ ಹೆಚ್ಚು ಸಕ್ರೀಯವಾಗಿಯೇ ಪಾಲ್ಗೊಂಡಿದ್ದರು. ಮಾತ್ರವಲ್ಲ ವೀಕ್ಷಕರಿಂದ ಅತೀ ಹೆಚ್ಚು ಓಟ್ ಪಡೆಯುವ ಮೂಲಕ ಗೆಲವು ಧಕ್ಕಿಸಿಕೊಂಡಿದ್ದಾರೆ.
ಮಂಜುಪಾವಗಡ ಬಿಗ್‍ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ನಲ್ಲಿ ದಿವ್ಯಾ ಸುರೇಶ್ ಜತೆ ಮಂಜು ಹೆಚ್ಚು ಆಪ್ತವಾಗಿದ್ದರು. ಹೀಗಾಗಿ ಅವರಿಗೆ ಇದು ಗೇಮ್ ಆಡಲು, ಮನರಂಜನೆ ನೀಡುವಲ್ಲಿ ಸ್ವಲ್ಪ ತೊಂದರೆ ಆಗಿತ್ತು. ಆದರೆ, ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲೇ ಎಲ್ಲರ ಜೊತೆ ಬೆರೆಯಲು ಆರಂಭಿಸಿದ್ದು ಮಂಜು ಅವರಿಗೆ ನೆರವಾಗಿದೆ. ತಮ್ಮ ಜೊತೆ ಇತರರ ವಿರೋಧ ವ್ಯಕ್ತವಾಗಿದ್ದರೂ ಕೂಡ ತಲೆ ಕೆಡಿಸಿಕೊಳ್ಳದ ಮಂಜು ಗೆಲುವನ್ನು ಧಕ್ಕಿಸಿಕೊಂಡಿದ್ದಾರೆ.